ಪ್ರತಾಪಗಡ್(ಉತ್ತರ ಪ್ರದೇಶ): ಡೆಡ್ಲಿ ವೈರಸ್ ಕೊರೊನಾ ವಿರುದ್ಧ ಮಾನವೀಯತೆ ಸಂಪೂರ್ಣವಾಗಿ ಸತ್ತು ಹೋಗಿದೆ. ಮಹಾಮಾರಿಯಿಂದ ಪ್ರಾಣ ಕಳೆದುಕೊಳ್ಳುತ್ತಿರುವ ವ್ಯಕ್ತಿಗಳ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಲು ಜನರು ಮುಂದೆ ಬರುತ್ತಿಲ್ಲ. ಸದ್ಯ ಅಂತಹ ಘಟನೆವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಅನಾರೋಗ್ಯದ ಕಾರಣ ಸಾವನ್ನಪ್ಪಿರುವ ಮಹಿಳೆಯ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಯಾರೂ ಸಹ ಮುಂದೆ ಬಾರದಂತಹ ಘಟನೆ ನಡೆದಿದ್ದು, ಕೇವಲ ಇಬ್ಬರು ಸೇರಿ ಮನೆಯ ಮುಂದೆ ಸಮಾಧಿ ನಿರ್ಮಿಸಿ ಆಕೆಯ ಅಂತ್ಯಕ್ರಿಯೆ ನಡೆಸಿದ್ದಾರೆ. ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತೀವ್ರವಾಗಿ ವೈರಲ್ ಆಗಿದೆ.
ಇದನ್ನೂ ಓದಿ: ಇದು ಶತಮಾನಕ್ಕೆ ಒಮ್ಮೆ ಬರುವ ಬಿಕ್ಕಟ್ಟು, ಒಗ್ಗೂಡಿ ಎದುರಿಸೋಣ: ಸಚಿವರ ಸಭೆಯಲ್ಲಿ ನಮೋ ಕರೆ
ಕುಂದ ತಹಸಿಲ್ ಪ್ರದೇಶದ ಉದಯಪುರದ ನಿವಾಸಿ ರಾಮ್ಚರಣ್ ಕಳೆದ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಅವರ ಪತ್ನಿ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಯಾರು ಇರಲಿಲ್ಲ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗದ್ದ ಮಹಿಳೆ ನಿನ್ನೆ ಸಾವನ್ನಪ್ಪಿದ್ದಾಳೆ. ಅಂತ್ಯಕ್ರಿಯೆ ನಡೆಸಲು ಯಾರೂ ಸಹ ಮುಂದೆ ಬಂದಿಲ್ಲ. ಜೆಸಿಬಿ ಮೂಲಕ ಮನೆ ಮುಂದೆ ಗುಂಡಿ ಅಗೆದು ಮೃತದೇಹ ಅದರೊಳಗೆ ಎಸೆದಿದ್ದಾರೆ.