ETV Bharat / bharat

'ನಾನು ಜಯಲಲಿತಾ ಸಹೋದರ.. ಆಸ್ತಿಯಲ್ಲಿ ನಂಗೂ 50% ಕೊಡಿ': ಮೈಸೂರಿನ ವ್ಯಕ್ತಿಯಿಂದ ಮನವಿ - Vasudevan from Vyasarapuram in Mysuru Karnataka has filed a petition in the Madras High Court

1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ನಂತರ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು. ಈಗ ನಾನೂ ಸಹ ಜಯಲಲಿತಾ ಅವರ ಉತ್ತರಾಧಿಕಾರಿ ಎಂದು ಮೈಸೂರಿನ ವ್ಯಕ್ತಿ ಹೇಳುತ್ತಿದ್ದಾರೆ.

ನಾನು ಜಯಲಲಿತಾ ಸಹೋದರ ಆಸ್ತಿಯಲ್ಲಿ ನನಗೂ 50 ರಷ್ಟು ಪಾಲು ಕೊಡಿ ಎಂದು ವ್ಯಕ್ತಿಯ ಮನವಿ

author img

By

Published : Jul 10, 2022, 3:08 PM IST

ಚೆನ್ನೈ(ತಮಿಳುನಾಡು): ಕರ್ನಾಟಕದ ಮೈಸೂರಿನ ವ್ಯಾಸಪುರಂನ ವಾಸುದೇವನ್ (83) ಅವರು ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸಹೋದರ ಎಂದು ಹೇಳಿಕೊಂಡು ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಯಲಲಿತಾ ಅವರ ತಂದೆ ಆರ್. ಜಯರಾಮ್. ಜಯರಾಮ್​ ನನ್ನ ತಂದೆಯೂ ಹೌದು. ಜಯರಾಮ್ ಅವರ ಮೊದಲ ಪತ್ನಿ ಜೆ. ಜಯಮ್ಮ ಅವರಿಗೆ ನಾನು ಒಬ್ಬನೇ ಮಗ ಮತ್ತು ನಾನು ಅವರ ಏಕೈಕ ವಾರಸುದಾರ ಎಂದಿದ್ದಾರೆ.

ಜಯರಾಮ್ ಅವರು ವೇದವಲ್ಲಿ ಅಲಿಯಾಸ್ ವೇದಮ್ಮ ಅವರನ್ನು ಎರಡನೇ ಬಾರಿಗೆ ವಿವಾಹವಾದರು. ಜಯಕುಮಾರ್ ಮತ್ತು ಜಯಲಲಿತಾ ಅವರ ಮಕ್ಕಳು. ಈ ಮೂಲಕ ಜಯಲಲಿತಾ ಮತ್ತು ಜಯಕುಮಾರ್ ನನ್ನ ಸಹೋದರ ಮತ್ತು ಸಹೋದರಿಯರು ಎಂದು ವಿವರಿಸಿದ್ದಾರೆ.

1950ರಲ್ಲಿ ನನ್ನ ತಾಯಿ ಜಯಮ್ಮ ಮೈಸೂರು ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ ಮೊಕದ್ದಮೆ ಹೂಡಿದಾಗ ಆ ಪ್ರಕರಣದಲ್ಲಿ ನನ್ನ ತಂದೆಯ ಎರಡನೇ ಪತ್ನಿ ವೇದವಲ್ಲಿ, ಜಯಕುಮಾರ್ ಮತ್ತು ಜಯಲಲಿತಾ ಅವರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿತ್ತು. ನಂತರ ಪ್ರಕರಣ ಇತ್ಯರ್ಥದಲ್ಲಿ ಅಂತ್ಯಗೊಂಡಿತು. ಜಯಕುಮಾರ್ ಅವರು ಜಯಲಲಿತಾ ಅವರಿಗಿಂತ ಮುಂಚೆಯೇ ನಿಧನರಾದರು. ಹಾಗಾಗಿ ಇಂದು ನಾನು ಸಹೋದರನಾಗಿ ಜಯಲಲಿತಾ ಅವರ ನೇರ ಉತ್ತರಾಧಿಕಾರಿ. ಹಾಗಾಗಿ ಜಯಲಲಿತಾ ಅವರ ಆಸ್ತಿಯಲ್ಲಿ ಶೇ 50ರಷ್ಟು ನನಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ 2020 ರಲ್ಲಿ ತೀರ್ಪು ನೀಡಿ ಜೆ. ದೀಪಕ್ ಮತ್ತು ಜೆ. ದೀಪಾ ಮಾತ್ರ ಜಯಲಲಿತಾ ಅವರ ಉತ್ತರಾಧಿಕಾರಿಗಳು ಎಂದು ಹೇಳಿತ್ತು. ಆ ತೀರ್ಪಿನಲ್ಲಿ ನನ್ನನ್ನು ಸೇರಿಸಿ ತಿದ್ದುಪಡಿ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಪ್ರಮುಖ ವಿಷಯ ಎಂದರೆ ಕರ್ನಾಟಕದ ಅಮೃತಾ ಅವರು ನಟ ಶೋಬನ್‌ಬಾಬು ಮತ್ತು ಜಯಲಲಿತಾ ಅವರ ಪುತ್ರಿ ಎಂದು ಹೇಳಿಕೊಂಡು ಮೊಕದ್ದಮೆ ಹೂಡಿದ್ದರು. ಆದರೆ, ನಂತರ ಹೈಕೋರ್ಟ್ 2018 ರಲ್ಲಿ ಪ್ರಕರಣವನ್ನು ಸುಳ್ಳು ಕೇಸ್ ಎಂದು ವಜಾಗೊಳಿಸಿತ್ತು.

ಇದನ್ನೂ ಓದಿ: ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಹೆಚ್ಚಳ: ನದಿಪಾತ್ರದ ಜನರಿಗೆ ಎಚ್ಚರಿಕೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.