ETV Bharat / bharat

ತಮಿಳು ಜನರ ಹಣೆಬರಹ ಬದಲಾಯಿಸ್ತೀನಿ ಅಂದ ರಜಿನಿಗೆ ರಾಜಕೀಯ ’ರಹದಾರಿ’ಯಲ್ಲ..!

author img

By

Published : Dec 3, 2020, 9:48 PM IST

Updated : Dec 3, 2020, 9:58 PM IST

ರಜಿನಿಕಾಂತ್ ಅವರ ರಾಜಕೀಯ ಪ್ರವೇಶ ಖಚಿತಗೊಂಡಿದೆ. ಈಗ ಅವರ ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆಯುತ್ತಿದೆ. ತಮಿಳುನಾಡು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ, ಅವರು ಎಷ್ಟು ರಾಜಕೀಯವಾಗಿ ಸಿದ್ಧರಾಗಿದ್ದಾರೆ ಎಂಬುದು ಚರ್ಚಾರ್ಹವಾಗಿದೆ.

rajinikant
ರಜಿನಿಕಾಂತ್​​

ಚೆನ್ನೈ: ಸೂಪರ್‌ಸ್ಟಾರ್ ರಜಿನಿಕಾಂತ್ ರಾಜಕಾರಣದತ್ತ ಹೆಜ್ಜೆ ಹಾಕಿದ್ದು, ಅವರ ರಾಜಕೀಯ ಲೆಕ್ಕಾಚಾರ ಹೇಗಿರಲಿದೆ ಎಂಬುದು ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ರಾಜಕೀಯ ಅನ್ನೋದು ಸಣ್ಣ ವಿಚಾರವಲ್ಲದ ಕಾರಣ ಸಿನಿಮಾಗಳಲ್ಲಿ ಮಿಂಚಿದಂತೆ, ತಮಿಳುನಾಡು ರಾಜಕೀಯದಲ್ಲೂ ಮಿಂಚಬಹುದೇ? ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳು ಹಾಗೂ ರಾಜಕೀಯ ತಜ್ಞರನ್ನು ಕಾಡುತ್ತಿವೆ.

'ತಮಿಳು ಜನರ ಹಣೆಬರಹವನ್ನು ಬದಲಾಯಿಸ್ತೀನಿ' ಅಂತ ಭರವಸೆಯಿಂದಲೇ ಕೆಲವು ದಿನಗಳ ಹಿಂದೆ ರಜಿನಿಕಾಂತ್ ಹೇಳಿದ್ದರು. ಈಗ ಆ ಹೇಳಿಕೆ ಚರ್ಚಿಸಲೇಬೇಕಾದ ವಿಷಯವಾಗಿದೆ. ಸುಮಾರು ವರ್ಷಗಳಿಂದ ದ್ರಾವಿಡ ಪಕ್ಷಗಳು ತಮಿಳುನಾಡಿನಲ್ಲಿ ತಮ್ಮದೇ ಕೋಟೆಯನ್ನು ಸೃಷ್ಟಿಸಿಕೊಂಡಿವೆ.

ಈ ಪ್ರಬಲ ಪಕ್ಷಗಳ ನಡುವೆ ರಜಿನಿಕಾಂತ್ ತಮ್ಮ ಪಕ್ಷವನ್ನು ಜೀವಂತ ಉಳಿಸಿಕೊಳ್ತಾರಾ..? ಎಲ್ಲಾ ಪಕ್ಷಗಳನ್ನು ಎದುರಿಸಿ ಅವರು ಗೆಲ್ಲೋಕೆ ಸಾಧ್ಯವಾಗುತ್ತಾ..? ಎಂಬುದನ್ನು ಸ್ವಲ್ಪ ಸಮಯ ಯೋಚಿಸಿದರೆ ಅವರು ಮತ್ತು ಅವರ ಪಕ್ಷ ಎದುರಿಸುತ್ತಿರುವ ಸವಾಲುಗಳೇನು ಎಂಬುದರ ಅರಿವಾಗಬಹುದು.

ರಾಜಕೀಯಕ್ಕೆ ನಿಜಕ್ಕೂ ಸಿದ್ಧರಾಗಿದ್ದಾರಾ ತಲೈವಾ..?

