ETV Bharat / bharat

ಹುರಿಯತ್​ ನಾಯಕರ ಅಕ್ರಮ ಕಟ್ಟಡ ನೆಲಸಮ.. ಒತ್ತುವರಿಯಾದ ಸರ್ಕಾರಿ ಭೂಮಿ ಅಧಿಕಾರಿಗಳ ವಶ

author img

By

Published : Feb 2, 2023, 12:56 PM IST

ಜಮ್ಮು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ವಿರುದ್ಧ ಕ್ರಮ- ಹುರಿಯತ್​ ನಾಯಕರಿ ಅಕ್ರಮ ಭೂಮಿ ವಶ- ಅಕ್ರಮ ಕಟ್ಟಡಗಳ ನೆಲಸಮ ಕಾರ್ಯಾಚರಣೆ- ಹುರಿಯತ್​ ನಾಯಕರಿಗೆ ಸರ್ಕಾರ ಬಿಸಿ

ಹುರಿಯತ್​ ನಾಯಕರ ಅಕ್ರಮ ಕಟ್ಟಡ ನೆಲಸಮ
ಹುರಿಯತ್​ ನಾಯಕರ ಅಕ್ರಮ ಕಟ್ಟಡ ನೆಲಸಮ

ಅನಂತನಾಗ್ (ಜೆ & ಕೆ): ಕಾಶ್ಮೀರದಲ್ಲಿ ಹುರಿಯತ್​ ನಾಯಕರ ಮೇಲೆ ಕಠಿಣ ಕ್ರಮಗಳನ್ನು ಮುಂದುವರಿಸಿರುವ ಅಧಿಕಾರಿಗಳು, ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟಿದ ಅಂಗಡಿ, ಕಟ್ಟಡಗಳನ್ನು ಜೆಸಿಬಿ ಬಳಸಿ ನೆಲಸಮ ಮಾಡುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮೆಹಂದಿ ಕಡಲ್ ಪ್ರದೇಶದಲ್ಲಿ ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಹಿರಿಯ ಹುರಿಯತ್ ನಾಯಕ ಖಾಜಿ ಯಾಸಿರ್ ಅವರಿಗೆ ಸೇರಿದ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಒಡೆದು ಹಾಕಿದರು. ಇದೇ ವೇಳೆ ಹಲವು ಅಂಗಡಿಗಳಿಗೆ ಅಧಿಕಾರಿಗಳು ಸೀಲ್ ಹಾಕಿದರು.

ಅತಿಕ್ರಮಣ ವಿರೋಧಿ ಭಾಗವಾಗಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಬುಲ್ಡೋಜರ್‌ನೊಂದಿಗೆ ಸ್ಥಳಕ್ಕೆ ಆಗಮಿಸಿ, ಮೂರು ಅಂತಸ್ತಿನ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕೆಡವಿ ಹಾಕಿದರು. ಇದರ ವಿಡಿಯೋವನ್ನೂ ಹಂಚಿಕೊಳ್ಳಲಾಗಿದೆ. ಹುರಿಯತ್​ ನಾಯಕರ ವಿರುದ್ಧದ ಕಠಿಣ ಕ್ರಮವನ್ನು ಇದು ಬಿಂಬಿಸುತ್ತದೆ. ಅನಂತನಾಗ್ ಜಿಲ್ಲಾಧಿಕಾರಿ ಬಶರತ್ ಖಯ್ಯೂಮ್ ಅವರ ಸೂಚನೆಯ ಮೇರೆಗೆ ಮುನ್ಸಿಪಲ್ ಕೌನ್ಸಿಲ್ ಮತ್ತು ಹಣಕಾಸು ಇಲಾಖೆಯ ಅಧಿಕಾರಿಗಳ ಜಂಟಿ ತಂಡ ಈ ಕಾರ್ಯಾಚರಣೆ ನಡೆಸಿದರು. ಹುರಿಯತ್ ನಾಯಕ ಖಾಜಿ ಯಾಸಿರ್ ಮತ್ತು ಆತನ ಸಹೋದರ ಖಾಜಿ ಶಿಬ್ಲಿ ಹಲವು ವರ್ಷಗಳಿಂದ ಜೈಲು ಪಾಲಾಗಿದ್ದಾರೆ.

ಆಕ್ರಮಿತ ಸರ್ಕಾರಿ ಭೂಮಿ ವಶ: 2 ದಿನಗಳ ಹಿಂದಷ್ಟೇ ಮಾಜಿ ಸಚಿವರಾದ ಪೀರ್ಜಾದಾ ಮೊಹಮ್ಮದ್ ಸೈಯದ್, ಸೈಯದ್ ಫಾರೂಕ್ ಅಂದ್ರಾಬಿ, ಮಾಜಿ ಮುಖ್ಯಮಂತ್ರಿ ಸೈಯದ್ ಮೀರ್ ಖಾಸಿಂ ಅವರ ಕುಟುಂಬಸ್ಥರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲಾಗಿತ್ತು. ಇನ್ನೊಂದೆಡೆ ಅರಾ ಖೋಶಿಪೋರಾದಲ್ಲಿ ಕಾಂಗ್ರೆಸ್ ನಾಯಕ ಸಯೀದ್ ಅವರ ವಶದಲ್ಲಿದ್ದ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ವಶಪಡಿಸಿಕೊಂಡರು.

