ETV Bharat / bharat

ಟಿಡಿಪಿ ಬೆಂಬಲಿಸಲು ಎನ್‌ಡಿಎಯಿಂದ ಹೊರ ಬಂದಿದ್ದೇನೆ: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್

author img

By ETV Bharat Karnataka Team

Published : Oct 5, 2023, 9:49 AM IST

''ಟಿಡಿಪಿಯನ್ನು ಬೆಂಬಲಿಸಲು ಎನ್‌ಡಿಎಯಿಂದ ಹೊರಬಂದಿದ್ದೇನೆ'' ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನೀಡಿದ ಹೇಳಿಕೆಯು, ಆಂಧ್ರಪ್ರದೇಶದ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

JanaSena Party chief Pawan Kalyan
ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್

ಪೆಡನಾ, ಕೃಷ್ಣ (ಆಂಧ್ರ ಪ್ರದೇಶ): "ನಾನು ಟಿಡಿಪಿಯನ್ನು ಬೆಂಬಲಿಸಲು ಎನ್‌ಡಿಎಯಿಂದ ಹೊರಬಂದಿದ್ದೇನೆ. ಟಿಡಿಪಿ ಪ್ರಬಲ ಪಕ್ಷವಾಗಿದೆ. ಆಂಧ್ರಪ್ರದೇಶಕ್ಕೆ ರಾಜ್ಯದ ಅಭಿವೃದ್ಧಿಗಾಗಿ ತೆಲುಗು ದೇಶಂ ಪಕ್ಷದ ಆಡಳಿತದ ಅಗತ್ಯವಿದೆ'' ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹೇಳಿದ್ದಾರೆ.

''ಇಂದು ಟಿಡಿಪಿ ಸಂಕಷ್ಟದಲ್ಲಿದೆ ಮತ್ತು ನಾವು ಅವರನ್ನು ಬೆಂಬಲಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಟಿಡಿಪಿಗೆ ಜನರು ನೀಡುವ ಅಗತ್ಯವಿದೆ. ಟಿಡಿಪಿ ಮತ್ತು ಜನಸೇನೆ ಕೈಜೋಡಿಸಿದರೆ, ವೈಎಸ್‌ಆರ್‌ಸಿಪಿ ರಾಜ್ಯದಲ್ಲಿ ಮುಳುಗಿ ಹೋಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಪವರ್​ ಸ್ಟಾರ್ ಪವನ್​ ಕಲ್ಯಾಣ ರಾಜಮಂಡ್ರಿಯ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಚಂದ್ರಬಾಬು ನಾಯ್ಡು ಜೊತೆ ಮಾತನಾಡಿದ್ದರು. ಈ ವೇಳೆ ಕೆಲ ಕಾಲ ರಾಜ್ಯ ರಾಜಕೀಯ ಕುರಿತಂತೆ ಚರ್ಚೆ ನಡೆಸಿದ್ದರು. ಈ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪವನ್​ ಕಲ್ಯಾಣ್, ರಾಜಕೀಯ ಷಡ್ಯಂತ್ರ ಮಾಡಿ ಚಂದ್ರಬಾಬು ನಾಯ್ಡು ವಿರುದ್ಧ ಅಕ್ರಮ ಪ್ರಕರಣಗಳನ್ನು ದಾಖಲಿಸಿ ಜೈಲಿಗೆ ತಳ್ಳಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು.

ಆಂಧ್ರದಲ್ಲಿ ವೈಸಿಪಿಯ ಅರಾಜಕ ಆಡಳಿತ ಕೊನೆಗೊಳ್ಳಬೇಕಾದರೆ ಜನಸೇನಾ, ಬಿಜೆಪಿ ಮತ್ತು ಟಿಡಿಪಿ ಒಟ್ಟಾಗಿ ಸ್ಪರ್ಧಿಸಿ ವೈಎಸ್​​ಆರ್​ ಕಾಂಗ್ರೆಸ್​ ಅನ್ನು ಪರಾಭವಗೊಳಿಸಬೇಕು ಎಂದು ಪವನ್​ ಕಲ್ಯಾಣ್​ ಕಳೆದ ಗುರುವಾರ ಹೇಳಿದ್ದರು. ಇದೇ ವಿಷಯವನ್ನು ಕೇಂದ್ರದ ಹಿರಿಯರ ಗಮನಕ್ಕೂ ತರಲಾಗಿದೆ ಎಂದು ಅಂದು ಹೇಳಿದ್ದರು. ಆದರೆ ಈಗ ಟಿಡಿಪಿಗಾಗಿ ಎನ್​​ಡಿಎ ತೊರೆದಿರುವುದಾಗಿ ಪವನ್​ ಕಲ್ಯಾಣ್​ ಘೋಷಿಸಿದ್ದಾರೆ.

ಈ ಮೂಲಕ ಅವರು ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪರ ಬ್ಯಾಟ್​ ಬೀಸಿದ್ದಾರೆ. ಇದೇ ವೇಳೆ ಜಗನ್​ಮೋಹನ್​ ರೆಡ್ಡಿ ಸರ್ಕಾರದ ವಿರುದ್ಧ ಹರಿಹಾಯ್ಡಿದ್ದಾರೆ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ಬಹುಕೋಟಿ ಕೌಶಲಾಭಿವೃದ್ಧಿ ಹಗರಣದ ಆರೋಪದಲ್ಲಿ ಜೈಲು ಸೇರಿದ್ದಾರೆ. ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರನ್ನ ಆಂಧ್ರಪ್ರದೇಶದ ಸಿಐಡಿ ಸೆಪ್ಟೆಂಬರ್ 9 ರಂದು ಬಂಧಿಸಿತ್ತು. ಇದೀಗ ಅವರು ಜೈಲಿನಲ್ಲಿದ್ದಾರೆ. ಟಿಡಿಪಿ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಜಗನ್​ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಅಷ್ಟೇ ಅಲ್ಲ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಿ ಆಂಧ್ರಪ್ರದೇಶದಾದ್ಯಂತ ಪತ್ರ ಚಳವಳಿ ಕೂಡಾ ನಡೆದಿದೆ. ಅವರಿಗೆ ಈಗಾಗಲೇ ಲಕ್ಷಾಂತರ ಪತ್ರಗಳನ್ನು ಅವರಿರುವ ಜೈಲಿಗೆ ಕಳುಹಿಸಿ ಬೆಂಬಲ ನೀಡಲಾಗುತ್ತಿದೆ. ಈ ಪತ್ರಗಳನ್ನು ಪಡೆಯಲೆಂದೇ ಜೈಲು ಆಡಳಿತ ಸಿಬ್ಬಂದಿಯನ್ನ ನೇಮಕ ಮಾಡಿದೆ.

ಇದನ್ನೂ ಓದಿ: ದೆಹಲಿ ಮದ್ಯ ನೀತಿ ಹಗರಣ: ಆಪ್‌ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್​ ಸಿಂಗ್​ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.