ETV Bharat / bharat

ಪತ್ನಿಯನ್ನು 'ಟೊಮೆಟೊ' ಎಂದು ಕರೆದಿದ್ದಕ್ಕೆ ನೆರೆ ಮನೆ ವೃದ್ಧನ ಕೊಲೆಗೈದ ಪತಿ - ಟೊಮ್ಯಾಟೊ ಎಂದು ಕರೆದಿದ್ದಕ್ಕಾಗಿ ವೃದ್ಧನ ಕೊಲೆ

ಪಕ್ಕದ ಮನೆಯ ವೃದ್ಧನೋರ್ವ ತನ್ನ ಹೆಂಡ್ತಿಯನ್ನು ಚುಡಾಯಿಸಿದ್ದಾನೆಂದು ಆರೋಪಿಸಿ ಆತನ ಮೇಲೆ ಹಲ್ಲೆ ನಡೆಸಲಾಗಿದ್ದು, ಪರಿಣಾಮ ಆತ ಸಾವನ್ನಪ್ಪಿದ್ದಾನೆ.

Husband murder a man on alleged eve teasing

author img

By

Published : Apr 1, 2022, 11:51 AM IST

ಮುಂಗೇರ್​(ಬಿಹಾರ): ಕಟ್ಟಿಕೊಂಡ ಹೆಂಡ್ತಿಯನ್ನು ನೆರೆ ಮನೆಯ ವೃದ್ಧನೋರ್ವ ಟೊಮೆಟೊ ಎಂದು ಚುಡಾಯಿಸಿದ್ದಕ್ಕಾಗಿ ಆಕ್ರೋಶಗೊಂಡ ಪತಿ ಆತನನ್ನು ಕೊಲೆ ಮಾಡಿದ್ದಾನೆ. ಬಿಹಾರದ ಮುಂಗೇರ್​ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ನೆರೆ ಮನೆಯಲ್ಲಿ ವಾಸವಾಗಿದ್ದ ಮಹೇಶ್ ದಾಸ್ ಎಂಬಾತ ಟೊಮೆಟೊ ಎಂದು ಚುಡಾಯಿಸುತ್ತಿದ್ದನೆಂದು ಬ್ರಹ್ಮದೇವ್ ದಾಸ್​ನ ಮುಂದೆ ಆತನ ಪತ್ನಿ ದೂರು ನೀಡಿದ್ದಾಳೆ. ಇದರಿಂದ ಕೋಪಗೊಂಡಿರುವ ಪತಿ ವೃದ್ಧನನ್ನ ನಿಂದಿಸಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ಮಹೇಶ್ ಮೇಲೆ ಹಲ್ಲೆ ನಡೆಸಲಾಗಿದೆ. ಇದರಿಂದ ಪ್ರಜ್ಞೆ ತಪ್ಪಿಬಿದ್ದಿರುವ ಮಹೇಶ್​ನನ್ನು ವೈದ್ಯರ ಬಳಿ ಕರೆದೊಯ್ಯಲಾಗಿದೆ. ಈ ವೇಳೆ ಆತ ಸಾವನ್ನಪ್ಪಿದ್ದಾನೆಂದು ವೈದ್ಯರು ಘೋಷಣೆ ಮಾಡಿದ್ದಾರೆ.

ಇದನ್ನೂ ಓದಿ: 'ಶ್ರೀ ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರ': ಕನ್ನಡದಲ್ಲೇ ಟ್ವೀಟ್ ಮಾಡಿ ಮೋದಿ ನಮನ

ಕಳೆದ ಮಂಗಳವಾರ ಈ ಘಟನೆ ನಡೆದಿದೆ. ಮಹೇಶ್ ದಾಸ್​​ ತರಕಾರಿ ಖರೀದಿಸಿ ವಾಪಸ್ ಮನೆಗೆ ಬರುತ್ತಿದ್ದಾಗ ಸ್ನೇಹಿತನೊಂದಿಗೆ ಮಾತನಾಡುತ್ತಾ ನಿಂತಿದ್ದನಂತೆ. ಈ ವೇಳೆ ರಸ್ತೆಯಲ್ಲಿ ಬ್ರಹ್ಮದೇವ್ ದಾಸ್ ಪತ್ನಿ ಹೋಗುತ್ತಿದ್ದರಂತೆ. ಮಹಿಳೆಯನ್ನು ಗಮನಿಸಿದ ಮಹೇಶ್ ದಾಸ್ ಮೇಲಿಂದ ಮೇಲೆ ಟೊಮೆಟೊ ಟೊಮೆಟೊ ಎಂದು ಹೀಯಾಳಿಸಿದ್ದಾನೆ. ಇದರಿಂದ ನೊಂದ ಆಕೆ ತನ್ನ ಪತಿ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದ್ದಾಳೆ. ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ಗಂಡ ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾನೆ.

ಏಳು ಜನರ ವಿರುದ್ಧ ಪ್ರಕರಣ: ಘಟನೆ ನಡೆಯುತ್ತಿದ್ದಂತೆ ಬ್ರಹ್ಮದೇವ್ ದಾಸ್ ಕುಟುಂಬ ಸಮೇತ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಇಬ್ಬರು ಮಹಿಳೆಯರ ಬಂಧನ ಮಾಡಲಾಗಿದೆ. ಉಳಿದವರು ತಲೆ ಮರೆಸಿಕೊಂಡಿದ್ದಾರೆ. ಬ್ರಹ್ಮದೇವ್ ದಾಸ್, ದಿಲೀಪ್ ದಾಸ್, ಆಕಾಶ್ ದಾಸ್, ಪೂಜಾ ದೇವಿ, ಪೂನಂ ದೇವಿ, ಸುಬೋಧ್ ದಾಸ್ ಮತ್ತು ಅವರ ಪತ್ನಿ ಹೆಸರು ಪ್ರಕರಣದಲ್ಲಿ ಉಲ್ಲೇಖವಾಗಿದೆ. ಬ್ರಹ್ಮದೇವ್ ಕೊಲೆ ಕೇಸ್​ವೊಂದರಲ್ಲಿ ಈಗಾಗಲೇ ಜೈಲು ಸೇರಿ ಜಾಮೀನು ಮೇಲೆ ಹೊರ ಬಂದಿದ್ದಾನೆಂದು ತಿಳಿದು ಬಂದಿದೆ.

ಮೃತ ವ್ಯಕ್ತಿಯ ದೇಹದ ಯಾವುದೇ ಭಾಗದಲ್ಲೂ ಗಾಯವಾಗಿರುವ ಗುರುತುಗಳಿಲ್ಲ. ಆತ ಜಗಳದ ಭಯದಲ್ಲಿ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆ ಬಂದ ನಂತರ ನಿಖರ ಉತ್ತರ ಗೊತ್ತಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.