ETV Bharat / bharat

ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ.. ಹಣ ನೀಡದಕ್ಕಾಗಿ 'ತಲಾಖ್'​ ನೀಡಿದ! - ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ

ಕುಡುಕ ಮತ್ತು ಜೂಜುಕೋರ ಗಂಡನ ಚಿತ್ರಹಿಂಸೆಯಿಂದ ತೊಂದರೆ ಅನುಭವಿಸಿರುವ ಶಾಹೀನ್​​​​​ ಜಿಲ್ಲಾಧಿಕಾರಿ ಕಚೇರಿ ತಲುಪಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ತನ್ನ ಕಷ್ಟ ಸಹ ಹೊರ ಹಾಕಿದ್ದಾಳೆ..

Husband loses wife in gambling
Husband loses wife in gambling
author img

By

Published : Nov 30, 2021, 8:39 PM IST

ಬಲ್ಲಿಯಾ (ಉತ್ತರಪ್ರದೇಶ) : ಮಹಾಭಾರತದಲ್ಲಿ ಪಾಂಡವರು ತಮ್ಮ ಹೆಂಡತಿ ದ್ರೌಪದಿಯನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದರೆ, ಆಧುನಿಕ ಭಾರತದಲ್ಲೂ ಇಂತಹದೊಂದು ಘಟನೆ ನಡೆದಿದೆ. ಉತ್ತರಪ್ರದೇಶದ ಬಲ್ಲಿಯಾದ ವ್ಯಕ್ತಿಯೋರ್ವ ತನ್ನ ಹೆಂಡತಿಯನ್ನ ದೆಹಲಿಗೆ ಕರೆದುಕೊಂಡು ಹೋಗಿ ಜೂಜಾಟದಲ್ಲಿ ಸೋತಿದ್ದಾನೆ.

ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ

ಉತ್ತರಪ್ರದೇಶದಿಂದ ದೆಹಲಿಗೆ ಹೆಂಡತಿಯನ್ನ ಕರೆದುಕೊಂಡು ಹೋಗಿರುವ ವ್ಯಕ್ತಿ ಜೂಜಾಟದಲ್ಲಿ ಸೋತಿದ್ದಾನೆ. ಆತನಿಂದ ಹೇಗೋ ತಪ್ಪಿಸಿಕೊಂಡು ಊರು ತಲುಪಿದ್ದಾಳೆ.

ಈ ವೇಳೆ ಮತ್ತೆ ಎರಡು ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ. ಹಣ ಸಿಗದ ಕಾರಣ ಹೆಂಡ್ತಿಗೆ ತ್ರಿವಳಿ ತಲಾಖ್​​ ನೀಡಿದ್ದು, ಆಕೆಯನ್ನ ಮನೆಯಿಂದ ಹೊರ ಹಾಕಿದ್ದಾನೆ.

ಇದನ್ನೂ ಓದಿರಿ: RT-PCR & RAT ಟೆಸ್ಟ್​​​ನಿಂದ ಹೊಸ ರೂಪಾಂತರಿ ತಪ್ಪಿಸಿಕೊಳ್ಳಲ್ಲ: ಪರೀಕ್ಷೆ ಹೆಚ್ಚಿಸಲು ರಾಜ್ಯಗಳಿಗೆ ಸೂಚನೆ

ಕುಡುಕ ಮತ್ತು ಜೂಜುಕೋರ ಗಂಡನ ಚಿತ್ರಹಿಂಸೆಯಿಂದ ತೊಂದರೆ ಅನುಭವಿಸಿರುವ ಶಾಹೀನ್​​​​​ ಜಿಲ್ಲಾಧಿಕಾರಿ ಕಚೇರಿ ತಲುಪಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ತನ್ನ ಕಷ್ಟ ಸಹ ಹೊರ ಹಾಕಿದ್ದಾಳೆ.

ಗಂಡನ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಸಂಬಂಧಿಕರ ಮನೆಯಲ್ಲಿ ಆತ ತಲೆಮರೆಸಿಕೊಂಡಿದ್ದಾನೆ. ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.