ETV Bharat / bharat

ವರದಕ್ಷಿಣೆ ಬೇಡ...! ಸಾಮಾಜಿಕ ಪಿಡುಗಿನ ವಿರುದ್ಧ ವಿನೂತನ ಹೋರಾಟ ನಡೆಸುತ್ತಿರುವ ಯುವಕ

author img

By ETV Bharat Karnataka Team

Published : Dec 21, 2023, 11:56 AM IST

ಭಾರತದಲ್ಲಿ ವರದಕ್ಷಿಣೆ ಎಂಬುದು ಕಾನೂನು ಬಾಹಿರವಾಗಿದ್ದರೂ ಅದು ಸಮೃದ್ಧವಾಗಿ ಬೆಳೆಯುತ್ತಿದೆ. ಪ್ರತಿ ವರ್ಷ ಈ ವರದಕ್ಷಿಣೆಯಿಂದಾಗಿ 8 ಸಾವಿರ ಸಾವು ಸಂಭವಿಸುತ್ತದೆ

hydrabad-guy-i-dont-want-dowry-dot-com-organizes-swayamvar

ಹೈದರಾಬಾದ್​: ವರದಕ್ಷಿಣೆ ಎಂಬುದು ದೊಡ್ಡ ಸಾಮಾಜಿಕ ಪಿಡುಗು. ಇದೇ ಕಾರಣದಿಂದಲೇ ಮಾಜಿ ಪ್ರಧಾನ ಮಂತ್ರಿ ಲಾಲ್​ ಬಹದ್ಧೂರ್​ ಶಾಸ್ತ್ರಿ ಅವರು ತಮ್ಮ ಮದುವೆ ಸಮಾರಂಭವಾದಲ್ಲಿ ನನಗೆ ವರದಕ್ಷಿಣೆ ಬೇಡ ಎಂದು ಹೇಳಿದ್ದರು. ಇವರ ಹೇಳಿಕೆಯಿಂದಲೇ ಪ್ರೇರಣೆಗೊಂಡ ಸತ್ಯನರೇಶ್​ ಇದೀಗ ತಮ್ಮ ಐ ಡೋಂಟ್​ ವಾಂಟ್​ ಡೌರಿ.ಕಾಂ ಎಂಬ ವೆಬ್​ ಸೈಟ್​ ಮೂಲಕ ಸ್ವಯಂವರ (ವಧು-ವರ ವೇದಿಕೆ)ಕ್ಕೆ ಮುಂದಾಗಿದೆ. ಇದೇ ತಿಂಗಳ ಡಿಸೆಂಬರ್​ 23 ರಂದು ಜೂಮ್ ಅ್ಯಪ್​​​ ಮೂಲಕ ಈ ಸ್ವಯಂವರ ಏರ್ಪಡಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆವರೆಗೆ ಈ ಸ್ವಯಂವರ ನಡೆಯಲಿದ್ದು, ಈಗಾಗಲೇ ಇದಕ್ಕೆ 300 ಮಂದಿ ನೋಂದಣಿ ಮಾಡಿದ್ದಾರೆ.

ವರದಕ್ಷಿಣೆ ನಿಷೇಧದ ಗುರಿ: ವರದಕ್ಷಿಣೆಯನ್ನು ಸರ್ಕಾರ ಕಾನೂನಿನ ಚೌಕಟ್ಟಿನಲ್ಲಿ ತಂದಿದ್ದು, ಇದನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಆದರೂ ನಮ್ಮಲ್ಲಿ ಈ ವರದಕ್ಷಿಣೆ ಹಾವಳಿ ಕಡಿಮೆ ಆಗಿಲ್ಲ. ಮದುವೆ ಆಗುವ ಯುವತಿ ಉನ್ನತ ಶಿಕ್ಷಣ ಪಡೆದು ಉದ್ಯೋಗಿಯಾಗಿದ್ದರೂ, ಆಕೆಯ ಕುಟುಂಬವನ್ನು ಈ ವರದಕ್ಷಿಣೆ ಸಮಸ್ಯೆ ಕಾಡುತ್ತದೆ. ಇದೇ ಕಾರಣಕ್ಕೆ ಇಂದಿಗೂ ನಮ್ಮಲ್ಲಿ ಹೆಣ್ಣು ಮಕ್ಕಳು ಜನಿಸಿದಾಗ ಹೊರೆ ಎಂದು ನೋಡುವವರಿದ್ದಾರೆ. ಈ ವರದಕ್ಷಿಣೆ ಬೇರು ಸಮೇತ ಕಿತ್ತು ಹಾಕುವ ಪಣವನ್ನು ಮದುವೆಯಾಗುವ ಯುವಕ - ಯುವತಿಯರು ತೆಗೆದುಕೊಳ್ಳಬೇಕಿದೆ. ಈ ರೀತಿ ವರದಕ್ಷಿಣೆ ಇಲ್ಲದೇ ಮದುವೆಯಾಗುವ ಮಂದಿ ಪ್ರತಿ ವರ್ಷ ನಡೆಯುವ ಈ ಸ್ವಯಂವರದಲ್ಲಿ ಭಾಗಿಯಾಗಬಹುದಾಗಿದೆ. ಈ ವೇದಿಕೆಯಲ್ಲಿ ನೂರಾರು ಮಂದಿ ತಮಗೆ ಯಾವುದೇ ವರದಕ್ಷಿಣೆ ಬೇಡ ಎಂದು ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಯುವಕನ ಅಭಿಯಾನ: ಕಳೆದ ಹತ್ತು ವರ್ಷಗಳಿಂದ ಇಂತಹ ಒಂದು ಪ್ರಯತ್ನವನ್ನು ಸತ್ಯ ನರೇಶ್​ ಮಾಡಿಕೊಂಡು ಬರುತ್ತಿದ್ದಾರೆ. 2006ರಲ್ಲಿ ಐ ಡೋಂಟ್​ ವಾಂಟ್​ ಡೌರಿ ಎಂಬ ವೆಬ್​ಸೈಟ್​ ಆರಂಭಿಸುವ ಮೂಲಕ ವರದಕ್ಷಿಣೆ ವಿರುದ್ಧ ಅಭಿಯಾನ ಆರಂಭಿಸಿದರು. ಕಳೆದ 60 ವರ್ಷದಿಂದ ಭಾರತದಲ್ಲಿ ವರದಕ್ಷಿಣೆ ಎಂಬುದು ಅಕ್ರಮವಾಗಿದ್ದರೂ ಅದು ಸಮೃದ್ಧವಾಗಿ ಬೆಳೆಯುತ್ತಿದೆ. ಪ್ರತಿ ವರ್ಷ ಈ ವರದಕ್ಷಿಣೆಯಿಂದಾಗಿ 8 ಸಾವಿರ ಸಾವು ಸಂಭವಿಸುತ್ತದೆ. ಈ ವರದಕ್ಷಿಣೆ ಬಡ ಕುಟುಂಬವನ್ನು ಸಾಲಗಾರರನ್ನಾಗಿ ಮಾಡುತ್ತದೆ.

