ನವದೆಹಲಿ: ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಪುನರ್ರಚನೆಯಲ್ಲಿ ರಾಜ್ಯದಿಂದ ನಾಲ್ವರಿಗೆ ಸಚಿವ ಸ್ಥಾನ ನೀಡಲಾಗಿದೆ. ಈ ಪೈಕಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೂ ಮೋದಿ ಸಂಪುಟದಲ್ಲಿ ಅವಕಾಶ ದೊರೆತಿದೆ. ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ಮತ್ತು ರೈತರ ಅಭಿವೃದ್ಧಿ ರಾಜ್ಯ ಖಾತೆ ಹೊಣೆ ನೀಡಲಾಗಿದೆ.
ತಮಗೆ ನೀಡಿರುವ ಖಾತೆ ಕುರಿತು ಮಾತನಾಡಿರುವ ಸಚಿವೆ, ನಾನು ರೈತನ ಮಗಳು. ರೈತರ ಪರ ಕೆಲಸ ಮಾಡುವ ಜವಾಬ್ದಾರಿ ನನಗೆ ಸಿಕ್ಕಿದೆ. ರೈತರ ನೋವು ನನಗೆ ಸರಿಯಾಗಿ ತಿಳಿದಿದೆ. ಅವರ ಕಲ್ಯಾಣಕ್ಕೋಸ್ಕರ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಸರ್ಕಾರದ ಪ್ರತಿಯೊಂದು ಲಾಭ ಹಾಗೂ ವಿವಿಧ ಯೋಜನೆಗಳು ಅನ್ನದಾತರಿಗೆ ತಲುಪುವಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಎಂದು ಭರವಸೆ ಕೊಟ್ಟರು.
-
I have been given the responsibility to work for farmers. I am a farmer's daughter, so I know their pain. I will work for the welfare of farmers & see to it that they get benefitted from the govt: Shobha Karandlaje, MoS in the Ministry of Agriculture and Farmers Welfare pic.twitter.com/wM50rTl5Uv
— ANI (@ANI) July 8, 2021 " class="align-text-top noRightClick twitterSection" data="
">I have been given the responsibility to work for farmers. I am a farmer's daughter, so I know their pain. I will work for the welfare of farmers & see to it that they get benefitted from the govt: Shobha Karandlaje, MoS in the Ministry of Agriculture and Farmers Welfare pic.twitter.com/wM50rTl5Uv
— ANI (@ANI) July 8, 2021I have been given the responsibility to work for farmers. I am a farmer's daughter, so I know their pain. I will work for the welfare of farmers & see to it that they get benefitted from the govt: Shobha Karandlaje, MoS in the Ministry of Agriculture and Farmers Welfare pic.twitter.com/wM50rTl5Uv
— ANI (@ANI) July 8, 2021
ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ದುಡಿದಿದ್ದೇನೆ. ನನ್ನ ಕೆಲಸ ಮೆಚ್ಚಿ ಇದೀಗ ಸಚಿವ ಸ್ಥಾನ ನೀಡಲಾಗಿದ್ದು, ಎಲ್ಲರೂ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ ಎಂದು ನಿನ್ನೆ ಹೇಳಿದ್ದರು.
ಇದನ್ನೂ ಓದಿರಿ: ಕೋವಿಡ್ನಿಂದ ಮೃತಪಟ್ಟ ರೈತರ ಮಾಹಿತಿ ಕಲೆಹಾಕಿ ಶೀಘ್ರದಲ್ಲೇ ಸಾಲ ಮನ್ನಾ: ಎಸ್.ಟಿ.ಸೋಮಶೇಖರ್
ದೇಶದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ರಾಜ್ಯದಿಂದಲೂ ಅದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಚಿವೆ ಶೋಭಾ ಕರಂದ್ಲಾಜೆ ಯಾವ ರೀತಿಯಾಗಿ ನಡೆದುಕೊಳ್ಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.