ETV Bharat / bharat

'ಹಾರಾಡುವ ಶವಪೆಟ್ಟಿಗೆ'! ತನಿಖೆ ಮುಗಿಯುವವರೆಗೆ ಮಿಗ್ 21 ಯುದ್ಧ ವಿಮಾನಗಳ ಹಾರಾಟವಿಲ್ಲ - ಭಾರತೀಯ ವಾಯುಪಡೆ

ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಅಪಘಾತದ ನಂತರ ಭಾರತೀಯ ವಾಯುಪಡೆ (ಐಎಎಫ್) ರಷ್ಯಾ ಮೂಲದ ಮಿಗ್ 21 ಯುದ್ಧ ವಿಮಾನಗಳ ಹಾರಾಟವನ್ನು ಸದ್ಯಕ್ಕೆ ನಿರ್ಬಂಧಿಸಿದೆ.

MiG 21 fighter aircraft
ಮಿಗ್-21 ಯುದ್ಧ ವಿಮಾನ
author img

By

Published : May 21, 2023, 7:56 AM IST

ನವದೆಹಲಿ: ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ರಷ್ಯಾ ಮೂಲದ ಮಿಗ್​ 21 ಯುದ್ಧ ವಿಮಾನ ಹಾರಾಟಕ್ಕೆ ನಿರ್ಬಂಧ ಹೇರಿದೆ. ಈ ತಿಂಗಳ ಆರಂಭದಲ್ಲಿ ರಾಜಸ್ಥಾನದಲ್ಲಿ ಸಂಭವಿಸಿದ ಮಿಗ್ ವಿಮಾನ ದುರಂತಕ್ಕೆ ಕಾರಣ ನಿರ್ಧಾರವಾಗುವವರೆಗೂ ಹಾಗೂ ಐಎಎಫ್‌ನಲ್ಲಿರುವ ಎಲ್ಲ ಮಿಗ್‌ ಯುದ್ಧವಿಮಾನದ ಕೂಲಂಕಷ ತಪಾಸಣೆ ನಡೆಯುವವರೆಗೂ ಈ ವಿಮಾನದ 3 ಮೂರು ಸ್ಕ್ವಾಡ್ರನ್‌ಗಳನ್ನು ಬಳಕೆ ಮಾಡುವುದಿಲ್ಲ ಎಂದು ಭಾರತೀಯ ವಾಯುಸೇನೆ ತಿಳಿಸಿದೆ.

ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಹಾರಿದ್ದ ಮಿಗ್ ವಿಮಾನ ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಅಪಘಾತದಲ್ಲಿ ಮೂವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು. ತನಿಖೆ ಮತ್ತು ಅಪಘಾತಕ್ಕೆ ಕಾರಣ ಕಂಡು ಹುಡುಕುವವರೆಗೆ ಮಿಗ್​ 21 ಸೇವೆಯನ್ನು ನಿಷೇಧಿಸಲಾಗಿದೆ ಎಂದು ಹಿರಿಯ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.

ಕಳೆದ 5 ದಶಕಗಳಿಂದ ಮಿಗ್‌ ಫೈಟರ್‌ ಜೆಟ್‌ನ ವಿವಿಧ ಆವೃತ್ತಿಗಳು ಭಾರತೀಯ ಏರ್‌ಪೋರ್ಸ್‌ಗೆ ಸೇರ್ಪಡೆಯಾಗುತ್ತಿವೆ. ಪ್ರಸ್ತುತ ವಾಯುಸೇನೆಯಲ್ಲಿ ಕೇವಲ ಮೂರು ಸ್ಕ್ವಾಡ್ರನ್‌ನ ಮಿಗ್‌-21 ಫೈಟರ್‌ ಜೆಟ್‌ ಕಾರ್ಯ ನಿರ್ವಹಿಸುತ್ತಿವೆ. ಇವಲ್ಲವೂ 2025ರ ವೇಳೆಗೆ ಸಂಪೂರ್ಣವಾಗಿ ಐಎಎಫ್‌ನಿಂದ ಹೊರಹಾಕಲ್ಪಡಲಿದೆ ಎಂದು ವಾಯುಸೇನೆ ಮಾಹಿತಿ ನೀಡಿದೆ.

