ETV Bharat / bharat

ತನ್ನ ಸಹೋದರನಿಗೆ ಕಿಡ್ನಿ ನೀಡಿದ ಪತ್ನಿಯಿಂದ ₹40 ಲಕ್ಷ ಕೇಳಿದ ಪತಿ: ನಿರಾಕರಿಸಿದ್ದಕ್ಕೆ ವಾಟ್ಸ್‌ಆ್ಯಪ್​ನಲ್ಲಿ ತಲಾಖ್ - ಸಹೋದರನಿಗೆ ಕಿಡ್ನಿ ದಾನ

ಮಹಿಳೆ ತನ್ನ ಸಹೋದರನಿಗೆ ಕಿಡ್ನಿದಾನ ಮಾಡಿದ್ದಕ್ಕೆ ಪತಿ 40 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದು, ಇದನ್ನು ನಿರಾಕರಿಸಿದಕ್ಕೆ ಪತಿ ಸೌದಿ ಅರೇಬಿಯಾದಿಂದ ವಾಟ್ಸ್‌ಆ್ಯಪ್​ ಮೂಲಕ ತ್ರಿವಳಿ​ ತಲಾಖ್​ ನೀಡಿದ್ದಾನೆ.

husband-demands-rs-40-lakh-from-wife-for-donating-kidney-to-sick-brother-gives-divorce-via-whatsapp-message-from-saudi-arabia
ಸಹೋದರನಿಗೆ ಕಿಡ್ನಿ ನೀಡಿದ್ದಕ್ಕೆ ₹40 ಲಕ್ಷ ಬೇಡಿಕೆ: ನಿರಾಕರಿಸಿದ ಪತ್ನಿಗೆ ವಾಟ್ಸ್‌ಆ್ಯಪ್​ನಲ್ಲಿ ತಲಾಖ್
author img

By ETV Bharat Karnataka Team

Published : Dec 21, 2023, 5:36 PM IST

ಗೊಂಡಾ(ಉತ್ತರಪ್ರದೇಶ): ಸಹೋದರನಿಗೆ ಕಿಡ್ನಿ ದಾನ ಮಾಡಿದ್ದಕ್ಕೆ ಪ್ರತಿಯಾಗಿ ಹಣ ಪಡೆಯದ್ದಕ್ಕೆ ಮಹಿಳೆಗೆ ಪತಿ ವಾಟ್ಸ್‌ಆ್ಯಪ್​ ಮೂಲಕ ವಿಚ್ಛೇದನ ನೀಡಿರುವ ಘಟನೆ ಉತ್ತರಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಸಂತ್ರಸ್ತೆ ಧನೇಪುರ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಜೈತಾಪುರ ನಿವಾಸಿ ತರುನ್ನುಮ್​ ಇದೇ ಗ್ರಾಮದ ನಿವಾಸಿಯಾಗಿರುವ ರಶೀದ್​ ಎಂಬವರನ್ನು ಕಳೆದ 20 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ರಶೀದ್​ ಮತ್ತೊಂದು ಮದುವೆಯಾಗಿದ್ದನು ಎಂದು ತರುನ್ನುಮ್​ ಹೇಳಿದ್ದಾರೆ.

ರಶೀದ್​ ಸೌದಿ ಅರೇಬಿಯಾದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಈ ನಡುವೆ ತರುನ್ನುಮ್​ ಸಹೋದರ ಶಾಕೀರ್​ಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ವೈದ್ಯರು ಪರೀಕ್ಷಿಸಿದಾಗ ಕಿಡ್ನಿ ವೈಫಲ್ಯ ಕಂಡುಬಂದಿದೆ. ಕೂಡಲೇ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ ಇದೆ ಎಂದು ವೈದ್ಯರು ಹೇಳಿದ್ದರು. ಸಹೋದರನ ಪ್ರಾಣ ಉಳಿಸಲು ತರುನ್ನುಮ್​ ಕಿಡ್ನಿ ದಾನ ಮಾಡಲು ಒಪ್ಪಿಕೊಂಡರು. ಇದಕ್ಕೆ ಪತಿ ರಶೀದ್​ ಕೂಡ ಒಪ್ಪಿಗೆ ಸೂಚಿಸಿದ್ದನು. ಬಳಿಕ ಶಾಕೀರ್​ಗೆ ಮುಂಬೈನ ಆಸ್ಪತ್ರೆಯೊಂದರಲ್ಲಿ ಕಿಡ್ನಿ ಜೋಡಣೆ ಮಾಡಲಾಗಿದೆ.

