ETV Bharat / bharat

ಹೈದರಾಬಾದ್ ವಿಶ್ವದ ವ್ಯಾಕ್ಸಿನೇಷನ್ ರಾಜಧಾನಿ: ಕೆಟಿಆರ್ - pharma sector in Hyderabad

ಭಾರತವು ಕೊರೊನಾ ಲಸಿಕೆಗಳನ್ನು ಉತ್ಪಾದಿಸುವ ಜಗತ್ತಿನ ಪ್ರಮುಖ ದೇಶಗಳಲ್ಲೊಂದಾಗಿದೆ. ಹೈದರಾಬಾದ್​ ಬಗ್ಗೆ ತೆಲಂಗಾಣ ಸಚಿವ ಕೆಟಿಆರ್ ಬಣ್ಣಿಸಿದ್ದಾರೆ.

Minister KTR
ಸಚಿವ ಕೆ.ಟಿ.ರಾಮರಾವ್
author img

By

Published : Feb 22, 2021, 3:22 PM IST

ಹೈದರಾಬಾದ್ : ಮುತ್ತಿನ ನಗರಿ ಹೈದರಾಬಾದ್ ಜಗತ್ತಿನಲ್ಲಿ ವ್ಯಾಕ್ಸಿನೇಷನ್​ನ ರಾಜಧಾನಿಯಾಗಿ ಬದಲಾಗಿದೆ ಎಂದು ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಬಣ್ಣಿಸಿದ್ದು, ಇದು ಹೈದರಾಬಾದ್​ಗೆ ಹೆಮ್ಮೆಯ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಬಯೋ ಏಷಿಯಾ ಕಾನ್ಫರೆನ್ಸ್-2021ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೆಟಿಆರ್​, ಲಸಿಕೆ ಉತ್ಪಾದನೆ ಮತ್ತು ವ್ಯಾಕ್ಸಿನೇಷನ್ ವಿಚಾರವಾಗಿ ಹೈದರಾಬಾದ್​ ಅನ್ನು ಹೊಗಳಿದರು.

ತೆಲಂಗಾಣ ರಾಜ್ಯ ಸರ್ಕಾರ ಈ ಕಾನ್ಫರೆನ್ಸ್ ಅನ್ನು ಆಯೋಜಿಸಿದ್ದು, ಕೊರೊನಾ ಸೋಂಕಿನ ಕಾರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಔಷಧ ಮತ್ತು ಇತರ ವಲಯಗಳ ಕಂಪನಿಗಳು ಭಾಗಿಯಾಗಿದ್ದವು.

ಇದನ್ನೂ ಓದಿ: ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಬಸ್​ಗ​ಳಿಗೂ ಪರ್ಮಿಟ್ ಇದೆ: ಎಂ.ಆರ್. ಮುಂಜಿ

ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಲಸಿಕೆ ಬಗ್ಗೆ ಮಾತನಾಡಿದ ಕೆಟಿಆರ್​ , ಈ ಕೊರೊನಾ ಲಸಿಕೆಯನ್ನು ಹೊರತರಲು ಭಾರತ್​ ಬಯೋಟೆಕ್ ಸಾಕಷ್ಟು ಪರಿಶ್ರಮ ವಹಿಸಿದೆ ಎಂದು ಅಭಿಪ್ರಾಯಪಟ್ಟರು.

ಹೈದರಾಬಾದ್​ನಲ್ಲಿ ವಿವಿಧ ಔಷಧ ಕಂಪನಿಗಳು ವಿಸ್ತರಣೆಯಾಗುತ್ತಿವೆ. ಸರ್ಕಾರ ಸುಲ್ತಾನ್​ಪುರದಲ್ಲಿ ಆರೋಗ್ಯ ಸಲಕರಣೆಗಳ ಪಾರ್ಕ್ ಅನ್ನು ನಿರ್ಮಿಸುತ್ತಿದೆ ಎಂದು ಕೆಟಿಆರ್ ಸ್ಪಷ್ಟನೆ ನೀಡಿದರು.

ಜೀನೋಮ್ ವ್ಯಾಲಿಯಲ್ಲಿ ಬಯೋಫಾರ್ಮಾ ಹಬ್ ಅನ್ನು ನಿರ್ಮಾಣ ಮಾಡುವುದರೊಂದಿಗೆ ಹೈದರಾಬಾದ್ ಅನ್ನು ಔಷಧ ವಲಯದಲ್ಲಿ ಮತ್ತಷ್ಟು ಬಲಗೊಳಿಸಲಾಗುತ್ತದೆ ಎಂದು ಕೆಟಿಆರ್ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.