ಇಂದೋರ್ (ಮಧ್ಯಪ್ರದೇಶ): ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಸಂತ್ರಸ್ತೆಯೊಬ್ಬರು, ನನ್ನ ಪತಿ ತ್ರಿವಳಿ ತಲಾಖ್ ನೀಡಿ ಮನೆಯಿಂದ ಹೊರಹಾಕಿದ್ದಾರೆ ಎಂದು ಪೊಲೀಸ್ ಆಯುಕ್ತ ಹರಿ ನಾರಾಯಣಚಾರಿ ಮಿಶ್ರಾ ಅವರಿಗೆ ದೂರು ನೀಡಿದ್ದಾರೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಎಂಐಜಿ ಪೊಲೀಸರಿಗೆ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ.
ಸಂತ್ರಸ್ತೆ ಎಂಐಜಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾಗಿದ್ದು, ಶಬ್ಬೀರ್ ಖಾನ್ ಅವರನ್ನು ಸುಮಾರು 8 ರಿಂದ 10 ವರ್ಷಗಳ ಹಿಂದೆ ಮದುವೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಮದುವೆಯಾದ ಕೆಲವು ವರ್ಷಗಳ ನಂತರ, ಆಕೆಯ ಹೆಸರಿನಲ್ಲಿದ್ದ ಮನೆಯನ್ನು ಆತನ ಹೆಸರಿಗೆ ನೋಂದಣಿ ಮಾಡುವಂತೆ ಒತ್ತಾಯಿಸುತ್ತಿದ್ದ. ಈ ವಿಚಾರವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಸುಮಾರು 4 ತಿಂಗಳ ಹಿಂದೆ, ಕೌಟುಂಬಿಕ ಕಲಹದಿಂದ ಮಹಿಳೆ ತನ್ನ ಅತ್ತೆ ಮನೆಯನ್ನು ತೊರೆದು ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಳು.
ಇದನ್ನೂ ಓದಿ: ಶ್ಯಾಮಲಾ 'ಕಲ್ಯಾಣ': ಭಾರತೀಯ ವರನ ವರಿಸಲು ಗಡಿದಾಟಿ ಬಂದ ಪಾಕಿಸ್ತಾನಿ ಯುವತಿ
ಇಂದೋರ್‌ನಲ್ಲಿ ನಡೆಯುತ್ತಿರುವ ಮೇಯರ್ ಚುನಾವಣೆಯಲ್ಲಿ ಸಂತ್ರಸ್ತ ಮಹಿಳೆ ಮತ ಚಲಾಯಿಸಲು ಬಯಸಿದ್ದಳು. ಆದರೆ, ಆಕೆಯ ಮತದಾರರ ಗುರುತಿನ ಚೀಟಿ ಅತ್ತೆಯ ಮನೆಯಲ್ಲಿತ್ತು. ಇದರಿಂದಾಗಿ ಅವಳು ತನ್ನ ಗಂಡನ ಬಳಿಗೆ ಹೋದಳು. ಇದು ಅವರ ಗಂಡನ ಬಳಿ ಇತ್ತು. ಗುರುತಿನ ಚೀಟಿ ನೀಡುವಂತೆ ಕೇಳಿದಾಗ ಪತಿ, ಮನೆಯನ್ನು ಆತನ ಹೆಸರಿಗೆ ಬರೆಯುವಂತೆ ಷರತ್ತು ಹಾಕಿದ್ದಾರೆ. ಇದಕ್ಕೆ ಸಂತ್ರಸ್ತೆ ನಿರಾಕರಿಸಿದ್ದು, ಇದರಿಂದ ಕೋಪಗೊಂಡ ಪತಿ ಮೂರು ಬಾರಿ ತಲಾಖ್-ತಲಾಖ್-ಎಂದು ಹೇಳಿ ಮನೆಯಿಂದ ಹೊರಹಾಕಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.