ತಮಿಳುನಾಡಿನಲ್ಲಿ ಈಗ ಪ್ರಬಲವಾಗಿರೋ ಪಕ್ಷಗಳೆಂದರೆ ಡಿಎಂಕೆ ಹಾಗೂ ಎಐಎಡಿಎಂಕೆ. ಅತ್ಯಂತ ಬಲವಾದ ಹಾಗೂ ಗಟ್ಟಿಯಾದ ಇತಿಹಾಸ ಹೊಂದಿರುವ ಈ ಪಕ್ಷಗಳನ್ನು ಎದುರಿಸಿ ನಿಲ್ಲುವುದು ಖಂಡಿತಾ ಸುಲಭವಲ್ಲ. ಅನೇಕ ಮಂದಿ ನಟರು ಈಗಾಗಲೇ ರಾಜಕೀಯ ಪ್ರವೇಶ ಪಡೆದು ಯಶಸ್ಸು ಕಂಡಿದ್ದಾರೆ. ಮತ್ತೆ ಕೆಲವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್​ ಆ​ಗಿದ್ದಾರೆ.

ಆದರೆ, ಇಲ್ಲಿ ಕೆಲಸ ಮಾಡೋದು ರಜಿನಿ ವರ್ಚಸ್ಸು ಮತ್ತು ಅವರ ಸರಿಯಾದ ಯೋಜನೆ ಅಂತಾರೆ ರಾಜಕೀಯ ಪರಿಣಿತರು. ಇನ್ನೂ ಕೆಲವರ ಸಿನಿಮಾ ವರ್ಚಸ್ಸೇ ಬೇರೆ. ರಾಜಕೀಯ ವರ್ಚಸ್ಸೇ ಬೇರೆ ಎಂದು ಹೇಳುತ್ತಿರುವುದನ್ನು ತಳ್ಳಿ ಹಾಕುವಂತಿಲ್ಲ. ಆದರೆ, ಯಾವ ವಾದವನ್ನೂ ಸಾರಾ ಸಗಟಾಗಿ ತಳ್ಳಿ ಹಾಕದ ಪರಿಸ್ಥಿತಿಯಿದೆ.

ಅಭಿಮಾನಿ ಮತದಾರನಾಗ್ತಾನಾ?

ಕ್ಷೇತ್ರ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಲು ರಜಿನಿಕಾಂತ್ ವರ್ಷದಿಂದ ವರ್ಷಕ್ಕೆ ಅಧ್ಯಯನ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದೆ. ರಜಿನಿ ಹೆಚ್ಚು ಅಭಿಮಾನಿಗಳನ್ನು ತಮಿಳುನಾಡಿನಲ್ಲಿ ಹೊಂದಿರಬಹುದು. ಸೂಪರ್​ ಸ್ಟಾರ್ ಮನೆಯಿಂದ ಹೊರಗೆ ಬಂದಾಗ ಜನ ಕೈ ಕುಲುಕಿ ಖುಷಿ ಪಡಬಹುದು ಅಥವಾ ಸಂಭ್ರಮಿಸಬಹುದು. ಆದರೆ ರಾಜಕೀಯದ ವ್ಯಕ್ತಿಯಾಗಿ ರಜಿನಿ ಹೊರಬಂದರೆ ಅಷ್ಟೇ ಜನರು ರಜಿನಿಯನ್ನು ಬೆಂಬಲಿಸುತ್ತಾರೆಯೇ..? ಅವರ ಎಲ್ಲಾ ಅಭಿಮಾನಿಗಳ ಮತವನ್ನು ಅವರ ಪಕ್ಷ ತೆಗೆದುಕೊಳ್ಳುತ್ತದೆಯೇ ..? ಖಚಿತವಾಗಿ 'ಇಲ್ಲ' ಎಂಬ ಉತ್ತರ ಸಿಗುತ್ತಿದೆ.

