ಲಖನೌ (ಉತ್ತರಪ್ರದೇಶ): ಇಲ್ಲಿನ ಐಎಎಸ್ ಅಧಿಕಾರಿ ಅಖಿಲೇಶ್ ಮಿಶ್ರಾ ರಸ್ತೆಯಲ್ಲಿ ತರಕಾರಿ ಮಾರುವ ಫೇಸ್ ಬುಕ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಐಎಎಸ್ ಅಧಿಕಾರಿ ಅಖಿಲೇಶ್ ಮಿಶ್ರಾ ಉತ್ತರ ಪ್ರದೇಶದ ಸಾರಿಗೆ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿದ್ದಾರೆ.
ಅಖಿಲೇಶ್ ಯಾದವ್ ರಸ್ತೆಬದಿ ತರಕಾರಿ ಮಾರುತ್ತಿರುವ ಫೋಟೋಗಳನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಲಾಗಿತ್ತು. ಈ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿವೆ. ಅಧಿಕಾರಿ ತನ್ನ ಫೇಸ್ಬುಕ್ ಪೋಸ್ಟ್ ಬಗ್ಗೆ ಈ ಟಿವಿ ಭಾರತದ ಜತೆ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕತ್ತಲೆಯಲ್ಲಿಟ್ಟು ₹ 1,500 ಆಸ್ತಿ ಪತ್ರಕ್ಕೆ ಸಹಿ ವಿಚಾರ.. ರಾಜಕುಮಾರಿ ಅಂಬಾಲಿಕಾ ಪರ ತೀರ್ಪು
‘ನಾನು ನಿನ್ನೆ ಅಧಿಕೃತ ಕೆಲಸಕ್ಕಾಗಿ ಪ್ರಯಾಗ್ರಾಜ್ಗೆ ಹೋಗಿದ್ದೆ. ಹಿಂತಿರುಗುವಾಗ ತರಕಾರಿ ಮಾರುತ್ತಿದ್ದ ಮಾರ್ಕೆಟ್ನಲ್ಲಿ ವಾಹನ ನಿಲ್ಲಿಸಿದೆ. ಈ ವೇಳೆ, ವೃದ್ಧೆಯೊಬ್ಬಳು ತನ್ನ ಅಂಗಡಿ ನೋಡಿಕೊಳ್ಳಿ ಎಂದು ಮನವಿ ಮಾಡಿದಳು. ಸ್ವಲ್ಪ ಸಮಯದವರೆಗೆ ನಾನು ಅಂಗಡಿಯಲ್ಲಿ ಕುಳಿತಿದ್ದೆ. ಅಷ್ಟರಲ್ಲಿ ಗ್ರಾಹಕರು ಬಂದರು, ವ್ಯಾಪಾರ ಮಾಡಿದೆ. ಕೆಲ ಆತ್ಮೀಯರು ಸ್ನೇಹಿತರು ಈ ದೃಶ್ಯವನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ನಾನು ಫೇಸ್ಬುಕ್ನಲ್ಲಿ ಈ ಫೋಟೋಗಳನ್ನು ನೋಡಿದ ಡಿಲೀಟ್ ಮಾಡಿಸಿದೆ’ ಎಂದರು.