ETV Bharat / bharat

ನಾನು ಟಿಪ್ಪು ಸುಲ್ತಾನ್​ ಹೆಸರು ತೆಗೆದುಕೊಳ್ಳುತ್ತೇನೆ.. ನೀವು ಏನು ಮಾಡುತ್ತೀರಿ.. ಕಟೀಲ್​ಗೆ ಓವೈಸಿ ತಿರುಗೇಟು - ಎಂಐಎಂ ಸಂಸದ ಓವೈಸಿ ಸವಾಲು

ನಿಮಗೆ ಟಿಪ್ಪು ಸುಲ್ತಾನ್​ ಬೇಕಾ? ರಾಮನ ಭಕ್ತರು ಬೇಕಾ ಎಂಬ ನಳಿನ್​ ಕುಮಾರ್​ ಕಟೀಲ್​ ಅವರ ಪ್ರಶ್ನೆಗೆ ಎಂಐಎಂ ಅಧ್ಯಕ್ಷ ಅಸಾದುದ್ದೀನ್​ ಓವೈಸಿ ತಿರುಗೇಟು ನೀಡಿದ್ದಾರೆ. ಪ್ರಧಾನಿಗೆ ಹಾಗೂ ಬಿಜೆಪಿಗೆ ಅವರು ಪ್ರಶ್ನೆ ಮಾಡಿದ್ದಾರೆ.

i am taking tipu sultan s name aimim mp owaisi
ನಾನು ಟಿಪ್ಪು ಸುಲ್ತಾನ್​ ಹೆಸರು ತೆಗೆದುಕೊಳ್ಳುತ್ತೇನೆ.. ನೀವು ಏನು ಮಾಡುತ್ತೀರಿ.. ಕಟೀಲ್​ಗೆ ಓವೈಸಿ ತಿರುಗೇಟು
author img

By

Published : Feb 16, 2023, 9:49 AM IST

ಹೈದರಾಬಾದ್​: ನಾನು ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಕೊಳ್ಳುತ್ತಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ನೋಡುತ್ತೇನೆ ಎಂದು ಎಂಐಎಂ ಸಂಸದ ಓವೈಸಿ ಸವಾಲು ಹಾಕಿದ್ದಾರೆ. ಈ ರಾಜ್ಯಕ್ಕೆ ಟಿಪ್ಪು ಬೇಕೇ ಅಥವಾ ರಾಮನ ಮತ್ತು ಹನುಮಂತನ ಭಕ್ತರು ಬೇಕೇ? ಹನುಮಂತನ ನೆಲದಲ್ಲಿ ನಾನು ಈ ಪ್ರಶ್ನೆ ಕೇಳುತ್ತಿದ್ದೇನೆ - ಟಿಪ್ಪು ಬೇಕಾ, ಶ್ರೀರಾಮನ ಭಜನೆಗಳನ್ನು ಹಾಡುವವರು ಮತ್ತು ಹನುಮಂತ ದೇವರನ್ನು ಪೂಜಿಸುವವರು ಬೇಕಾ ಎಂದು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್​ ಕಟೀಲ್​ ಕೊಪ್ಪಳದ ಯಲಬುರ್ಗಾದಲ್ಲಿ ಹೇಳಿದ್ದರು.

ಅಸಾದುದ್ದೀನ್​ ತಿರುಗೇಟು: ಕರ್ನಾಟಕದ ಬಿಜೆಪಿ ಅಧ್ಯಕ್ಷ ಮಾತಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ನಾನು ಟಿಪ್ಪು ಸುಲ್ತಾನ್ ಹೆಸರನ್ನು ತೆಗೆದುಕೊಳ್ಳುತ್ತಿದ್ದೇನೆ. ನೀವು ಏನು ಮಾಡುತ್ತೀರಿ ಎಂದು ನೋಡುತ್ತೇನೆ, ಕರ್ನಾಟಕ ಬಿಜೆಪಿ ಅಧ್ಯಕ್ಷರು ಹೇಳಿದ್ದನ್ನು ಪ್ರಧಾನಿ ಒಪ್ಪುತ್ತಾರೆಯೇ? ಇದು ಹಿಂಸೆ ಹಾಗೂ ಪ್ರಚೋದಿಸುವಂತಹ ಕರೆಯಾಗಿದೆ. ಕರ್ನಾಟಕದ ಬಿಜೆಪಿ ಸರ್ಕಾರ ಇದರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ? ಇದು ದ್ವೇಷದ ಭಾಷಣ ಅಲ್ಲವೇ ಎಂದು ಎಐಎಂಐಎಂ ಸಂಸದ ಓವೈಸಿ ಪ್ರಶ್ನಿಸಿದ್ದಾರೆ.

