ಆಂಧ್ರಪ್ರದೇಶ: ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ಯು.ಕೋಥಪಲ್ಲಿ ಮಂಡಲದಲ್ಲಿನ ಮೀನುಗಾರಿಕೆ ಬಂದರಿನಲ್ಲಿ ದೊಡ್ಡ ಏಡಿ ಪತ್ತೆಯಾಗಿದೆ.
ಏಡಿಗಳು ಸಾಮಾನ್ಯವಾಗಿ ಗಾತ್ರದಲ್ಲಿ ಸಣ್ಣದಾಗಿರುತ್ತವೆ. 100 ಗ್ರಾಂ ನಿಂದ 200 ಗ್ರಾಂ ನಷ್ಟು ಮಾತ್ರ ತೂಗುತ್ತವೆ. ಆದರೆ, ಈ ಏಡಿ ಮಾತ್ರ ಮೀನುಗಾರರನ್ನು ಅಚ್ಚರಿ ಪಡುವಂತೆ ಮಾಡಿದೆ.
ಈ ಏಡಿ ಗಾತ್ರದಲ್ಲಿ ದೊಡ್ಡದಾಗಿದ್ದು, ಸುಮಾರು 900 ಗ್ರಾಂ ತೂಕವಿದೆ. ಈ ಏಡಿಯನ್ನು ಮೀನುಗಾರ ಮಹಿಳೆ 800 ರೂ. ನೀಡಿ ಖರೀದಿಸಿದ್ದಾಳೆ. ಇದನ್ನು ಮಂದಾ ಏಡಿ ಎಂದೂ ಸ್ಥಳೀಯವಾಗಿ ಕರೆಯಲಾಗುತ್ತದಂತೆ. ಇದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಎಂದು ಮೀನುಗಾರರು ತಿಳಿಸಿದ್ದಾರೆ.