ಹೈದರಾಬಾದ್: ಕಳೆದೆರಡು ದಿನಗಳಲ್ಲಿ ಶಂಶಾಬಾದ್ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಣಿಕೆಗೆ ಯತ್ನಿಸಿದ್ದ ಖದೀಮರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.
ಮಾರ್ಚ್ 12 ರಂದು ಶಾರ್ಜಾದಿಂದ ಬಂದಿದ್ದ ನಾಲ್ವರು ಪ್ರಯಾಣಿಕರು ಚಿನ್ನವನ್ನು ತುಂಡುಗಳಾಗಿ ಕತ್ತರಿಸಿ ಬಾಯಿಯಲ್ಲಿ ಇಟ್ಟುಕೊಂಡು ಅಕ್ರಮವಾಗಿ ಸಾಗಿಸಲು ಮುಂದಾಗಿದ್ದರು. ತಪಾಸಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 20.67 ಲಕ್ಷ ರೂ. ಮೌಲ್ಯದ 471 ಗ್ರಾಂ. ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಅದರಂತೆ ಮಾರ್ಚ್ 13 ರಂದು ಶಾರ್ಜಾದಿಂದ ಬಂದಿದ್ದ ಪ್ರಯಾಣಿಕನೋರ್ವ 672 ಗ್ರಾಂ ಚಿನ್ನವನ್ನು ಪೇಸ್ಟ್ ಮಾಡಿ ತನ್ನ ಚಪ್ಪಲಿಯಲ್ಲಿ ಅಡಗಿಸಿ ಸಾಗಣೆ ಮಾಡಲು ಯತ್ನಿಸಿದ್ದನು. ಈ ವೇಳೆ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಬಳಿ ಪತ್ತೆಯಾದ ಚಿನ್ನದ ಮೌಲ್ಯ ಸುಮಾರು 27.4 ಲಕ್ಷ ರೂ. ಎನ್ನಲಾಗುತ್ತಿದೆ.
ಓದಿ: ಬುಡಕಟ್ಟು ಸಮುದಾಯದ ಸಭೆ ಇಂದು: ರಾಷ್ಟ್ರಪತಿಗಳ ಆಗಮನಕ್ಕೆ ಸಿದ್ಧತೆ
ಘಟನೆ ಸಂಬಂಧ ಕಸ್ಟಮ್ಸ್ ಅಧಿಕಾರಿಗಳು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.