ETV Bharat / bharat

ಭಾರತ - ಪಾಕಿಸ್ತಾನ ಉತ್ತಮ ಸ್ನೇಹಿತರಾಗಬೇಕೆಂಬುದೇ ನನ್ನ ಕನಸು: ಮಲಾಲಾ ಯೂಸಫ್ ‌ಜೈ - ಜೈಪುರ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಮಲಾಲಾ ಭಾಗಿ

ಉಭಯ ದೇಶಗಳನ್ನು (ಭಾರತ ಮತ್ತು ಪಾಕಿಸ್ತಾನ) ಸ್ನೇಹಪರವಾಗಿ ಇರುವುದನ್ನು ನೋಡುವುದು ನನ್ನ ಕನಸಾಗಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಲೇಖಕ ಮತ್ತು ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಹೇಳಿದ್ದಾರೆ.

Malala Yousafzai
ಮಲಾಲಾ ಯೂಸಫ್‌ಜೈ
author img

By

Published : Mar 1, 2021, 12:34 PM IST

ನವದೆಹಲಿ: 14 ನೇ ಜೈಪುರ ಸಾಹಿತ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದ ನೊಬೆಲ್ ಪ್ರಶಸ್ತಿ ಪುರಸ್ಕೃತೆ, ಲೇಖಕ ಮತ್ತು ಪಾಕಿಸ್ತಾನಿ ಸಾಮಾಜಿಕ ಕಾರ್ಯಕರ್ತೆ ಮಲಾಲಾ ಯೂಸಫ್‌ಜೈ ಅವರು ಶಿಕ್ಷಣ, ಮಾನವ ಹಕ್ಕುಗಳು ಮತ್ತು ಭಾರತ - ಪಾಕಿಸ್ತಾನ ಸಂಬಂಧದ ಬಗ್ಗೆ ತಮ್ಮ ಆಶಯಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ.

ಮಲಾಲಾ ತಮ್ಮ ಹೊಸ ಪುಸ್ತಕ " ವಿ ಆರ್​ ಡಿಸ್​ಪ್ಲೇಸಡ್​: ಮೈ ಜರ್ನಿ ಅಂಡ್ ಸ್ಟೋರೀಸ್ ಫ್ರಮ್ ರೆಫ್ಯೂಜಿ ಗರ್ಲ್ಸ್ ಅರೌಂಡ್ ದಿ ವರ್ಲ್ಡ್" ಬಗ್ಗೆ ಮಾತನಾಡಿದರು. ಇಂಡೋ-ಪಾಕ್ ಸಂಬಂಧದ ಬಗ್ಗೆ ಮಾತನಾಡಿದ 23 ವರ್ಷದ ಮಲಾಲಾ, ನೀವು ಭಾರತೀಯರು ಮತ್ತು ನಾನು ಪಾಕಿಸ್ತಾನಿ. ನಾವು ಸಂಪೂರ್ಣವಾಗಿ ಚೆನ್ನಾಗಿದ್ದೇವೆ. ಈ ದ್ವೇಷ ನಮ್ಮ ನಡುವೆ ಏಕೆ ಸೃಷ್ಟಿಯಾಗಿದೆ? ಗಡಿಗಳ ವಿಭಜನೆ ಮತ್ತು ತತ್ವಶಾಸ್ತ್ರ ಇನ್ನು ಮುಂದೆ ಕೆಲಸ ಮಾಡುವುದಿಲ್ಲ. ಮಾನವರಾಗಿ ನಾವೆಲ್ಲರೂ ಶಾಂತಿಯಿಂದ ಬದುಕಲು ಬಯಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪೊಲೀಸ್​ ವಶಕ್ಕೆ

ಉಭಯ ದೇಶಗಳನ್ನು (ಭಾರತ ಮತ್ತು ಪಾಕಿಸ್ತಾನ) ಸ್ನೇಹಪರವಾಗಿ ಇರುವುದನ್ನು ನೋಡುವುದು ನನ್ನ ಕನಸಾಗಿದೆ. ನೀವು ಪಾಕಿಸ್ತಾನಿ ಚಲನಚಿತ್ರಗಳನ್ನು ನೋಡುವುದನ್ನು ಮುಂದುವರಿಸಬಹುದು. ನಾವು ಬಾಲಿವುಡ್ ಚಲನಚಿತ್ರಗಳನ್ನು ನೋಡುತ್ತೇವೆ ಎಂದರು.

ಉಭಯ ದೇಶಗಳಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸುವ ಅಗತ್ಯವನ್ನು ಒತ್ತಿ ಹೇಳಿದ ಮಲಾಲಾ, ಭಾರತದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆ ಮತ್ತು ಕಾರ್ಯಕರ್ತರ ಬಂಧನದ ಬಗ್ಗೆಯೂ ಮಾತನಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.