ಪುಣೆ(ಮಹಾರಾಷ್ಟ್ರ): ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಜಾರಿ ಮಾಡಬೇಕು ಮತ್ತು ಏಕರೂಪ ನಾಗರಿಕ ಸಂಹಿತೆಯನ್ನು ಆದಷ್ಟು ಬೇಗ ಜಾರಿಗೊಳಸಬೇಕೆಂದು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್)ಯ ಅಧ್ಯಕ್ಷ ರಾಜ್ ಠಾಕ್ರೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಔರಂಗಾಬಾದ್ ನಗರದ ಹೆಸರನ್ನು ಸಂಭಾಜಿನಗರ ಎಂದು ಬದಲಾಯಿಸಬೇಕೆಂದೂ ಆಗ್ರಹಿಸಿದ್ದಾರೆ. ಈ ವೇಳೆ ಧ್ವನಿವರ್ಧಕ ವಿಚಾರವಾಗಿಯೂ ಅವರು ವಾಗ್ದಾಳಿ ಮುಂದುವರೆಸಿದ್ದಾರೆ.
-
After I asked my workers to play Hanuman Chalisa on loudspeakers, the Rana couple (Ravi&Navneet Rana) said they will recite Hanuman Chalisa at Matoshree. Is Matoshree a mosque? Everyone knows what happened between Shiv Sainiks and the Rana couple later: MNS Chief Raj Thackeray pic.twitter.com/4sTj7XAL2A
— ANI (@ANI) May 22, 2022 " class="align-text-top noRightClick twitterSection" data="
">After I asked my workers to play Hanuman Chalisa on loudspeakers, the Rana couple (Ravi&Navneet Rana) said they will recite Hanuman Chalisa at Matoshree. Is Matoshree a mosque? Everyone knows what happened between Shiv Sainiks and the Rana couple later: MNS Chief Raj Thackeray pic.twitter.com/4sTj7XAL2A
— ANI (@ANI) May 22, 2022After I asked my workers to play Hanuman Chalisa on loudspeakers, the Rana couple (Ravi&Navneet Rana) said they will recite Hanuman Chalisa at Matoshree. Is Matoshree a mosque? Everyone knows what happened between Shiv Sainiks and the Rana couple later: MNS Chief Raj Thackeray pic.twitter.com/4sTj7XAL2A
— ANI (@ANI) May 22, 2022
ಮಸೀದಿಗಳ ಧ್ವನಿವರ್ಧಕಗಳಿಗೆ ಪ್ರತಿಯಾಗಿ ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ನುಡಿಸಲು ನಾನು ನಮ್ಮ ಕಾರ್ಯಕರ್ತರಲ್ಲಿ ಕೇಳಿಕೊಂಡಿದ್ದೆ. ನಂತರ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ದಂಪತಿ 'ಮಾತೋಶ್ರೀ' (ಸಿಎಂ ಉದ್ಧವ್ ಠಾಕ್ರೆ ನಿವಾಸ)ದ ಮುಂದೆ ಹನುಮಾನ್ ಚಾಲೀಸಾವನ್ನು ಪಠಿಸುವುದಾಗಿ ಹೇಳಿದ್ದರು.
ಆದರೆ, ಅವರನ್ನು ಬಂಧಿಸಿದ್ದರು. ಅಲ್ಲದೇ, ಶಿವಸೇನೆ ಕಾರ್ಯುಕರ್ತರು ಮತ್ತು ರಾಣಾ ದಂಪತಿ ನಡುವೆ ಏನಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾದರೆ, 'ಮಾತೋಶ್ರೀ' ಏನು ಮಸೀದಿಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ್ದವರಿಗೆ ತಕ್ಕಶಾಸ್ತಿ: ಐವರ ಮನೆಗಳನ್ನು ನೆಲಸಮ ಮಾಡಿದ ಜಿಲ್ಲಾಡಳಿತ