ಇದನ್ನೂ ಓದಿ: ತಮಿಳಿಗರಿಗಾಗಿ ಪ್ರಾಣ ಬೇಕಾದ್ರೂ ನೀಡುವೆ.. ರಾಜಕೀಯ ಪ್ರವೇಶ ಖಚಿತಪಡಿಸಿದ ಬಳಿಕ ತಲೈವಾ ಟ್ವೀಟ್​

ಆದರೆ ಪ್ರತಿಯೊಬ್ಬ ಅಭಿಮಾನಿಯೂ ಮತದಾರನಾಗಿ ಬದಲಾಗಬೇಕೆಂದರೆ ಕ್ಷೇತ್ರವಾರು ತಂಡಗಳನ್ನು ರಚಿಸಬೇಕಾಗುತ್ತದೆ. ರಾಜಕೀಯ ತಜ್ಞರ ಸಲಹೆಗಳನ್ನು ಪಡೆದುಕೊಂಡು ಅವರ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ಇದೆಲ್ಲವನ್ನೂ ಪಾಲಿಸಿದ ನಂತರ ಸರಿಯಾದ ಅವಕಾಶ ಬಳಸಿಕೊಂಡು ರಾಜಕೀಯ ಪ್ರವೇಶ ಮಾಡಬೇಕಾಗುತ್ತದೆ ಎನ್ನುತ್ತಾರೆ ಕೆಲವು ರಾಜಕೀಯ ನಿಪುಣರು.

ರಾಜಕೀಯದ ಮೇಲಿರುತ್ತಾ ಆರೋಗ್ಯ ಮತ್ತು ವಯಸ್ಸಿನ ಪ್ರಭಾವ..?

ಈಗ ಸದ್ಯಕ್ಕೆ ರಜಿನಿಗೆ 69 ವರ್ಷ. ಈ ವಯಸ್ಸಿನಲ್ಲಿ ಚುರುಕಾಗಿ ಕ್ಷೇತ್ರ ಪರ್ಯಟನೆ ಮಾಡುತ್ತಾ ಅಭಿಮಾನಿಗಳನ್ನು ಹಾಗೂ ಜನರನ್ನು ಮತದಾರರನ್ನಾಗಿ ಪರಿವರ್ತನೆ ಮಾಡುತ್ತಾರಾ ಅನ್ನೋದು ಯಕ್ಷ ಪ್ರಶ್ನೆ. ಈ ವಯಸ್ಸಿನಲ್ಲಿ ಅವರಿಗೆ ಆಗಾಗ ಆರೋಗ್ಯ ಕೈಕೊಡುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕೀಯ ಪ್ರವೇಶಕ್ಕೆ ವೈದ್ಯರು ಬೇಡ ಅಂತಾ ಕೂಡಾ ಹೇಳ್ತಿದ್ದಾರೆ. ಆದರೆ ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದ ತಲೈವಾ ರಾಜಕೀಯ ಪ್ರವೇಶ ಘೋಷಣೆ ಮಾಡಿದ್ದಾರೆ. ಇದೆಲ್ಲಕ್ಕೂ ಆರೋಗ್ಯ ಸಾಥ್ ಕೊಡುತ್ತಾ? ನೋಡಬೇಕಿದೆ.

ಇದನ್ನೂ ಓದಿ: ತಮಿಳು ರಾಜಕೀಯಕ್ಕೆ ತಲೈವಾ ಎಂಟ್ರಿ: ಜನವರಿಗೆ ಹೊಸ ಪಕ್ಷ ಘೋಷಣೆ

ಆರೋಗ್ಯದ ಕಾರಣದಿಂದಾಗಿಯೇ ರ್ಯಾಲಿ, ರೋಡ್​ಶೋಗಳನ್ನು ಕೂಡಾ ಈವರೆಗೆ ರಜಿನಿ ಮಾಡಿಲ್ಲ. ಚುನಾವಣೆ ವೇಳೆ ಆರೋಗ್ಯ ಕೈಕೊಟ್ಟರೆ ಚುನಾವಣಾ ಪ್ರಚಾರಕ್ಕೂ ಬಹುದೊಡ್ಡ ಹಿನ್ನಡೆಯಾಗಲಿದೆ. ಮತ್ತೊಂದು ವರದಿಯ ಪ್ರಕಾರ ಪಕ್ಷದ ಹಿರಿಯ ಮುಖಂಡರ ಜೊತೆ ಮಾತ್ರ ರಜಿನಿ ಚರ್ಚೆ ಮಾಡುತ್ತಾರೆ. ಜನರಿಂದ ಸ್ವಲ್ಪ ಮಟ್ಟಿಗೆ ಅಂತರ ಕಾಯ್ದುಕೊಳ್ಳುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ.