ಶಾಕೀರ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ತರುನ್ನುಮ್​ ನೇರವಾಗಿ ತನ್ನ ಅತ್ತೆ ಮನೆಗೆ ಬಂದಿದ್ದಾರೆ. ಈ ವಿಷಯವನ್ನು ಪತಿ​ಗೆ ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ರಶೀದ್​, ಸಹೋದರನಿಂದ 40 ಲಕ್ಷ ರೂ ಪಡೆಯುವಂತೆ ಬೇಡಿಕೆ ಇಟ್ಟಿದ್ದಾನೆ. ಇದಕ್ಕೊಪ್ಪದ ತರುನ್ನುಮ್​ಗೆ ವಾಟ್ಸ್‌ಆ್ಯಪ್​ ಮೂಲಕ ತ್ರಿವಳಿ ತಲಾಖ್​ ನೀಡಿದ್ದಾನೆ. ಇದೀಗ ನ್ಯಾಯ ಕೊಡಿಸುವಂತೆ ತರುನ್ನುಮ್​ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ತರುನ್ನುಮ್​, ನನ್ನ ಸಹೋದರನಿಗೆ ಕಿಡ್ನಿ ವೈಫಲ್ಯ ಉಂಟಾಗಿತ್ತು. ಕಳೆದ ಐದು ತಿಂಗಳ ಹಿಂದೆ ಸಹೋದರನಿಗೆ ನನ್ನ ಕಿಡ್ನಿಯನ್ನು ಅಳವಡಿಸಲಾಯಿತು. ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ಬಳಿಕ ನಾನು ನನ್ನ ಅತ್ತೆ ಮನೆಗೆ ಬಂದೆ. ಈ ವೇಳೆ ಪತಿ ಕಿಡ್ನಿ ನೀಡಿರುವುದಕ್ಕೆ ಪ್ರತಿಯಾಗಿ 40 ಲಕ್ಷ ರೂ ಪಡೆಯುವಂತೆ ಹೇಳಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಆಗಸ್ಟ್​ 30ರಂದು ವಾಟ್ಸ್‌ಆ್ಯಪ್​ ಮೂಲಕ ತ್ರಿವಳಿ ತಲಾಖ್​ ನೀಡಿದ್ದಾನೆ ಎಂದರು.

ವಿಚ್ಛೇದನ ನೀಡಿದ ಬಳಿಕವೂ ತರುನ್ನುಮ್​ ತನ್ನ ಗಂಡನ ಮನೆಯಲ್ಲಿ ವಾಸಿಸುತ್ತಿದ್ದರು. ಆದರೆ ಇದೀಗ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದು, ನ್ಯಾಯ ಕೊಡಿಸುವಂತೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್​ ಅಧಿಕಾರಿ, ವಾಟ್ಸ್‌ಆ್ಯಪ್​ ಮೂಲಕ ಪತಿ ವಿಚ್ಛೇದನ ನೀಡಿರುವುದಾಗಿ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಕೆಲವು ತಿಂಗಳ ಹಿಂದೆ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿದ ಪತಿಯ ಎದೆಗೆ ಚಾಕು ಇರಿದು ಹತ್ಯೆ ಮಾಡಿದ ಹೆಂಡತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.