ETV Bharat / bharat

ಕೇಂದ್ರೀಯ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್ ಅತ್ಯಾಚಾರಕ್ಕೆ ಯತ್ನ - ಹೈದರಾಬಾದ್​ನಲ್ಲಿ ಅತ್ಯಾಚಾರಕ್ಕೆ ಯತ್ನ

ಹೈದರಾಬಾದ್​​ ಕೇಂದ್ರೀಯ ವಿಶ್ವವಿದ್ಯಾಲಯ ಪ್ರೊಫೆಸರ್​ವೊಬ್ಬರು ಶುಕ್ರವಾರ ಸಂಜೆ ವಿದ್ಯಾರ್ಥಿನಿಗೆ ಪುಸ್ತಕ ಕೊಡುವ ನೆಪದಲ್ಲಿ ತಮ್ಮ ನಿವಾಸಕ್ಕೆ ಕರೆಸಿಕೊಂಡು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಜರುಗಿದೆ.

hyderabad-varsity-prof-held-for-misbehaving-with-foreign-student
ಕೇಂದ್ರೀಯ ವಿವಿಯಲ್ಲಿ ವಿದೇಶಿ ವಿದ್ಯಾರ್ಥಿನಿ ಮೇಲೆ ಪ್ರೊಫೆಸರ್ ಅತ್ಯಾಚಾರಕ್ಕೆ ಯತ್ನ
author img

By

Published : Dec 3, 2022, 3:22 PM IST

ಹೈದರಾಬಾದ್ (ತೆಲಂಗಾಣ): ಪ್ರೊಫೆಸರ್​ವೊಬ್ಬರು ವಿದೇಶಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಹೈದರಾಬಾದ್​​ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಹಿಂದಿ ವಿಭಾಗದ ಪ್ರೊಫೆಸರ್, ಆರೋಪಿ ​ರವಿ ರಜಾನ್​ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಥಾಯ್ಲೆಂಡ್‌ನ ವಿದ್ಯಾರ್ಥಿನಿಯೊಬ್ಬಳು ವಿಶ್ವವಿದ್ಯಾಲಯದಲ್ಲಿ ಎಂಎ ಹಿಂದಿ ಓದುತ್ತಿದ್ದು, ಶುಕ್ರವಾರ ಸಂಜೆ ವಿದ್ಯಾರ್ಥಿನಿಗೆ ಪುಸ್ತಕ ಕೊಡುವ ನೆಪದಲ್ಲಿ ​ಪ್ರೊಫೆಸರ್ ರವಿ ರಜಾನ್​ ಕ್ಯಾಂಪಸ್‌ನ ಬಳಿಯಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲು ಯತ್ನಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿನಿಯು ​ಪ್ರೊಫೆಸರ್​ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.

ನಂತರ ​ಪ್ರೊಫೆಸರ್ ಕೃತ್ಯದ ಬಗ್ಗೆ ಗಚಿಬೌಲಿ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿನಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಆರೋಪಿ ರವಿ ರಂಜನ್​ರನ್ನು ಪೊಲೀಸರು ವಶಕ್ಕೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾದಾಪುರ ಡಿಸಿಪಿ ಶಿಲ್ಪವಲ್ಲಿ ತಿಳಿಸಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ತಕ್ಷಣವೇ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಆರೋಪಿ ​ಪ್ರೊಫೆಸರ್ ರವಿ ರಜಾನ್​​ರನ್ನು ಅಮಾನತುಗೊಳಿಸಿದೆ. ಇತ್ತ, ಪ್ರೊಫೆಸರ್ ಕೃತ್ಯ ವಿದ್ಯಾರ್ಥಿಗಳು ಬೆಚ್ಚಿಬಿದ್ದಿದ್ದಾರೆ. ಕೂಡಲೇ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿಶ್ವವಿದ್ಯಾಲಯದ ಎದುರು ಧರಣಿ ನಡೆಸಿ, ಘೋಷಣೆಗಳನ್ನು ಕೂಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹೆಚ್ಚುವರಿ ಪೊಲೀಸ್​ ಪಡೆಗಳನ್ನು ರವಾನಿಸಲಾಗಿದೆ.

ಇದನ್ನೂ ಓದಿ: ಗೋವಾದಲ್ಲಿ ನೇಪಾಳದ ವ್ಯಕ್ತಿಗಳಿಂದ ರಷ್ಯಾ ಮಹಿಳೆ ಮೇಲೆ ಅತ್ಯಾಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.