ಪ್ರತಿಯೊಬ್ಬರಿಗೂ ಹಣಬೇಕು. ಇದಕ್ಕಾಗಿ ಪ್ರತಿಯೊಬ್ಬರು ಅಡ್ಡ ದಾರಿ ಹಿಡಿಯುತ್ತಾರೆ. ಜನರು ಆಸೆ ಬುರುಕರು. ಭಾರತದ ಸಂಪ್ರದಾಯದಲ್ಲಿ ಮಾತ್ರ ಈ ವರದಕ್ಷಿಣೆ ಎಂಬುದು ಆಳವಾಗಿ, ಶತಮಾನಗಳಿಂದ ಬೇರೂರಿದೆ ಎನ್ನುತ್ತಾರೆ ನರೇಶ್​.

ಹೈದರಾಬಾದ್​ನಲ್ಲಿ ವೆಬ್​ ಡಿಸೈನರ್​​ ಆಗಿರುವ ಇವರು ಕಾಲೇಜಿನ ಸಹಪಾಠಿಯಾಗಿದ್ದ ಬಡಕುಟುಂಬದ ಸ್ನೇಹಿತೆಯೊಬ್ಬರು ಈ ವರದಕ್ಷಿಣೆಯಿಂದ ವರನನ್ನು ಹುಡುಕಲಿ ಸಾಧ್ಯವಾಗಲಿಲ್ಲ. ಬಳಿಕ ಆಕೆ ಆತ್ಮಹತ್ಯೆಗೆ ಮುಂದಾದಳು. ಈ ಘಟನೆ ಇವರ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದು, ಇದೆ ಕಾರಣದಿಂದ ಈ ಅಭಿಯಾನಕ್ಕೆ ಮುಂದಾಗಿ ತಮ್ಮ ಸಹೋದರಿಯರಿಗೆ ವರದಕ್ಷಿಣೆ ಇಲ್ಲದೇ ಮದುವೆ ನಡೆಸಿದರು.

ಇದೇ ಕಾರಣದಿಂದ ಈ ವೇದಿಕೆ ಸೃಷ್ಟಿಸಲಾಗಿದೆ. ಇಲ್ಲಿ ವರದಕ್ಷಿಣೆ ವೇಡ ಎಂಬ ಸಮಾನ ಮನಸ್ಕರು ಮದವೆಯಾಗಬಹುದು. ಇದೀಗ ಈ ಜಾಲತಾಣಕ್ಕೆ ನೋಂದಣಿ ಮಾಡುವವರ ಸಂಖ್ಯೆ ಕೂಡ ಹೆಚ್ಚಿದೆ. ಪ್ರತಿ ವರ್ಷ ವೇದಿಕೆಯಲ್ಲಿ ನಡೆಸುವ ಸ್ವಯಂವರದಲ್ಲಿ ಅನೇಕ ಮಂದಿ ವೈವಾಹಜಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜಾಲತಾಣಕ್ಕೆ ವರದಕ್ಷಿಣೆ ಬೇಡ ಎಂಬ ವಧು- ವರ ನೋಂದಣಿ ಆಗಬಹುದಾಗಿದೆ. ಇದೇ ಡಿಸೆಂಬರ್​ 23 ರಂದು ಸ್ವಯಂವರ ನಡೆಯತ್ತಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗೆ 98858 10100 ಈ ಸಂಖ್ಯೆಗೆ ಕರೆ ಮಾಡಬಹುದು. ಇಲ್ಲ www.idontwantdowry.com ಭೇಟಿ ನೀಡಬಹುದಾಗಿದೆ ಎನ್ನುತ್ತಾರೆ ನರೇಶ್​.

ಇದನ್ನೂ ಓದಿ: ಡಂಕಿ ತೆರೆಗೆ: ಸಿನಿಪ್ರಿಯರು ಹೀಗಂದ್ರು! ಹೀಗಿದೆ ಸೋಷಿಯಲ್​ ಮೀಡಿಯಾದ ಚಿತ್ರ ವಿಮರ್ಶೆ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.