ರಜಿನಿ ಮೇಲೆ ಮರಾಠಿ ಮುದ್ರೆ..?

ರಜಿನಿಕಾಂತ್ ಅವರದ್ದು ಮೂಲ ಕರ್ನಾಟಕ. ಅವರು ಜನ್ಮ ತಾಳಿದ್ದು, ಬೆಂಗಳೂರಿನ ಮರಾಠಿ ಕುಟುಂಬದಲ್ಲಿ. ಆದರೂ ತಾನು ತಮಿಳುನಾಡಿನ ವ್ಯಕ್ತಿ ಅಂತಲೇ ಎಲ್ಲೆಡೆಯೂ ಹೇಳಿಕೊಳ್ಳುತ್ತಿದ್ದಾರೆ. ಆದರೆ, ರಾಜಕೀಯ ಪಕ್ಷಗಳನ್ನು ರಜಿನಿಯನ್ನು ತಮಿಳಿಗ ಅಲ್ಲ ಎಂದು ಬಿಂಬಿಸಲು ಪ್ರಯತ್ನ ಪಡುತ್ತಿವೆ. ಅವರ ವಿರುದ್ಧ ತಮಿಳು ವಿರೋಧಿ ಹಣೆ ಪಟ್ಟಿ ಕಟ್ಟುತ್ತವೆ. ಇದು ರಾಜಕೀಯದಲ್ಲಿ ಸರ್ವೇ ಸಾಮಾನ್ಯ. ಆದರೆ ಇವುಗಳನ್ನು ದಾಟಿ ರಜಿನಿ ಹೇಗೆ ರಾಜಕೀಯದ ಗಮ್ಯ ತಲುಪುತ್ತಾರೆ ಎಂಬುದೇ ಕುತೂಹಲಕಾರಿ.

ಇನ್ನೊಂದು ತಮಾಷೆಯ ವಿಷಯವೆಂದರೆ ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಅಲೆ ಸೃಷ್ಟಿಸಿದ, ತಮಿಳು ಪ್ರಜೆಗಳ ಹೃದಯದಲ್ಲಿ ಈಗಲೂ ಸ್ಥಾನ ಪಡೆದಿರುವ ಎಂಜಿಆರ್ ಹಾಗೂ ಜಯಲಲಿತಾ ಕೂಡಾ ಮೂಲತಃ ತಮಿಳಿಗರಲ್ಲ ಎಂಬುದು. ಎಂಜಿಆರ್​ ಅಭಿಮಾನಿಗಳನ್ನು ಮತದಾರರನ್ನಾಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ರಜಿನಿ ಅವರಿಂದ ಕೂಡಾ ಇದು ಸಾಧ್ಯ ಅಂತಿವೆ ಆಪ್ತಮೂಲಗಳು.

ಯಾರೊಂದಿಗೆ ಮೈತ್ರಿ..?

ರಜಿನಿಕಾಂತ್ ಜಾತಿಗಳನ್ನು ಮೀರಿದ ಆಧ್ಯಾತ್ಮಿಕ ರಾಜಕಾರಣಕ್ಕೆ ಮುಂದಾಗುತ್ತೇನೆ ಎಂದು ಹೇಳಿದ್ದರು. ಈ ಸಮಯದಲ್ಲಿ ಅನೇಕ ಹಿರಿಯ ಬಿಜೆಪಿ ನಾಯಕರು ರಾಜಕೀಯವಾಗಿ ರಜಿನಿಕಾಂತ್ ಮತ್ತು ಪ್ರಧಾನಿ ಮೋದಿಯವರಿಗೆ ಒಂದೇ ರೀತಿಯ ಆಲೋಚನೆಗಳಿವೆ ಎಂದು ಟ್ವೀಟ್ ಮಾಡಿದ್ದು, ಮಾತ್ರವಲ್ಲದೆ ರಜಿನಿ ರಾಜಕೀಯ ಪ್ರವೇಶವನ್ನು ಸ್ವಾಗತಿಸಿದ್ದರು.