ಶಿಸ್ಟರ್‌ಗಾಮ್‌ನಲ್ಲಿ ಸರ್ಕಾರಿ ಭೂಮಿಯನ್ನು ತೋಟವನ್ನಾಗಿ ಪರಿವರ್ತಿಸಿಕೊಂಡಿದ್ದ ಕುಟುಂಬದಿಂದ ಭೂಮಿಯನ್ನು ಮರಳಿ ಪಡೆಯಲಾಗಿದೆ. ಅನಂತ್‌ನಾಗ್‌ನ ಮಟ್ಟಾನ್ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಸೇರಿದ ತೋಟದ ಜಮೀನಿನ ಹೊರ ಗೋಡೆಯನ್ನು ಕಂದಾಯ ಇಲಾಖೆ ಕೆಡವಿದೆ. ಸುಮಾರು ಎಕರೆಯಷ್ಟ ಜಾಗವನ್ನು ಕುಟುಂಬ ಅಕ್ರಮವಾಗಿ ವಶಪಡಿಸಿಕೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಕಾಶ್ಮೀರದಲ್ಲಿ ನಡೆಯುತ್ತಿರುವ ಬೃಹತ್ ಅತಿಕ್ರಮಣ ವಿರೋಧಿ ಅಭಿಯಾನದಲ್ಲಿ ಗುರುವಾರದ ಹೊತ್ತಿಗೆ ಮಾಜಿ ಸಚಿವರು ಮತ್ತು ಮಾಜಿ ಮುಖ್ಯಮಂತ್ರಿಯ ಸಂಬಂಧಿಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳಿಂದ 500 ಕ್ಕೂ ಹೆಚ್ಚು ಎಕರೆಯ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಹಲವಾರು ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ.

ಪ್ರತ್ಯೇಕತಾವಾದಿ ನಾಯಕರ ಕಚೇರಿ ಸೀಲ್​: ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀನಗರದ ರಾಜ್‌ಬಾಗ್‌ನಲ್ಲಿರುವ ಪ್ರತ್ಯೇಕತಾವಾದಿ ಆಲ್ ಪಾರ್ಟಿಸ್ ಹುರಿಯತ್ ಕಾನ್ಫರೆನ್ಸ್ (ಎಪಿಎಚ್‌ಸಿ) ಕಚೇರಿಯನ್ನು ಎನ್‌ಐಎ ಅಧಿಕಾರಿಗಳು ಈಚೆಗೆ ಜಪ್ತಿ ಮಾಡಿದ್ದರು. ದೆಹಲಿ ಮೂಲದ ವಿಶೇಷ ಎನ್‌ಐಎ ನ್ಯಾಯಾಲಯವು ಎಪಿಎಚ್‌ಸಿಯ ಆಸ್ತಿಯನ್ನು ಜಪ್ತಿ ಮಾಡುವ ಎನ್​​ಐಎ ಮನವಿಗೆ ಪರಿಗಣಿಸಿ ಈ ಕ್ರಮಕ್ಕೆ ಅನುಮತಿ ನೀಡಿತ್ತು. ಅದರಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಹುರಿಯತ್ ಕಚೇರಿಯನ್ನು ತನ್ನ ಸ್ವಾಧೀನಕ್ಕೆ ಪಡೆದಿದೆ.

ಎನ್ಐಎ ಅಧಿಕಾರಿಗಳು ಹುರಿಯತ್ ಕಚೇರಿಗೆ ಆಗಮಿಸಿ, ನ್ಯಾಯಾಲಯದ ಆದೇಶದಂತೆ ಶ್ರೀನಗರದಲ್ಲಿರುವ ಅದರ ಕಚೇರಿಯ ಪ್ರವೇಶದ್ವಾರದಲ್ಲಿ ಜಪ್ತಿ ನೋಟಿಸಿನ ಪ್ರತಿಯನ್ನು ಅಂಟಿಸಿದರು. ಜುಲೈ 24, 2017 ರಂದು ಬಂಧಿಸಲ್ಪಟ್ಟಿರುವ ನಯೀಮ್ ಖಾನ್, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಹವಾಲಾ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ದೇಶೀಯವಾಗಿ ಮತ್ತು ವಿದೇಶದಲ್ಲಿ ಹಣ ಸ್ವೀಕರಿಸಿದ್ದಾನೆ ಮತ್ತು ಸಂಗ್ರಹಿಸಿದ್ದಾನೆ ಎಂದು ಇತ್ತೀಚಿಗೆ ನ್ಯಾಯಾಲಯದ ಆದೇಶದಲ್ಲಿ ತಿಳಿದುಬಂದಿತ್ತು.

ಓದಿ: ಉಗ್ರರಿಗೆ ಧನಸಹಾಯ: ಹುರಿಯತ್ ಕಾನ್ಫರೆನ್ಸ್ ಕಚೇರಿ ಸೀಲ್ ಮಾಡಿದ NIA

ETV Bharat Logo

Copyright © 2024 Ushodaya Enterprises Pvt. Ltd., All Rights Reserved.