ETV Bharat / bharat

ಪ್ರಧಾನಿ ನಿವಾಸದ ಮುಂದೆ ಹನುಮಾನ್​ ಚಾಲೀಸಾ, ನಮಾಜ್ ಸೇರಿ ಎಲ್ಲ ಧರ್ಮಗಳ ಪ್ರಾರ್ಥನೆಗೆ ಅವಕಾಶ ನೀಡಿ : ಶಾಗೆ NCP ನಾಯಕಿ ಪತ್ರ - ಪ್ರಧಾನಿ ಮೋದಿ ನಿವಾಸ ಸುದ್ದಿ

ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ಸೇರಿದಂತೆ ಅನ್ಯ ಧರ್ಮಗಳು ದೇಶದ ಪ್ರಯೋಜನಕ್ಕಾಗಿ ಇರುವುದಾದ್ರೆ ನಾನು ಆ ಧರ್ಮಗಳ ನಿಯಮಗಳನ್ನು ಪಾಲಿಸಲು ಇಚ್ಛಿಸುತ್ತೇನೆ ಎಂದು ಎನ್‌ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಹೇಳಿದ್ದಾರೆ. ಶನಿವಾರ, ರಾಣಾ ದಂಪತಿ ಸಿಎಂ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವ ಬಗ್ಗೆ ಮಾತನಾಡಿದ್ದರು..

NCP Leader letter to HM Amit Shah, Hanuman Chalisa issue, NCP leader Fahmida Hasan Khan letter to Amit Shah, PM Modi residence news, ಎನ್‌ಸಿಪಿ ನಾಯಕಿಯಿಂದ ಅಮಿತ್ ಶಾಗೆ ಪತ್ರ, ಹನುಮಾನ್ ಚಾಲೀಸಾ ವಿವಾದ, ಅಮಿತ್ ಶಾಗೆ ಪತ್ರ ಬರೆದ ಫಹ್ಮಿದಾ ಹಸನ್ ಖಾನ್, ಪ್ರಧಾನಿ ಮೋದಿ ನಿವಾಸ ಸುದ್ದಿ,
ಅಮಿತ್​ ಶಾಗೆ ಎನ್​ಸಿಪಿ ನಾಯಕಿ ಪತ್ರ
author img

By

Published : Apr 25, 2022, 12:36 PM IST

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಹೊರಗೆ ನಮಾಜ್ ಸೇರಿದಂತೆ ಎಲ್ಲಾ ಧರ್ಮಗಳ ಪ್ರಾರ್ಥನೆಗಳನ್ನು ಸಲ್ಲಿಸುವ ಬಯಕೆಯನ್ನು ಎನ್‌ಸಿಪಿ ನಾಯಕಿ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ 'ಮಾತೋಶ್ರೀ' ಹೊರಗೆ ಹನುಮಾನ್ ಚಾಲೀಸಾವನ್ನು ಪಠಿಸಲು ಯತ್ನಿಸಿದರು. ಸದ್ಯ ಇಬ್ಬರೂ ನಾಯಕರನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

  • I've asked HM Amit Shah for permission to chant prayers of every religion in front of PM Modi's residence. If Hindutva, Jainism elevates for country's benefit to reduce inflation, unemployment, starvation,I'd like to do it:NCP Mumbai north district working pres Fahmida Hasan Khan pic.twitter.com/QN4rtOheiJ

    — ANI (@ANI) April 25, 2022 " class="align-text-top noRightClick twitterSection" data=" ">

ಫಹ್ಮಿದಾ ಹಸನ್ ಖಾನ್ ಅವರು ಗೃಹ ಸಚಿವ ಶಾಗೆ ಪತ್ರ ಬರೆಯುವ ಮೂಲಕ ಗೌರವಾನ್ವಿತ ನರೇಂದ್ರ ಮೋದಿ ಜೀ ಅವರ ನಿವಾಸದ ಹೊರಗೆ ನಮಾಜ್, ಹನುಮಾನ್ ಚಾಲೀಸಾ, ನವಕರ್ ಮಂತ್ರ, ಗುರು ಗ್ರಂಥ ಮತ್ತು ನೋವಿನೋವನ್ನು ಓದಲು ನನಗೆ ಅವಕಾಶ ನೀಡುವಂತೆ ಮುಂಬೈ ಉತ್ತರ ಜಿಲ್ಲಾ ಕಾರ್ಯಾಧ್ಯಕ್ಷೆ ಫಹ್ಮಿದಾ ಹಸನ್ ಖಾನ್ ಕಾಂದಿವಲಿ ಅವರು ಮಹಾರಾಷ್ಟ್ರದಿಂದ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ಗೃಹ ಸಚಿವ ಶಾಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಓದಿ: ಹನುಮಾನ್​ ಚಾಲೀಸಾ ಪಠಿಸುವ ಸವಾಲು : ಗಂಡ-ಹೆಂಡ್ತಿಯನ್ನು ಬೇರೆ ಬೇರೆ ಜೈಲಿಗೆ ರವಾನಿಸಿದ ಮುಂಬೈ ಪೊಲೀಸರು!

ಹಣದುಬ್ಬರ, ನಿರುದ್ಯೋಗ, ಹಸಿವು ಕಡಿಮೆ ಮಾಡಲು ಹಿಂದುತ್ವ, ಜೈನ ಧರ್ಮ ಸೇರಿದಂತೆ ಅನ್ಯ ಧರ್ಮಗಳು ದೇಶದ ಪ್ರಯೋಜನಕ್ಕಾಗಿ ಇರುವುದಾದ್ರೆ ನಾನು ಆ ಧರ್ಮಗಳ ನಿಯಮಗಳನ್ನು ಪಾಲಿಸಲು ಇಚ್ಛಿಸುತ್ತೇನೆ ಎಂದು ಎನ್‌ಸಿಪಿ ನಾಯಕಿ ಫಹ್ಮಿದಾ ಹಸನ್ ಖಾನ್ ಹೇಳಿದ್ದಾರೆ. ಶನಿವಾರ, ರಾಣಾ ದಂಪತಿ ಸಿಎಂ ನಿವಾಸದ ಹೊರಗೆ ಹನುಮಾನ್ ಚಾಲೀಸಾ ಪಠಿಸುವ ಬಗ್ಗೆ ಮಾತನಾಡಿದ್ದರು.

ಇದಾದ ಬಳಿಕ ರಾಣಾ ದಂಪತಿಯ ಮನೆಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಶಿವಸೇನೆ ಕಾರ್ಯಕರ್ತರು ಗಲಾಟೆ ಸೃಷ್ಟಿಸಿದ್ದರು. ಮಾಧ್ಯಮಗಳ ಸಂವಾದದಲ್ಲಿ ನವನೀತ್ ರಾಣಾ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ಬಂಗಾಳದಂತಹ ಪರಿಸ್ಥಿತಿಯನ್ನು ಸಿಎಂ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಪೊಲೀಸರು ನೀಡಿರುವ ಹೇಳಿಕೆಯ ಪ್ರಕಾರ, ಶಾಸಕ ರವಿ ರಾಣಾ ಮತ್ತು ಸಂಸದೆ ನವನೀತ್ ಕೌರ್ ರಾಣಾ ವಿರುದ್ಧ ಖಾರ್ ಪೊಲೀಸ್ ಠಾಣೆಯಲ್ಲಿ 153 (ಎ),34 ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಖಾರ್‌ನಲ್ಲಿರುವ ಅವರ ನಿವಾಸದಿಂದ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ. ಖಾರ್ ಪೊಲೀಸ್ ಠಾಣೆ ಕಡೆಯಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.