ಕೋಯಿಕ್ಕೋಡ್(ಕೇರಳ): ಕೋಯಿಕ್ಕೋಡ್‌ನ ಎನ್‌ಐಟಿ ಮೆಗಾ ಬಾಯ್ಸ್ ಹಾಸ್ಟೆಲ್ ಕಟ್ಟಡದಿಂದ ವಿದ್ಯಾರ್ಥಿಯೊಬ್ಬ ಜಿಗಿದು ಸಾವನ್ನಪ್ಪಿದ್ದಾನೆ. ಮೃತ ವಿದ್ಯಾರ್ಥಿ ಹೈದರಾಬಾದ್ ಮೂಲದ ಚೆನ್ನುಪತಿ ಯಶವಂತ್ (20) ಎಂದು ತಿಳಿದು ಬಂದಿದೆ.
ಮೃತ ಯಶವಂತ್ ಹೈದರಾಬಾದ್‌ನ ಜಯನಗರ ಸಾಯಿ ಇಂದಿರಾ ರೆಸಿಡೆಂಟ್ಸ್ ಕಾಲೋನಿಯ ನಿವಾಸಿ ಕೇರಳದ ಎನ್‌ಐಟಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಟೆಕ್ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.
ಎನ್‌ಐಟಿ ಮೆಗಾ ಬಾಯ್ಸ್ ಹಾಸ್ಟೆಲ್‌ನ ಒಂಬತ್ತನೇ ಮಹಡಿಯಲ್ಲಿ ವಿದ್ಯಾರ್ಥಿ ವಾಸವಾಗಿದ್ದ. ಮೂರನೇ ಮಹಡಿಯಿಂದ ಜಿಗಿದಿದ್ದಾರೆ, ತಕ್ಷಣವೇ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿ ಬರೆದ ಸೂಸೈಡ್ ನೋಟ್ ಪೊಲೀಸರಿಗೆ ಸಿಕ್ಕಿದ್ದು. ಆರ್ಥಿಕ ಸಮಸ್ಯೆಯೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ.
ಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಳ್ಳುವ ಆತಂಕದಲ್ಲಿದ್ದರು ಎಂದು ಸಹಪಾಠಿಗಳು ಹೇಳುತ್ತಾರೆ. ಆತ್ಮಹತ್ಯೆ ಘಟನೆಯ ಬಗ್ಗೆ ಕೇರಳದ ಕುಂದಮಂಗಲಂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆತ್ಮಹತ್ಯೆಯಲ್ಲ ಕೊಲೆ: ತೆಲಂಗಾಣ ಐಟಿ ಮತ್ತು ಕೈಗಾರಿಕಾ ಸಚಿವ ಕೆ ಟಿ ರಾಮರಾವ್, ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ, ವಿದ್ಯಾರ್ಥಿಯ ತಂದೆ ನಾಗೇಶ್ವರರಾವ್ ಮಾಡಿರುವ ಟ್ವೀಟ್ ಅನ್ನು ಕೆಟಿಆರ್ ರಿಟ್ವೀಟ್ ಮಾಡಿದ್ದು, ತಮ್ಮ ಮಗನ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಘಟನ ನಡೆದ ಸ್ಥಳದಲ್ಲಿ ಸಿಕ್ಕ ಆತ್ಮಹತ್ಯೆ ಪತ್ರವನ್ನು ತನ್ನ ಮಗ ಬರೆದದ್ದಲ್ಲ ಎಂದು ಮೃತ ವಿದ್ಯಾರ್ಥಿ ತಂದೆ ಆರೋಪಿಸಿದ್ದಾರೆ.
ಇದನ್ನೂ ಓದಿ: ಹೊಸಪೇಟೆ: ಗಂಡನ ಕಿರುಕುಳ ಆರೋಪ, ನೇಣು ಬಿಗಿದು ಪತ್ನಿ ಆತ್ಮಹತ್ಯೆ