ಶ್ರೀನಗರ(ಜಮ್ಮು-ಕಾಶ್ಮೀರ): ಬುಧವಾರ ಸಂಜೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಇಸ್ರೇಲಿ ಪ್ರಜೆಯಾಗಿರುವ ಪ್ರವಾಸಿಗ ಪ್ನಿನಾ ಕುಪರ್‌ಮ್ಯಾನ್ ಅವರನ್ನು ಏರ್ ಫೋರ್ಸ್ ಸ್ಟೇಷನ್ ಲೇಹ್ ಮೂಲದ ಹೆಲಿಕಾಪ್ಟರ್ ಘಟಕದ ಪೈಲಟ್‌ಗಳು ಝನ್ಸ್‌ಕರ್ ಕಣಿವೆಯ ಹಂಗ್‌ಕರ್ ಎಂಬ ಹಳ್ಳಿಯಿಂದ ಸ್ಥಳಾಂತರಿಸಿದ್ದಾರೆ.
ಪ್ರವಾಸಿಗನನ್ನು ಇಸ್ರೇಲಿ ಮೂಲದ ಪ್ನಿನಾ ಕುಪರ್‌ಮ್ಯಾನ್ ಎಂದು ಗುರುತಿಸಲಾಗಿದೆ. ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಾಹಿತಿ ಅರಿತ ವಾಯುಪಡೆ ಅವರನ್ನು ರಕ್ಷಿಸುವ ಕೆಲಸ ಮಾಡಿದೆ. ಭಾರತೀಯ ವಾಯುಪಡೆ (ಐಎಎಫ್) ಲಡಾಖ್‌ನ ಝನ್ಸ್ಕರ್ ಪ್ರದೇಶದಿಂದ ಪ್ರವಾಸಿಗನನ್ನು ಸ್ಥಳಾಂತರಿಸಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ: ಲ್ಯಾಪ್ಟಾಪ್ ವಶಕ್ಕಾಗಿ ಬಂಧಿತ ಪತ್ರಕರ್ತನೊಂದಿಗೆ ಬೆಂಗಳೂರಿಗೆ ಹಾರಿದ ದೆಹಲಿ ಪೊಲೀಸರು
ಬಲವಾದ ಗಾಳಿ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಿ ಝನ್ಸ್ಕರ್ ಕಣಿವೆ ಪ್ರದೇಶದಿಂದ ಅವರನ್ನು ಸ್ಥಳಾಂತರಿಸಿರುವ ವಾಯಪಡೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.