ಹೈದರಾಬಾದ್(ತೆಲಂಗಾಣ) : ಕಳೆದ ಕೆಲ ದಿನಗಳ ಹಿಂದೆ ನಡೆದ ನವ ವಿವಾಹಿತೆಯ ಕೊಲೆ ಪ್ರಕರಣವೊಂದರಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಕಟ್ಟಿಕೊಂಡ ಹೆಂಡತಿ ಕೊಲೆ ಮಾಡಲು ಗಂಡ ಖುದ್ದಾಗಿ ಆನ್ಲೈನ್ ಮೂಲಕ ಚಾಕು ಆರ್ಡರ್ ಮಾಡಿದ್ದಾಗಿ ವಿಚಾರಣೆ ವೇಳೆ ಪೊಲೀಸರು ಮುಂದೆ ಬಾಯಿಬಿಟ್ಟಿದಾನೆ.
ಕಳೆದ ಒಂದು ತಿಂಗಳ ಹಿಂದೆ ಮದುವೆಯಾಗಿದ್ದ ಪತ್ನಿಯ ಕೊಲೆ ಮಾಡಲು ಯೋಜನೆ ಹಾಕಿಕೊಂಡಿದ್ದ ಗಂಡ, ಅದಕ್ಕಾಗಿ ಆನ್ಲೈನ್ ಮೂಲಕ ಚಾಕು ಆರ್ಡರ್ ಮಾಡಿದ್ದನೆಂದು ಪೊಲೀಸರು ಮಾಹಿತಿ ಹಚ್ಚಿಕೊಂಡಿದ್ದಾರೆ.
ಇದನ್ನೂ ಓದಿರಿ: ಉರಿ ಸೆಕ್ಟರ್ನಲ್ಲಿ ಓರ್ವ ಉಗ್ರನ ಹತ್ಯೆ, ಮತ್ತೋರ್ವ ಶರಣು
ತೆಲಂಗಾಣದ ಚಾಚುಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಗತಿ ನಗರದಲ್ಲಿ 28 ದಿನಗಳ ಹಿಂದೆ ಪ್ರೇಮಾ ಎಂಬ ಯುವತಿ ಜತೆ ಮದುವೆಯಾಗಿದ್ದ ಕಿರಣ್ ಕುಮಾರ್, ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ತಿಳಿದು ಬಂದಿದೆ. ತನ್ನ ಪತ್ನಿಯ ಕೊಲೆ ಮಾಡಲು ಪೂರ್ವ ಯೋಜನೆ ಹಾಕಿಕೊಂಡಿದ್ದ.
ಪತ್ನಿ ಕೊಲೆ ಮಾಡುವ ಉದ್ದೇಶದಿಂದಲೇ ಆನ್ಲೈನ್ ಮೂಲಕ ವಿಶೇಷ ಚಾಕು ಖರೀದಿ ಮಾಡಿದ್ದ. ಕೊಲೆಯ ಹಿಂದಿನ ದಿನ ಅದನ್ನ ಪಡೆದುಕೊಂಡಿರುವ ಕಿರಣ್, ಹೆಂಡತಿ ಕೊಲೆ ಮಾಡಿದ್ದಾನೆ.
ಮೊದಲು ಗಂಟಲು ಹಿಸುಕಿ ಕೊಲೆ ಮಾಡಿರುವ ಆತ, ತದ ನಂತರ ಗಂಟಲು ಕೂಯ್ದಿದ್ದ. ಇದಾದ ಬಳಿಕ ಮೃತ ಹೆಂಡತಿ ಸಂಬಂಧಿಕರು ತನಗೆ ತೊಂದರೆ ನೀಡಬಹುದು ಎಂಬ ಉದ್ದೇಶದಿಂದ ಅದೇ ಚಾಕುವಿನಿಂದ ತನ್ನನ್ನು ತಾನೇ ಇರಿದುಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.