ETV Bharat / bharat

‘ನನಗೆ ಶಕ್ತಿ ಮತ್ತು ಉತ್ಸಾಹದ ಕೊರತೆಯಿದೆ’.. ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬ್ರಿಜೇಶ್ ಕಾಳಪ್ಪ! - ಕಾಂಗ್ರೆಸ್​ಗೆ ಬ್ರಿಜೇಶ್ ಕಾಳಪ್ಪ ಸುದ್ದಿ

ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಬ್ರಿಜೇಶ್ ರಾಜೀನಾಮೆ ನೀಡಿ ತಮ್ಮ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Brijesh Kalappa resigns from Congress  Brijesh Kalappa thanks Congress  Brijesh Kalappa resigns news  ಕಾಂಗ್ರೆಸ್​ಗೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ  ಕಾಂಗ್ರೆಸ್​ಗೆ ಬ್ರಿಜೇಶ್ ಕಾಳಪ್ಪ ಸುದ್ದಿ  ಕಾಂಗ್ರೆಸ್​ಗೆ ಧನ್ಯವಾದ ತಿಳಿಸಿದ ಬ್ರಿಜೇಶ್ ಕಾಳಪ್ಪ
ಬ್ರಿಜೆಶ್​ ಕಾಳಪ್ಪ
author img

By

Published : Jun 1, 2022, 9:10 AM IST

ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಸುಪ್ರೀಂ ಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಬಗ್ಗೆ ತಮ್ಮ ಶಕ್ತಿ ಮತ್ತು ಉತ್ಸಾಹದ ಕೊರತೆ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಪಕ್ಷದ ಬಗ್ಗೆ ಕಾಳಪ್ಪ ಅವರು ಬುಧವಾರ ಫೇಸ್‌ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಆರಂಭದಲ್ಲಿ ನೀವು ನನಗೆ ಒದಗಿಸಿದ ಹಲವಾರು ಅವಕಾಶಗಳಿಗಾಗಿ ನನ್ನ ಹೃತೂರ್ವಕ ಧನ್ಯವಾದಗಳು. ಮತ್ತೊಮ್ಮೆ ನಿಮ್ಮ ಆಶೀರ್ವಾದದಿಂದ ನಾನು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರನಾಗಿ ನೇಮಕಗೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಓದಿ: ವಾಯುವ್ಯ ಕ್ಷೇತ್ರಕ್ಕೆ ಹುಕ್ಕೇರಿಗೆ ಟಿಕೆಟ್; ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ ಆಪ್ತ

2013 ರಲ್ಲಿ ಯುಪಿಎ ವರ್ಷದಿಂದ ಹಿಂದಿ, ಇಂಗ್ಲಿಷ್ ಮತ್ತು ಕನ್ನಡ ಚಾನೆಲ್‌ಗಳಲ್ಲಿ ಪಕ್ಷವನ್ನು ಪ್ರತಿನಿಧಿಸುತ್ತಿದ್ದೇನೆ. ಸುಮಾರು ಒಂದು ದಶಕದ ಕಾಲ ಮತ್ತು 6,497 ಚರ್ಚೆಗಳನ್ನು ನಡೆಸಿದ್ದೇನೆ. ಜೊತೆಗೆ, ಪಕ್ಷವು ನನಗೆ ರಾಜಕೀಯ ಕೆಲಸವನ್ನು ನಿಯಮಿತವಾಗಿ ನಿಯೋಜಿಸುತ್ತಿದೆ. ನಾನು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದು ನನಗೆ ತೃಪ್ತಿಯಿದೆ.

ಟಿವಿ ಚರ್ಚೆಗಳಿಗೆ ಸಂಬಂಧಿಸಿದಂತೆ ನಾನು ಎಲ್ಲಾ ಸಮಯದಲ್ಲೂ ನನ್ನ ಅತ್ಯುತ್ತಮವಾದ ಕೆಲಸವನ್ನು ಮಾಡಿದ್ದೇನೆ. ಯಾವುದೇ ಚರ್ಚೆಗೆ ಸಾಕಷ್ಟು ತಯಾರಿ ಇಲ್ಲದೆ ಎಂದಿಗೂ ಹೋಗಿಲ್ಲ. 2014 ಮತ್ತು 2019 ರ ಸೋಲಿನ ಸಮಯದಲ್ಲೂ ನಾನು ಹಿಂಜರಿಯಲಿಲ್ಲ. ಆಗ ಉತ್ಸಾಹ ಮತ್ತು ಶಕ್ತಿಯ ಕೊರತೆಯನ್ನು ಅನುಭವಿಸಿದೆ ಎಂದು ಕಾಳಪ್ಪ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ನಾನು ಭಾವೋದ್ರೇಕದ ಕೊರತೆಯನ್ನು ಕಂಡುಕೊಂಡಿದ್ದೇನೆ. ಆದರೆ ನನ್ನ ಸ್ವಂತ ಕಾರ್ಯಕ್ಷಮತೆ ನಿರಾಸಕ್ತಿ ಮತ್ತು ನಿಷ್ಟ್ರಯೋಜಕವಾಗಿದೆ. ಈ ಪರಿಸ್ಥಿತಿಯಲ್ಲಿ ನಾನು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ 1997ರಲ್ಲಿ ಆರಂಭವಾದ ಈ ಸಂಘವನ್ನು ಕೊನೆಗಾಣಿಸುತ್ತಿದ್ದೇನೆ ಎಂದು ಕಾಳಪ್ಪ ಅವರು ಫೇಸ್​ಬುಕ್​ ಮೂಲಕ ಹೇಳಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.