ಹೈದರಾಬಾದ್: ಜ್ವರದಿಂದ ಬಳಲುತ್ತಿದ್ದ ಕಾಲಿವುಡ್ ನಟ ಸಿಂಬು(ಸಿಲಂಬರಸನ್) ಇದೀಗ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೇ ವೇಳೆ ತಾವು ಆಸ್ಪತ್ರೆಯಲ್ಲಿದ್ದಾಗ ಗುಣಮುಖರಾಗಲು ಪ್ರಾರ್ಥಿಸಿದ ತಮ್ಮ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.
-
Thanks for all your blessings I am back home & recovering 🙏🏻#NeengailaamaNaanilla ❤️
— Silambarasan TR (@SilambarasanTR_) December 12, 2021 " class="align-text-top noRightClick twitterSection" data="
">Thanks for all your blessings I am back home & recovering 🙏🏻#NeengailaamaNaanilla ❤️
— Silambarasan TR (@SilambarasanTR_) December 12, 2021Thanks for all your blessings I am back home & recovering 🙏🏻#NeengailaamaNaanilla ❤️
— Silambarasan TR (@SilambarasanTR_) December 12, 2021
ಮೊನ್ನೆಯಷ್ಟೇ ನಟ ಸಿಂಬು ಅವರು ತೀವ್ರ ಜ್ವರದಿಂದಾಗಿ ಖಾಸಗಿ ಆಸ್ಪತ್ರೆಗೆ ದಿಢೀರ್ ದಾಖಲಾಗಿದ್ದರು. ಸಿಂಬು ಸ್ನೇಹಿತ ಹಾಗೂ ನಟರಾದ ಮಹತ್ ಆಸ್ಪತ್ರೆಗೆ ದಾಖಲಾದ ಬಗ್ಗೆ ಮಾಹಿತಿ ನೀಡಿದ್ದರು. ಈ ವೇಳೆ, ಸಿಂಬು ಶೀಘ್ರ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು, ಹಿತೈಷಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಾರ್ಥಿಸಿದ್ದರು.
ಇದನ್ನೂ ಓದಿ: ಇದೇ 17ಕ್ಕೆ ಒಟಿಟಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಕನ್ನಡಿಗ ರಿಲೀಸ್
ನಟ ಸಿಂಬು ಅವರು ಇಂದು ಜ್ವರದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತಮಗಾಗಿ ಪ್ರಾರ್ಥಿಸಿದ ಎಲ್ಲಾ ಅಭಿಮಾನಿಗಳಿಗೆ ಟ್ವಿಟರ್ನಲ್ಲಿ ಧನ್ಯವಾದ ಹೇಳಿದ್ದಲ್ಲದೇ , ನಾನೀಗ ಮನೆಗೆ ಬಂದಿದ್ದೇನೆ. 'ನೀವಿಲ್ಲದೇ ನಾನಿಲ್ಲ' ಎಂದು ಹೃದಯಸ್ಪರ್ಶಿ ಸಾಲುಗಳನ್ನು ಬರೆದುಕೊಂಡಿದ್ದಾರೆ.