ಅದಾದ ನಂತರ ನಡೆದ ಕೆಲವು ರಾಜಕೀಯ ಬೆಳವಣಿಗೆಗಳು ರಜಿನಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರಾ ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದವು. ಇದು ನಿಜವಾದರೆ ತಮಿಳುನಾಡಿನಲ್ಲಿ ಅಲ್ಪಸಂಖ್ಯಾತ ಮತಗಳನ್ನು ರಜಿನಿ ಕಳೆದುಕೊಳ್ಳುವ ನಿರೀಕ್ಷೆಯಿದೆ. ಆದರೆ ಅವರು ಯಾವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆ? ಅಥವಾ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೋ ? ಇಲ್ಲವೋ? ಎಂಬ ಪ್ರಶ್ನೆ ಜನರ ತಲೆಯನ್ನು ಕೊರೆಯುತ್ತಿದೆ.

ಕರ್ನಾಟಕದೊಂದಿಗೆ ವಿವಾದ ಮತ್ತು ರಜಿನಿಕಾಂತ್

ರಜಿನಿಕಾಂತ್​ ಕರ್ನಾಟಕದಲ್ಲಿ ಹುಟ್ಟಿ ಬೆಳೆದವರು. ಆದರೆ ಕಾವೇರಿ ವಿವಾದ ವಿಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಅವರ ರಾಜಕೀಯ ಘಟ್ಟದ ನಿರ್ಣಾಯಕ ಹಂತವಾಗಲಿದೆ. ಈಗ ಕಾವೇರಿ ಸಮಸ್ಯೆ ಅಷ್ಟಾಗಿ ಇಲ್ಲವಾದ ಕಾರಣ ಸೂಪರ್‌ಸ್ಟಾರ್ ಸರಿಯಾದ ಸಮಯದಲ್ಲಿ ರಾಜಕೀಯ ಪ್ರವೇಶಿಸಿದ್ದಾರೆ ಎಂಬುದು ನಿರ್ವಿವಾದ ಎಂಬ ಮಾತುಗಳು ಕೇಳಿಬರುತ್ತಿದೆ.

ಕಮಲಕ್ಕೆ ಸಾಥ್ ನೀಡ್ತಾರಾ..?

ಬಹುತೇಕ ಎಲ್ಲಾ ರಾಜ್ಯಗಳಲ್ಲಿ ವಿಜಯದ ಧ್ವಜವನ್ನು ಹಾರಿಸುತ್ತಿರುವ ಬಿಜೆಪಿಗೆ ತಮಿಳುನಾಡು ನಿಜಕ್ಕೂ ಸವಾಲು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವ ಮೂಲಕ ಅದು ತಮಿಳುನಾಡು ರಾಜಕೀಯದ ಅಖಾಡಕ್ಕೆ ಇಳಿದಿದೆ. ಇದರ ಜತೆಗೆ ಕೆಲ ದಿನಗಳ ಹಿಂದಷ್ಟೇ ಬಿಜೆಪಿಯೊಂದಿಗೆ ಮೈತ್ರಿ ಮುಂದುವರೆಯಲಿದೆ ಎಂದು ಪಳನಿಸ್ವಾಮಿ ಹೇಳಿದ್ದಾರೆ.

ತಮಿಳುನಾಡಿನಲ್ಲಿ ಬಿಜೆಪಿ ಚೇತರಿಸಿಕೊಳ್ಳಬೇಕಾದರೆ ರಜಿನಿಕಾಂತ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಉತ್ತಮ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಜಯಲಲಿತಾ ಮತ್ತು ಕರುಣಾನಿಧಿ ಅವರ ನಿಧನದ ನಂತರ ತಮಿಳುನಾಡು ಸೃಷ್ಟಿಸಿದ ರಾಜಕೀಯ ಶೂನ್ಯವನ್ನು ರಜಿನಿಕಾಂತ್ ತುಂಬಲಿದ್ದಾರೆ ಎಂಬುದು ಇನ್ನೊಂದು ನಂಬಿಕೆ. ಈ ವಿಶ್ಲೇಷಣೆಗಳು ಮತ್ತು ವಾದಗಳು ಏನೇ ಇದ್ದರೂ, ಮುಂಬರುವ ವಿಧಾನಸಭಾ ಚುನಾವಣೆ ರೋಮಾಂಚನಕಾರಿಯಾಗಲಿದೆ ಅನ್ನೋದು ಅಕ್ಷರಶಃ ಸತ್ಯ.

Last Updated : Dec 3, 2020, 9:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.