ETV Bharat / bharat

ಬಕೆಟ್​​ನ ನೀರಿನಲ್ಲಿ ಪತ್ನಿಯ ತಲೆ ಮುಳುಗಿಸಿ ಕೊಲೆ : ತಾನೂ ರೈಲಿಗೆ ತಲೆ ಕೊಟ್ಟ ಪತಿ! - ಹೈದರಾಬಾದ್​ನಲ್ಲಿ ಪತ್ನಿಯ ಕೊಂದ ಪತಿ

ಸೋಮವಾರ ಸಂಜೆ ಮನೆಯಲ್ಲಿದ್ದ ನೀರು ತುಂಬಿದ್ದ ಬಕೆಟ್​ನಲ್ಲೇ ಪತ್ನಿಯ ತಲೆಯನ್ನು ಮುಳುಗಿಸಿ ಪತಿ ಕೊಲೆ ಮಾಡಿದ್ದಾನೆ. ಬಳಿಕ ತಾನೂ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ..

husband who murdered his wife committed suicide in hyderabad
ಬಕೆಟ್​​ನ ನೀರಿನಲ್ಲಿ ಪತ್ನಿಯ ತಲೆ ಮುಳುಗಿಸಿ ಕೊಲೆ: ತಾನೂ ರೈಲಿಗೆ ತಲೆ ಕೊಟ್ಟ ಪತಿ!
author img

By

Published : Jun 28, 2022, 9:23 PM IST

ಹೈದರಾಬಾದ್​(ತೆಲಂಗಾಣ) : ಗಂಡ-ಹೆಂಡ್ತಿ ನಡುವೆ ಮೂಡಿದ ಸಣ್ಣ ಮನಸ್ತಾಪ ಇಬ್ಬರನ್ನೂ ಬಲಿ ಪಡೆದಿದೆ. ಮನೆಯಲ್ಲಿ ಬಕೆಟ್​​ನ ನೀರಿನಲ್ಲಿ ಪತ್ನಿಯ ತಲೆಯವರೆಗೆ ಮುಳುಗಿಸಿ ಕೊಲೆ ಮಾಡಿದ ಪತಿಯೊಬ್ಬ ನಂತರ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೈದರಾಬಾದ್​ನ ಪಂಜಾಗುಟ್ಟದಲ್ಲಿ ಈ ದಾರುಣ ಘಟನೆ ನಡೆದಿದೆ. ಅಸ್ಸೋಂ ಮೂಲದ ಮಹಾನಂದ ಬಿಶ್ವಾಸ್​ (24) ಮತ್ತು ಪತ್ನಿ ಚಂಪಾ (22) ಎಂಬುವರೇ ಮೃತ ದಂಪತಿ. ಇವರು ಇಲ್ಲಿನ ಜಿವಿಕೆ ಮಾಲ್​​ನಲ್ಲಿ ಸೆಕ್ಯೂರಿಟಿ ಗಾರ್ಡ್​​ಗಳಾಗಿ ಕೆಲಸ ಮಾಡುತ್ತಿದ್ದರು.

ಪಂಜಾಗುಟ್ಟ ವ್ಯಾಪ್ತಿಯ ಪ್ರೇಮ ನಗರದಲ್ಲಿ ಮಹಾನಂದ ದಂಪತಿ ವಾಸವಾಗಿದ್ದರು. ಆದರೆ, ಇವರ ನಡುವೆ ಯಾವುದೇ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು. ಇದೇ ಕಾರಣಕ್ಕೆ ಸೋಮವಾರ ಸಂಜೆ ಮನೆಯಲ್ಲಿದ್ದ ನೀರು ತುಂಬಿದ್ದ ಬಕೆಟ್​ನಲ್ಲೇ ಮಹಾನಂದ ಪತ್ನಿ ಚಂಪಾಳ ತಲೆಯನ್ನು ಮುಳುಗಿಸಿ ಕೊಲೆ ಮಾಡಿದ್ದಾನೆ. ಬಳಿಕ ನಾಮಪಲ್ಲಿ ರೈಲ್ವೆ ನಿಲ್ದಾಣದ ಸಮೀಪ ರೈಲು ಹಳಿಗೆ ಬಿದ್ದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಂದನ ಮೃತದೇಹ ಪತ್ತೆಯಾದ ಬಳಿಕ ರೈಲ್ವೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ವೇಳೆ ಆತನ ಬಳಿಯಿದ್ದ ಸಣ್ಣ ಡೈರಿ ದೊರೆತಿದ್ದು, ಅದರಲ್ಲಿ ಪತ್ನಿಯನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಬರೆದ ಬರಹ ಸಿಕ್ಕಿದೆ. ಅಂತೆಯೇ ಪೊಲೀಸರು ಮನೆಯ ವಿಳಾಸ ಪತ್ತೆ ಹಚ್ಚಿ, ಮನೆಗೆ ಬಂದಿದ್ದಾರೆ. ಆದರೆ, ಮನೆಯ ಹೊರಗೆ ಬೀಗ ಹಾಕಿತ್ತು. ಆಗ ಬೀಗ ಹೊಡೆದು ಮನೆಯೊಳಗೆ ಹೋಗಿ ನೋಡಿದಾಗ ಪಂಚಳ ಮೃತದೇಹ ಸಿಕ್ಕಿದೆ ಎಂದು ಪಂಜಾಗುಟ್ಟ ಡಿಜಿ ನಾಗಯ್ಯ ವಿವರಿಸಿದ್ದಾರೆ.

ಇದನ್ನೂ ಓದಿ: ಜೇಬಿನಿಂದ ಹಣ ಕದ್ದ ಸಂಶಯ: ಮಲಗಿದ್ದ 19 ವರ್ಷದ ಮಗನ ಕೊಡಲಿಯಿಂದ ಕೊಚ್ಚಿ ಕೊಂದ ಅಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.