ಇತ್ತೀಚೆಗೆ ತರಬೇತಿಯಲ್ಲಿದ್ದಾಗ ರಾಜಸ್ಥಾನದಲ್ಲಿ ಮನೆಯ ಮೇಲೆ ವಿಮಾನ ಬಿದ್ದಿತ್ತು. ಪೈಲಟ್‌ಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಅಪಘಾತಕ್ಕೆ ನಿಖರ ಕಾರಣ ಪತ್ತೆ ಮಾಡಲು ತನಿಖೆ ನಡೆಯುತ್ತಿದೆ. ಪ್ರಸ್ತುತ ಐಎಎಫ್‌ನಲ್ಲಿ 31 ಯುದ್ಧಸಜ್ಜಿತ ಏರ್‌ಕ್ರಾಫ್ಟ್‌ ಸ್ಕ್ವಾಡ್ರನ್‌ಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಮೂರು ಸ್ಕ್ವಾಡ್ರನ್‌ಗಳು ಮಿಗ್‌ ಆವೃತ್ತಿಯದ್ದಾಗಿದೆ. 1960ರಲ್ಲಿ ಮಿಗ್‌ ಅನ್ನು ಐಎಎಫ್‌ಗೆ ಸೇರ್ಪಡೆ ಮಾಡಲಾಗಿತ್ತು. ಇಲ್ಲಿಯವರೆಗೂ ಐಎಎಫ್‌ನಲ್ಲಿ 800 ಮಿಗ್‌ ಯುದ್ಧ ವಿಮಾನದ ವಿವಿಧ ಆವೃತ್ತಿಗಳು ಸೇವೆ ನೀಡಿವೆ.

ಹಾರಾಡುವ ಶವಪೆಟ್ಟಿಗೆ ಎಂಬ ಕುಖ್ಯಾತಿ: ಮಿಗ್ 21 ಯುದ್ಧ ವಿಮಾನದ ಪತನ ಪ್ರಕರಣಗಳು ಕಳವಳಕಾರಿಯಾಗಿದೆ. ಇತ್ತೀಚಿನ ಕೆಲವು ದಶಕಗಳಲ್ಲಿ ನಿರಂತರವಾಗಿ ಅಪಘಾತವಾಗುತ್ತಿದ್ದ ಕಾರಣಕ್ಕಾಗಿಯೇ ಇದನ್ನು 'ಹಾರಾಡುವ ಶವಪೆಟ್ಟಿಗೆ' ಎಂದು ಮಾಧ್ಯಮಗಳು ಕರೆದಿದ್ದವು. ಮಿಗ್‌ 21 ಬದಲು ಸುಧಾರಿತ ಮಧ್ಯಮ ಯುದ್ಧ ವಿಮಾನದೊಂದಿಗೆ ಎಲ್‌ಸಿಎ ಮಾರ್ಕ್ 11 ಮತ್ತು ಎಲ್‌ಸಿಎ ಮಾರ್ಕ್ 2 ಸೇರಿದಂತೆ ಸ್ಥಳೀಯ ವಿಮಾನಗಳನ್ನು ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಐಎಎಫ್‌ ಮುಂದಾಗಿದೆ.

1960 ರಲ್ಲಿ ಮಿಗ್‌ 21 ಸ್ಕ್ವಾಡ್ರನ್‌ಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾದವು. 2025ರ ವೇಳೆಗೆ ಎಲ್ಲಾ ಮಿಗ್‌ ವಿಮಾನಗಳನ್ನು ಹಂತಹಂತವಾಗಿ ತೆಗೆದುಹಾಕಲು ಐಎಎಫ್ ಯೋಜಿಸಿದೆ. ಮಿಗ್​ -21ಗಳು ದೀರ್ಘಕಾಲದವರೆಗೆ ಐಎಎಫ್‌ ನ ಮುಖ್ಯ ಆಧಾರವಾಗಿದ್ದವು. ಮೊದಲ ಪ್ರವೇಶದ ನಂತರ ಐಎಎಫ್‌ ತನ್ನ ಒಟ್ಟಾರೆ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 870 MiG-21 ಯುದ್ಧ ವಿಮಾನಗಳನ್ನು ಖರೀದಿಸಿತು. ಆದಾಗ್ಯೂ, ವಿಮಾನ ಅತ್ಯಂತ ಕಳಪೆ ಸುರಕ್ಷತಾ ದಾಖಲೆಯನ್ನು ಹೊಂದಿದೆ.

400 ಕ್ಕೂ ಹೆಚ್ಚು ಅಪಘಾತ: ಅಧಿಕೃತ ಮಾಹಿತಿಯ ಪ್ರಕಾರ ಕಳೆದ ಆರು ದಶಕಗಳಲ್ಲಿ ದೇಶದ ವಾಯು ಪಡೆಯ ಸೇವೆಯಲ್ಲಿರುವ ಮಿಗ್ ಯುದ್ಧ ವಿಮಾನಗಳಿಂದ 400 ಕ್ಕೂ ಹೆಚ್ಚು ಅಪಘಾತಗಳಾಗಿದ್ದು, 200 ಕ್ಕೂ ಅಧಿಕ ಪೈಲಟ್​ಗಳು ಸಾವಿಗೀಡಾಗಿದ್ದಾರೆ. ಪ್ರಸ್ತುತ ಐಎಎಫ್‌ ಮೂರು MiG-21 ಸ್ಕ್ವಾಡ್ರನ್‌ಗಳನ್ನು ಹೊಂದಿದ್ದು, ಒಟ್ಟು 50 ವಿಮಾನಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: BREAKING: ವಾಯುಪಡೆಯ ಮಿಗ್​-29 ಯುದ್ಧ ವಿಮಾನ ಪತನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.