ಇಂದೋರ್( ಮಧ್ಯಪ್ರದೇಶ) : ಇಲ್ಲಿನ ಮಹಿಳೆಯೊಬ್ಬರು ತನ್ನ ಪತಿ ವಿರುದ್ಧ ಸಂವೇದನಾಶೀಲ ಆರೋಪಗಳನ್ನು ಮಾಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮದುವೆಯಾಗಿ 2 ವರ್ಷ ಕಳೆದರೂ ಪತಿ ಹೆಣ್ಣಿನ ರೀತಿ ಕಂಗೊಳಿಸುತ್ತಿದ್ದು, ಸಂಬಂಧ ಬೆಳೆಸಲು ತಯಾರಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ತನ್ನ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಾಕ್ಷ್ಯವನ್ನು ಸಹ ಸಲ್ಲಿಸಿದ್ದಾರೆ. ವಿಶೇಷ ಎಂದರೆ ಇವರಿಬ್ಬರದ್ದು ಪ್ರೇಮ ವಿವಾಹ.
ಇದೀಗ ಮಹಿಳೆಯು ಪತಿ ವಿರುದ್ಧ ಆರೋಪಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅದರ ತೀರ್ಪಿನ ಸಂದರ್ಭದಲ್ಲಿ ನ್ಯಾಯಾಲಯವು ಮಹಿಳೆಯ ಪತಿಗೆ ತಿಂಗಳಿಗೆ 30 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ.
ಹೆಣ್ಣಿನ ರೀತಿ ಕಂಗೋಳಿಸುತ್ತಿರುವ ಪತಿ : ಇಂದೋರ್‌ನ ಲಸುಡಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುತ್ತಿರುವ ಸಂತ್ರಸ್ತೆ, 32 ವರ್ಷದ ಇಂಜಿನಿಯರ್ ದಿಲೇಶ್ವರ್ ಅವರನ್ನು 29 ಏಪ್ರಿಲ್ 2018 ರಂದು ಪ್ರೀತಿಸಿ ವಿವಾಹವಾದರು. ಮದುವೆಯ ನಂತರ, ದಿಲೇಶ್ವರ್ ಅವರು ತಮ್ಮ ಹೆಂಡತಿಯನ್ನು ಪುಣೆಗೆ ಕರೆದೊಯ್ದರು. ಕೆಲವು ದಿನಗಳ ನಂತರ ಅವರ ಇಡೀ ಕುಟುಂಬ ಪುಣೆಗೆ ಸ್ಥಳಾಂತರಗೊಂಡಿತು. ಪುಣೆಯಲ್ಲಿ ಪತಿ ದಿಲೇಶ್ವರ್, ಅತ್ತೆ ಮತ್ತು ನಾದಿನಿ ಸಂತ್ರಸ್ತೆಯನ್ನು ನಿರಂತರವಾಗಿ ನಿಂದಿಸುತ್ತಿದ್ದರು.
ಅಷ್ಟೇ ಅಲ್ಲ ಮದುವೆಯಾದ ನಂತರವೂ ನನ್ನ ಪತಿ ಸದಾ ನನ್ನಿಂದ ದೂರ ಇರುತ್ತಿದ್ದರು. ಮದುವೆಯ ನಂತರ ಯಾವತ್ತೂ ಸಂಬಂಧ ಬೆಳೆಸಲಿಲ್ಲ. ಸಂಬಂಧ ಬೆಳೆಸಲು ಯತ್ನಿಸಿದಾಗಲೆಲ್ಲ ಬೇರೆ ಕೋಣೆಯಲ್ಲಿ ಮಲಗುತ್ತಿದ್ದರು. ಈ ವೇಳೆ ನಾನು ನನ್ನ ಗಂಡನ ಮೇಲೆ ನಿಗಾವಹಿಸಲು ಪ್ರಾರಂಭಿಸಿದೆ. ಆಗ ನನ್ನ ಪತಿ ಸಂಜೆ ವೇಳೆ ಮಹಿಳೆಯರಂತೆ ಮೇಕಪ್ ಮಾಡಲು ಆರಂಭಿಸುತ್ತಾರೆ.