ಮುಂದುವರಿದು ಮಾತನಾಡಿದ ಅವರು, ಉತ್ತರಪ್ರದೇಶದಲ್ಲಿ 'ಬುಲ್ಡೋಜರ್ ರಾಜಕೀಯ' ಮಾಡುತ್ತಿರುವವರು ತಾಯಿ - ಮಗಳ ಪ್ರಾಣ ತೆಗೆದಿದ್ದಾರೆ. ಅವರು ಬುಲ್ಡೋಜರ್ ಮೂಲಕ ಸರ್ಕಾರವನ್ನು ನಡೆಸಲು ಬಯಸುತ್ತಾರೆ, ಸಂವಿಧಾನದಂತೆ ಅಲ್ಲ. ಇಷ್ಟೆಲ್ಲ ಮಾಡುವುದರಿಂದ ಅವರಿಗೆ ರಾಜಕೀಯವಾಗಿ ಏನೂ ಲಾಭವಾಗುವುದಿಲ್ಲ. ತೆಲಂಗಾಣದಲ್ಲಿ ಅವರು ವಿಫಲರಾಗುತ್ತಾರೆ ಎಂದು AIMIM ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಇದನ್ನು ಓದಿ: ಜನರು ಕೃಷ್ಣದೇವರಾಯನ ಆರಾಧಿಸ್ತಾರೆ, ಟಿಪ್ಪುವಿನ್ನಲ್ಲ: ನಳೀನ್​ ಕುಮಾರ್​ ಕಟೀಲ್​

ಓವೈಸಿ ಹೇಳಿಕೆಗೆ ತೆಲಂಗಾಣ ಬಿಜೆಪಿ ಅಧ್ಯಕ್ಷರ ರಿಯಾಕ್ಷನ್​: ಇದೇ ವೇಳೆ, ತೆಲಂಗಾಣ ಸೆಕ್ರೆಟರಿಯೇಟ್‌ ತಾಜ್‌ಮಹಲ್‌ನಂತೆ ಕಾಣುತ್ತಿರುವುದಕ್ಕೆ ತುಂಬಾ ಖುಷಿಯಾಗಿದೆ ಎಂದು ಓವೈಸಿ ಹೇಳಿದ್ದಾರೆ. ತಾಜ್ ಮಹಲ್ ಸಮಾಧಿ ಎಂದರೆ ಓವೈಸಿಗೆ ಸೆಕ್ರೆಟರಿಯೇಟ್ ಗೋರಿಯಂತೆ ಕಾಣುತ್ತಿದೆ. ಓವೈಸಿಯ ಕಣ್ಣಲ್ಲಿ ಸಂತೋಷ ಕಾಣಲು ಕೆಸಿಆರ್ ತಾಜ್ ಮಹಲ್‌ನಂತೆ ಸೆಕ್ರೆಟರಿಯೇಟ್ ನಿರ್ಮಿಸುತ್ತಿದ್ದಾರೆ ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಲೇವಡಿ ಮಾಡಿದ್ದಾರೆ.

ಕರ್ನಾಟಕ ಬಿಜೆಪಿ ಅಧ್ಯಕ್ಷ ಕೊಪ್ಪಳದಲ್ಲಿ ಹೇಳಿದ್ದೇನು?: ಈ ರಾಜ್ಯಕ್ಕೆ ಟಿಪ್ಪುವಿನ ಸಂತತಿ ಬೇಕೇ ಅಥವಾ ರಾಮನ ಮತ್ತು ಹನುಮಂತನ ಭಕ್ತರು ಬೇಕೇ?. ಶ್ರೀರಾಮನ ಭಜನೆಗಳನ್ನು ಹಾಡುವವರು ಮತ್ತು ಹನುಮಂತ ದೇವರನ್ನು ಆಚರಿಸುವವರು ಇಲ್ಲಿ ಉಳಿಯಬೇಕು ಎಂದು ಯಲಬುರ್ಗಾದಲ್ಲಿ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಹೇಳಿದ್ದರು.

ನಾವು ರಾಮ ಮತ್ತು ಹನುಮಂತನ ಭಕ್ತರು. ಹಾಗಾದರೆ ನಾನು ಯಲಬುರ್ಗಾದ ಜನರನ್ನು ಕೇಳುತ್ತೇನೆ. ನೀವು ಹನುಮಂತನನ್ನು ಪೂಜಿಸುತ್ತೀರಾ ಅಥವಾ ಟಿಪ್ಪು ಭಜನೆ ಹಾಡುತ್ತೀರಾ? ಎಂದು ಸಭೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರನ್ನು ಕೇಳಿದ್ದರು. ನಳಿನ್ ಕುಮಾರ್ ಕಟೀಲ್​ ಅವರ ಈ ಮಾತು ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

ಇದನ್ನು ಓದಿ: ಸಿದ್ದರಾಮಯ್ಯ ರಾಜಕಾರಣ ಬಿಟ್ಟು ಜ್ಯೋತಿಷ್ಯ ಹೇಳೋದು ಒಳ್ಳೇದು : ನಳಿನ್ ಕುಮಾರ ಕಟೀಲ್ ಲೇವಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.