ಶ್ರೀನಗರ: ಐಎಎಸ್ ಅಧಿಕಾರಿ ಟೀನಾ ದಾಬಿ ಅವರಿಂದ ಪರಿತ್ಯಕ್ತಗೊಂಡಿದ್ದ ಐಎಎಸ್ ಅಧಿಕಾರಿ ಅಥರ್ ಅಮೀರ್ ಖಾನ್ ಇದೀಗ ವೈದ್ಯೆಯೊಂದಿಗೆ ವೈವಾಹಿಕ ಜೀವನಕ್ಕೆ ಎರಡನೇ ಬಾರಿಗೆ ಕಾಲಿಟ್ಟಿದ್ದಾರೆ.
ಐಎಎಸ್ ಟಾಪರ್ ಅಧಿಕಾರಿ ಅಥರ್ ಅಮೀರ್ ಖಾನ್ ಅವರು ವೈದ್ಯೆ, ಮಾಡೆಲ್ ಆಗಿರುವ ಡಾ.ಮೆಹ್ರೀನ್ ಖಾಜಿ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಅದರ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಈ ಸುಂದರ ಜೋಡಿಗೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="
">
ಮೂಲತಃ ಕಾಶ್ಮೀರದವರಾದ ಅಥರ್ ಮತ್ತು ಮೆಹ್ರೀನ್ ಅವರು ಕೆಲ ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದರು. ಬಳಿಕ ವಿವಾಹವಾಗಲು ನಿರ್ಧರಿಸಿ ಅಕ್ಟೋಬರ್ 1 ರಂದು ಮದುವೆ ಬಂಧನಕ್ಕೆ ಒಳಗಾದರು. ವಧು ಮತ್ತು ವರ ಇಬ್ಬರೂ ತಮ್ಮ ಮದುವೆ ಸಮಾರಂಭದ ಸುಂದರ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಐಎಎಸ್ ಅಧಿಕಾರಿ ಅಥರ್ ಅವರ ಪತ್ನಿ ಡಾ.ಮೆಹ್ರೀನ್ ಅವರು ನವದೆಹಲಿಯ ರಾಜೀವ್ ಗಾಂಧಿ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ ವೈದ್ಯರಾಗಿದ್ದಾರೆ. ಈ ಹಿಂದೆ ಫ್ಯಾಷನ್ ಮಾಡೆಲ್ ಆಗಿಯೂ ಕೆಲಸ ಮಾಡಿದ್ದ ಮೆಹ್ರೀನ್ ಇನ್ಸ್ಟಾಗ್ರಾಮ್ನಲ್ಲಿ 3 ಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿದ್ದಾರೆ.
ಅಥರ್ ಅವರು 2015 ರ ಯಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೆ 2 ನೇ ರ್ಯಾಂಕ್ ಗಳಿಸಿದ್ದರು. ಮೊದಲ ಟಾಪರ್ ಆಗಿದ್ದ ಟೀನಾ ದಾಬಿ ಅವರನ್ನು 2018 ರಲ್ಲಿ ವಿವಾಹವಾಗಿದ್ದರು. ಇದು ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಬಳಿಕ ಇಬ್ಬರೂ ಒಪ್ಪಿಗೆಯಿಂದ ಬೇರೆಯಾದರು. ವಿಚ್ಛೇದನದ ನಂತರ ಟೀನಾ ದಾಬಿ ಈ ವರ್ಷದ ಏಪ್ರಿಲ್‌ನಲ್ಲಿ ರಾಜಸ್ಥಾನ ಕೇಡರ್‌ನ ಐಎಎಸ್ ಅಧಿಕಾರಿ ಪ್ರದೀಪ್ ಗವಾಂಡೆ ಅವರನ್ನು ವಿವಾಹವಾಗಿದ್ದಾರೆ.
ಓದಿ: ಕಾಶ್ಮೀರ ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಶವವಾಗಿ ಪತ್ತೆ: ಕೊಲೆ ಶಂಕೆ