ಹೆಣ್ಮಮಕ್ಕಳು ರೀತಿ ಕೂದಲಗೆ ಹೇರ್ ಬ್ಯಾಂಡ್ ಹಾಕುವುದು, ಕಿವಿಯೋಲೆ ಇಟ್ಕೊಳ್ಳುವುದು ಮತ್ತು ಹಣೆಯ ಮೇಲೆ ಕುಂಕುಮ ಹಚ್ಚಿಕೊಳ್ಳುತ್ತಾರೆ. ಹಾಗೆಯೇ ಅವರ ತುಟಿಗಳಿಗೆ ಲಿಪ್ಸ್ಟಿಕ್ ಅನ್ನು ಹಚ್ಚುತ್ತಾರೆ. ಇದರ ಬಗ್ಗೆ ಕೇಳಿದಾಗ ನನ್ನ ಮೇಲೆ ಹಲ್ಲೆ ಮಾಡುತ್ತಾರೆ. ಒಂದು ದಿನ ಗಟ್ಟಿಯಾಗಿ ಈ ರೀತಿ ಮಾಡಬೇಡವೆಂದು ಹೇಳಿದಾಗ ನನ್ನನ್ನು ಇಂದೋರ್ನಲ್ಲಿ ಬಿಟ್ಟು ಹೋದರು ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.
ಓದಿ: ದೀರ್ಘಕಾಲಿಕ ಸಂಬಂಧ ಮದುವೆಯೆಂದೇ ಪರಿಗಣನೆ- ಹುಟ್ಟಿದ ಮಗುವಿಗೂ ಆಸ್ತಿ : ಸುಪ್ರೀಂ ತೀರ್ಪು!
ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಸಂತ್ರಸ್ತೆ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದು, ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಡೀ ಪ್ರಕರಣದಲ್ಲಿ ಮಹಿಳೆಯ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಸಂತ್ರಸ್ತೆಗೆ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ನೀಡುವಂತೆ ಪತಿಗೆ ಆದೇಶಿಸಿದೆ. ಮಾರ್ಚ್ 5, 2021 ರಿಂದಲೇ ಈ ಆದೇಶ ಅನ್ವಯವಾಗಲಿದೆ ಎಂದು ಕೋರ್ಟ್ ಹೇಳಿದೆ.
ಇಬ್ಬರೂ ಏಪ್ರಿಲ್ 2018 ರಲ್ಲಿ ಪ್ರೇಮ ವಿವಾಹವನ್ನು ಮಾಡಿಕೊಂಡಿದ್ದರು. ಇಂದೋರ್‌ನ ಲಾಸುಡಿಯಾದ ಮಹಾಲಕ್ಷ್ಮಿ ನಗರದ ನಿವಾಸಿ 26 ವರ್ಷದ ಸಂತ್ರಸ್ತೆ, ಇಂದೋರ್‌ನ ಮಹಾಲಕ್ಷ್ಮಿ ನಗರದಲ್ಲಿ ವಾಸಿಸುವ 32 ವರ್ಷದ ಇಂಜಿನಿಯರ್ ದಿಲೇಶ್ವರ್ ಅವರನ್ನು 29 ಏಪ್ರಿಲ್ 2018 ರಂದು ವಿವಾಹವಾಗಿದ್ದರು. ಇದಕ್ಕೂ ಮುನ್ನ ಇಬ್ಬರ ನಡುವೆ ಎರಡು ವರ್ಷಗಳಿಂದ ಅಫೈರ್ ಸಹ ಇತ್ತು, ಇಬ್ಬರೂ ಬೇರೆ ಬೇರೆ ಜಾತಿಯವರು. ಮದುವೆಯಾದ ಸ್ವಲ್ಪ ಸಮಯದ ನಂತರ, ಅತ್ತೆ, ಪತಿ ಮತ್ತು ನಾದಿನಿ ಸಂತ್ರಸ್ತೆಯನ್ನು ನಿಂದಿಸಲು ಪ್ರಾರಂಭಿಸಿದರು. ಬಳಿಕ ಸಂತ್ರಸ್ತೆ ಎಲ್ಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದರಲ್ಲಿ ಪತಿಯೂ ಜೈಲಿಗೆ ಹೋಗಬೇಕಾಯಿತು.