ವಿಶಾಖಪಟ್ಟಣ, ಆಂಧ್ರಪ್ರದೇಶ: ವಿಶಾಖ ಬೀಚ್ ರಸ್ತೆಯಲ್ಲಿ ಬುಧವಾರ ಮಧ್ಯರಾತ್ರಿ ಯುವತಿಯೊಬ್ಬಳು ಮದ್ಯದ ಅಮಲಿನಲ್ಲಿ ಹೈಡ್ರಾಮಾ ಸೃಷ್ಟಿಸಿದ್ದಾರೆ. ಸಾರ್ವಜನಿಕವಾಗಿ ಮದ್ಯ ಸೇವಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸ್ಥಳೀಯರು ಹಾಗೂ ಪೊಲೀಸರನ್ನು ನಿಂದಿಸಿದ್ದಾರೆ. ತಡೆಯಲು ಮುಂದಾದವರಿಗೆ ಕಾಲಿನಿಂದ ಒದ್ದು ಗಲಾಟೆ ಮಾಡಿದ್ದಾರೆ.
ಏನಿದು ಪ್ರಕರಣ?: ಬೀಚ್ ರಸ್ತೆಯ ವೈಎಂಸಿಎ ಬಳಿ ರಾತ್ರಿ 11.30ರ ಸುಮಾರಿಗೆ ಯುವತಿಯೊಬ್ಬರು ಮದ್ಯ ಸೇವಿಸುತ್ತಿದ್ದರು. ಈ ಬಗ್ಗೆ ಅಲ್ಲಿದ್ದ ಕೆಲವರು ಪ್ರಶ್ನಿಸಿದಾಗ ಯುವತಿ ಹೈಡ್ರಾಮ ಸೃಷ್ಟಿಸಿದ್ದಾರೆ. ಸ್ಥಳೀಯರೊಂದಿಗೆ ಗಲಾಟೆ ಮಾಡಿದ್ದಾರೆ. ಸ್ಥಳೀಯರು ಈ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸುದ್ದಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಯುವತಿಗೆ ಸಾರ್ವಜನಿಕವಾಗಿ ಮದ್ಯ ಸೇವಿಸದಂತೆ ಸೂಚಿಸಿ ಅಲ್ಲಿಂದ ತೆರಳುವಂತೆ ಹೇಳಿದ್ದಾರೆ. ಆದರೆ ಆ ಯುವತಿ, ನೀವು ನನ್ನನ್ನು ಪ್ರಶ್ನಿಸುತ್ತೀರಾ? ನನ್ನ ‘ಎಟಿಎಂ’ಗೆ ಹೇಳಿ ನಿಮ್ಮ ಇಲಾಖೆ ಗತಿ ಕಾಣಿಸ್ತಿನಿ ಎಂದು ಪೊಲೀಸರ ಮೇಲೆ ರೇಗಾಡಿದ್ದಾರೆ.
ಕುಡಿದಮತ್ತಿನಲ್ಲಿ ಹಲ್ಲೆ: ಅಷ್ಟೇ ಅಲ್ಲ ಯುವತಿ ಕುಡಿದ ಮತ್ತಿನಲ್ಲಿ ಎಎಸ್‌ಐ ಸತ್ಯನಾರಾಯಣರ ಮೇಲೆ ಹಲ್ಲೆ ಮಾಡಿದ್ದಾಳೆ ಎನ್ನಲಾಗಿದೆ. ಈ ವೇಳೆ ಗೋವಿಂದ್ ಎಂಬ ಯುವಕ ಆಕೆಯನ್ನು ತಡೆಯಲು ಯತ್ನಿಸಿದಾಗ ಆತನಿಗೆ ಬಿಯರ್ ಬಾಟಲ್ ನಿಂದ ದಾಳಿ ಮಾಡಿದ್ದಾಳೆ. ಈ ವೇಳೆ ಗೋವಿಂದ್ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಸುಮಾರು ಒಂದು ಗಂಟೆ ಬಳಿಕ ಮಹಿಳಾ ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಆಕೆಯನ್ನು ಬಂಧಿಸಲಾಯಿತು. ಬ್ರೀತ್ ಅಲೈಜರ್ ಮೂಲಕ ಯುವತಿಯನ್ನು ಪರೀಕ್ಷೆ ನಡೆಸಿದಾಗ 149 ಪಾಯಿಂಟ್ಗಳು ತೊರಿಸಿದೆ. ಯುವತಿಯನ್ನು ಪೊಲೀಸರು ರಾತ್ರಿ ಮನೆಗೆ ಡ್ರಾಪ್ ಮಾಡಿ ಬೆಳಗ್ಗೆ ವಶಕ್ಕೆ ಪಡೆದಿದ್ದಾರೆ.
ಯುವತಿಯನ್ನು ನಗರದ ಓಲ್ಡ್ ಡೈರಿ ಫಾರ್ಮ್ ಪ್ರದೇಶದ ಎಂ.ಶ್ರೀಲತಾ (24) ಅಲಿಯಾಸ್ ಅಮ್ಮು ಎಂದು ಗುರುತಿಸಲಾಗಿದೆ. ಇಂಟರ್ವರೆಗೆ ಓದಿರುವುದು ಗೊತ್ತಾಗಿದೆ. ಬುಧವಾರ ರಾತ್ರಿ ಮದ್ಯಪಾನ ಮಾಡುವ ಮುನ್ನ ಆಕೆ ಗಾಂಜಾ ಸೇವಿಸಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ನಿಂದನೆ, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಮೊದಲಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಆಕೆಯನ್ನು ರಿಮಾಂಡ್‌ಗೆ ಕಳುಹಿಸಿದ್ದಾರೆ. ಈ ಘಟನೆ ಸಂಪೂರ್ಣ ಮಾಹಿತಿ ಸಿಐ ಕೋರಡ ರಾಮರಾವ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಯುವತಿ ಸೃಷ್ಟಿಸಿದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓದಿ: ಇಬ್ಬರು ನಾಗರಿಕರ ಸಾವು ಆರೋಪ.. ಭುಗಿಲೆದ್ದ ಪ್ರತಿಭಟನೆ, ಕಲ್ಲು ತೂರಾಟ!