ಪಲಾಮು(ಜಾರ್ಖಂಡ್): ವ್ಯಕ್ತಿ ತನ್ನ ಸ್ಥಾನ ಮತ್ತು ಅಧಿಕಾರದಿಂದ ದೊಡ್ಡವನಾಗುವುದಿಲ್ಲ, ಅವನು ತನ್ನ ನಡವಳಿಕೆಯಿಂದ ದೊಡ್ಡವನಾಗುತ್ತಾನೆ ಎಂಬ ಮಾತಿದೆ. ಇಲ್ಲಿನ ಐಎಎಸ್ ಅಧಿಕಾರಿಯೊಬ್ಬರು ವರ್ಗಾವಣೆಯಾಗಿ ತೆರಳುವಾಗ ತಮ್ಮ ಕಚೇರಿಯ ಸೇವಕನ ಕಾಲು ಮುಟ್ಟಿ ಆಶೀರ್ವಾದ ಪಡೆದು ಇತರರಿಗೆ ಮಾದರಿಯಾಗಿದ್ದಾರೆ. ಐಎಎಸ್ ಅಧಿಕಾರಿ ಎ ದೊಡ್ಡೆ ಅವರನ್ನು ಪಲಾಮು ಜಿಲ್ಲೆಯಿಂದ ದುಮ್ಕಾ ಜಿಲ್ಲೆಗೆ ವರ್ಗಾಯಿಸಲಾಗಿದೆ.
ಎ ದೊಡ್ಡೆ ತಮ್ಮ ಅಧಿಕಾರವನ್ನು ಐಎಎಸ್ ಅಧಿಕಾರಿ ಶಶಿರಂಜನ್ ರವರಿಗೆ ಇಂದು ಹಸ್ತಾಂತರಿಸಿದರು. ನಂತರ ತಮ್ಮ ಕಚೇರಿಯಲ್ಲಿ ಸೇವಕನಾಗಿರುವ ನಂದಲಾಲ್ ಅವರ ಪಾದ ಮುಟ್ಟಿ ಆಶೀರ್ವಾದ ಪಡೆದು ಭಾವುಕರಾದರು. ನನ್ನ ತಂದೆ ಕೂಡ ಹಿಂದೆ ಸೇವಕರಾಗಿ ಕೆಲಸ ಮಾಡುತ್ತಿದ್ದರು, ನಂದಲಾಲ್ ಅವರು ತಮ್ಮ ತಂದೆಯ ವಯಸ್ಸಿನವರು. ಅವರು ಪ್ರಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆ ಎ.ದೊಡ್ಡೆ ಅವರು ತಮ್ಮ ಕಚೇರಿಗೆ ಹೊಸದಾಗಿ ನಿಯೋಜನೆಗೊಂಡ ಮೂವರು ಸೇವಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಇದಕ್ಕೂ ಮುನ್ನ ಐಎಎಸ್ ಅಧಿಕಾರಿಗಳಾದ ಎ ದೊಡ್ಡೆ, ಪಲಾಮು ನೂತನ ಡಿಸಿ ಶಶಿರಂಜನ್ ಮತ್ತು ಡಿಡಿಸಿ ರವಿ ಆನಂದ್ ಒಟ್ಟಿಗೆ ಕಚೇರಿಗೆ ಆಗಮಿಸಿದರು. ಶಶಿರಂಜನ್ ಅವರು ಇಂದು ಪಲಾಮು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಶಶಿರಂಜನ್ ಅವರನ್ನು ಈ ಹಿಂದೆ ಖುಂಟಿ ಜಿಲ್ಲೆಯ ಡಿಸಿಯಾಗಿ ಕಾರ್ಯನಿರ್ವಹಿಸಿದ್ದರು. ಈ ವೇಳೆ ಪಲಾಮು ಮಾಜಿ ಡಿಸಿ ಎ ದೊಡ್ಡೆ ಅವರು ಮಾತನಾಡಿ, ಪಲಾಮು ಜಿಲ್ಲೆಯ ಡಿಸಿಯಾಗಿ ಸಾಕಷ್ಟು ಅನುಭವ ಗಳಿಸಿದ್ದೇನೆ ಎಂದರು.
ಪಲಾಮು ಜಿಲ್ಲೆಯ ನೂತನ ಡಿಸಿ ಶಶಿರಂಜನ್ ಮಾತನಾಡಿ, ಜಿಲ್ಲಾಡಳಿತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಅಭಿವದ್ಧಿ ಕಾರ್ಯಗಳನ್ನು ಮಾಡುತ್ತಿದೆ. ನಾನು ಸಾರ್ವಜನಿಕರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ಜಿಲ್ಲೆಯ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಈ ವೇಳೆ ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಪಕ್ಕದ ಮನೆ ಆಂಟಿ ಜೊತೆ ಯುವತಿ ಲವ್ವಿಡವ್ವಿ.. ಗಂಡನ ಬಿಟ್ಟು ಓಡಿ ಹೋದ ಪತ್ನಿ!!
ನಿವೃತ್ತ ಡಿಜಿಪಿಗೆ ರೋಪ್ ಪುಲ್ಲಿಂಗ್ ಗೌರವ ಸಲ್ಲಿಸಿದ ಐಪಿಎಸ್ ಅಧಿಕಾರಿಗಳು: ಇತ್ತೀಚಿಗೆ, ತಮಿಳುನಾಡು ಕಾನೂನು ಮತ್ತು ಸುವ್ಯವಸ್ಥೆ ಡಿಜಿಪಿ ಸಿ.ಸೈಲೇಂದ್ರ ಬಾಬು ಅವರು ಜೂನ್ 30ರಂದು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದರು. ತಮಿಳುನಾಡು ಪೊಲೀಸ್ ಇಲಾಖೆಯಲ್ಲಿ ಬರೋಬ್ಬರಿ 36 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈಲೇಂದ್ರ ಅವರನ್ನು ಕಾರಿಗೆ ಹಗ್ಗ ಕಟ್ಟಿ ಎಳೆದುಕೊಂಡು ಬರುವ ಮೂಲಕ ಗೌರವ ಸಲ್ಲಿಸಿತ್ತು.
ಈ ವೇಳೆ ಹಾಲಿ ಡಿಜಿಪಿ ಶಂಕರ್ ಜಿವಾಲ್, ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಐಪಿಎಸ್ ಸೇರಿದಂತೆ ಹಲವು ಐಪಿಎಸ್ ಅಧಿಕಾರಿಗಳು ಕಾರನ್ನು ಹಗ್ಗ ಕಟ್ಟಿ ಎಳೆದುಕೊಂಡು ಡಿಜಿಪಿ ಕಚೇರಿವರೆಗೆ ಕರೆ ತಂದಿದ್ದರು. ಈ ಕಾರಿನಲ್ಲಿ ನಿವೃತ್ತ ಡಿಜಿಪಿ ಸಿ.ಸೈಲೇಂದ್ರ ಬಾಬು ಮತ್ತು ಅವರ ಪತ್ನಿ ಕುಳಿತಿದ್ದರು.