ETV Bharat / bharat

ವೈದ್ಯ ಪತಿಗೆ ಕೊರೊನಾ ಸೋಂಕು, ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾದ ಹೆಂಡತಿ - ಹರಿಯಾಣ ಪಾಣಿಪತ್

ಗಂಡನಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಖಿನ್ನತೆಗೊಳಗಾದ ವೈದ್ಯ ಪತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

female doctor wife suicide
female doctor wife suicide
author img

By

Published : May 8, 2021, 5:42 PM IST

ಪಾಣಿಪತ್​(ಹರಿಯಾಣ): ಮಹಾಮಾರಿ ಕೊರೊನಾ ಸೋಂಕಿನ ಭಯದಲ್ಲೇ ಅನೇಕರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದು, ಸದ್ಯ ಹರಿಯಾಣದ ಪಾಣಿಪತ್​ನಲ್ಲೂ ಅಂತಹದೊಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.

ವೈದ್ಯ ಗಂಡನೋರ್ವನಿಗೆ ಕೊರೊನಾ ಸೋಂಕು ದೃಢಗೊಂಡಿದ್ದು, ಈ ಸುದ್ದಿ ಕೇಳಿ ಆತನ ವೈದ್ಯ ಪತ್ನಿ ಖಿನ್ನತೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಾಹಿತಿ ಪ್ರಕಾರ ಅನ್ಸಾಲ್ ಟೌನ್ ನಿವಾಸಿ 38 ವರ್ಷದ ಡಾ. ವೀನಾ ಕರ್ನಾಳದ ಕಲ್ಪನಾ ಚಾವ್ಲಾ ವೈದ್ಯಕೀಯ ಕಾಲೇಜ್​ನಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಪತಿ ಸನೋಲಿ ರಸ್ತೆಯಲ್ಲಿರುವ ಮ್ಯಾಕ್ಸ್​ ಆಸ್ಪತ್ರೆಯಲ್ಲಿದ್ದರು. ಇತ್ತೀಚೆಗೆ ಪತಿ ಡಾ. ಅಶೋಕ್​ ಅವರ ವರದಿ ಪಾಸಿಟಿವ್​​ ಆಗಿದೆ. ಅಂದಿನಿಂದಲೂ ಅವರು ಮನೆಯಲ್ಲಿ ಪ್ರತ್ಯೇಕವಾಗಿದ್ದರು.

ಇದನ್ನೂ ಓದಿ: ಬಾಲಕಿಯನ್ನು ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ.. ಗರ್ಭಿಣಿಯಾದ ಸಂತ್ರಸ್ತೆ!

ಗಂಡನ ವರದಿ ಪಾಸಿಟಿವ್ ಬಂದಾಗಿನಿಂದಲೂ ಹೆಂಡತಿ ಒತ್ತಡದಲ್ಲಿದ್ದರು. ತನ್ನ ಆರು ಮತ್ತು ಮೂರು ವರ್ಷದ ಮಕ್ಕಳೊಂದಿಗೆ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿದ್ದರು. ಆದರೆ, ಗುರುವಾರ ರಾತ್ರಿ ಅದೇ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಬೆಳಗ್ಗೆ ಗಂಡ ಅಲ್ಲಿಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಮೃತದೇಹವನ್ನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿ, ತದನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ. ಸದ್ಯಕ್ಕೆ ಪೊಲೀಸರು ಪ್ರಕರಣದ ವಿಚಾರಣೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.