ETV Bharat / bharat

IAS ಅಧಿಕಾರಿ ಮಗಳೊಂದಿಗೆ ಲವ್​ ಜಿಹಾದ್​.. ಗಾಜಿಯಾಬಾದ್​ನಲ್ಲಿ ಪ್ರಕರಣ ದಾಖಲು - ಗಾಜಿಯಾಬಾದ್​ನಲ್ಲಿ ಲವ್ ಜಿಹಾದ್​

ನನ್ನ ಮಗಳ ಜೊತೆ ಲವ್ ಜಿಹಾದ್​ ಹೆಸರಿನಲ್ಲಿ ಮೋಸ ಮಾಡಲಾಗಿದೆ ಎಂದು ಐಎಎಸ್​​ ಅಧಿಕಾರಿಯೊಬ್ಬರು ಗಾಜಿಯಾಬಾದ್​​ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

love jihad ghaziabad
love jihad ghaziabad
author img

By

Published : May 4, 2022, 9:35 PM IST

ನವದೆಹಲಿ/ಗಾಜಿಯಾಬಾದ್: ತನ್ನ ಮಗಳ ಮೇಲೆ ಲವ್​ ಜಿಹಾದ್ ನಡೆಸಲಾಗಿದೆ ಎಂದು ಆರೋಪಿಸಿ ಐಎಎಸ್​​ ಅಧಿಕಾರಿಯೊಬ್ಬರು ಗಾಜಿಯಾಬಾದ್​​ನಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ದೆಹಲಿಯ ಪಾರ್ಲಿಮೆಂಟ್​ ಸ್ಟ್ರೀಟ್​ನಲ್ಲಿರುವ ಸೆಕ್ರೆಟರಿಯೇಟ್​​ನಲ್ಲಿ ಅಧಿಕಾರಿ ಕೆಲಸ ಮಾಡ್ತಿದ್ದು, ಯುವಕನೊಬ್ಬನ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

IAS ಅಧಿಕಾರಿ ಮಗಳೊಂದಿಗೆ ಲವ್​ ಜಿಹಾದ್​ ಪ್ರಕರಣ

ತನ್ನ ಮಗಳೊಂದಿಗೆ ಲವ್​ ಜಿಹಾದ್ ನಡೆಸಲಾಗಿದೆ ಎಂದು ಆರೋಪ ಮಾಡಿರುವ ಐಎಎಸ್ ಅಧಿಕಾರಿ, ಅಬ್ದುಲ್​ ರೆಹಮಾನ್​ ಎಂಬಾತನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಅಧಿಕಾರಿ ನೀಡಿರುವ ದೂರಿನ ಆಧಾರದ ಮೇಲೆ ಆತನ ವಿರುದ್ಧ ಪೊಲೀಸರು ವಂಚನೆ ಮಾಡಿರುವ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮಗಳು ಮೀರತ್​​ನಲ್ಲಿ ವಾಸವಾಗಿರುವ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದು, ಲವ್​ ಜಿಹಾದ್​ ಹೆಸರಿನಲ್ಲಿ ಆಕೆ ಜೊತೆ 2017ರಲ್ಲಿ ಮದುವೆ ಮಾಡಿಕೊಂಡಿದ್ದಾಗಿ ಆರೋಪ ಮಾಡಿದ್ದಾರೆ. ಜೊತೆಗೆ ಅವರು ಮದುವೆ ನೋಂದಣಿ ಮಾಡಿಕೊಂಡಿರುವ ಸಂಸ್ಥೆ ವಿರುದ್ಧ ಸಹ ದೂರು ದಾಖಲು ಮಾಡಿದ್ದಾರೆ.

love jihad ghaziaba
ಪ್ರಕರಣ ದಾಖಲು ಮಾಡಿದ ಐಎಎಸ್​ ಅಧಿಕಾರಿ

ಇದನ್ನೂ ಓದಿ: ತಾಯಿಗೆ ಚಿಕಿತ್ಸೆ ಕೊಡಿಸಲು ಬಂದ ಯುವತಿಗೆ ಆಸ್ಪತ್ರೆ ಸಿಬ್ಬಂದಿ ಮೇಲೆ ಲವ್​... ಮುಂದೇನಾಯ್ತು!?

ತಮ್ಮ ಪುತ್ರಿ ಜೊತೆ ಮದುವೆ ಮಾಡಿಕೊಂಡ ಬಳಿಕ ತಮ್ಮ ಮೇಲೆ ಹಲ್ಲೆ ಸಹ ನಡೆಸಲಾಗಿದ್ದು, ಕುದಿಯುವ ಎಣ್ಣೆಯಿಂದ ದಾಳಿ ನಡೆಸಿದೆ ಎಂದು ಆರೋಪ ಮಾಡಿದ್ದಾರೆ. ತನ್ನ ಮಗಳ ಮೇಲೆ ಯುವಕ ಹಲ್ಲೆ ಮಾಡಿದ್ದರಿಂದ ಮುಖದ ಮೇಲೆ ಅನೇಕ ರೀತಿಯ ಗಾಯಗಳಾಗಿದ್ದು, ಇದರಿಂದ ಆಕೆ ಸೌಂದರ್ಯ ಕಳೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಿಕೊಳ್ಳಲಾಗಿದ್ದು, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್​ ಅಧಿಕಾರಿ ಮುನಿರಾಜು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.