ETV Bharat / bharat

34 ವರ್ಷಗಳ ಹಿಂದಿನ ಪ್ರಕರಣ: ನವಜೋತ್ ಸಿಂಗ್ ಸಿಧುಗೆ 1 ವರ್ಷ ಜೈಲು ಶಿಕ್ಷೆ

1988ರಲ್ಲಿ ನಡೆದಿದ್ದ ರಸ್ತೆ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಕಾಂಗ್ರೆಸ್​​ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಒಂದು ವರ್ಷಗಳ ಕಾಲ ಶಿಕ್ಷೆ ವಿಧಿಸಿ, ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.

Navjot Singh Sidhu
Navjot Singh Sidhu
author img

By

Published : May 19, 2022, 2:57 PM IST

Updated : May 19, 2022, 3:09 PM IST

ನವದೆಹಲಿ: 1988ರ ರಸ್ತೆ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ನಿಂದ ಮಹತ್ವದ ತೀರ್ಪು ಹೊರಬಿದ್ದಿದ್ದು, ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧುಗೆ ಒಂದು ವರ್ಷ ಜೈಲುಶಿಕ್ಷೆ ವಿಧಿಸಿ, ತೀರ್ಪು ಹೊರಹಾಕಿದೆ. 1988ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಪಟಿಯಾಲ ನಿವಾಸಿ ಗುರ್ನಾಮ್​ ಸಿಂಗ್ ಸಾವನ್ನಪ್ಪಿದ್ದರು.

ಇಂಧನ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ನವಜೋತ್​ ಸಿಂಗ್ ಸಿಧು, ಆನೆ ಏರಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ, ಗುರ್ನಾಮ್​​ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 2018ರ ಮೇ ತಿಂಗಳಲ್ಲಿ ಸಿಧು ಅವರನ್ನ ದೋಷಮುಕ್ತಗೊಳಿಸಿ ಸುಪ್ರೀಂಕೋರ್ಟ್​ ಆದೇಶ ನೀಡಿತ್ತು. ಆದರೆ, ಇದೀಗ ಪರಿಷ್ಕೃತ ತೀರ್ಪು ಹೊರಹಾಕಿದ್ದು, ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಪ್ರೀಂಕೋರ್ಟ್​ ಆದೇಶದಂತೆ ಪಂಜಾಬ್ ಪೊಲೀಸರು ನವಜೋತ್ ಸಿಂಗ್​ ಸಿಧು ಅವರನ್ನ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಏನಿದು ಪ್ರಕರಣ?: 1988ರಲ್ಲಿ ವೃದ್ಧರೊಬ್ಬರ ಮೇಲೆ ರಸ್ತೆಯಲ್ಲಿ ದಾಂಧಲೆ ನಡೆಸಿ ಹಲ್ಲೆ ಮಾಡಲಾಗಿತ್ತು. ಈ ವೇಳೆ, ಗಂಭೀರವಾಗಿ ಗಾಯಗೊಂಡಿದ್ದ ಗುರ್ನಾಮ್​ ಸಿಂಗ್​ ಮೃತಪಟ್ಟಿದ್ದರು. ಇದನ್ನ ಪ್ರಶ್ನೆ ಮಾಡಿ ಸುಪ್ರೀಂಕೋರ್ಟ್ ಮೆಟ್ಟಲೇರಲಾಗಿತ್ತು.

ಇದನ್ನೂ ಓದಿ: ಕೃಷ್ಣ ಜನ್ಮಭೂಮಿ ಮತ್ತು ಶಾಹಿ ಈದ್ಗಾ ಪ್ರಕರಣ: ಮಸೀದಿ ತೆರವು ಮಾಡಬೇಕೆಂಬ ಅರ್ಜಿಗೆ ಕೋರ್ಟ್​ ಅಸ್ತು

ಸುಪ್ರೀಂಕೋರ್ಟ್​ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ ಮತ್ತು ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ನ್ಯಾಯಪೀಠ 2018ರಲ್ಲಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 323ರಡಿ ಅಪರಾಧಿ ಎಂದು ತೀರ್ಪು ನೀಡಿ 1000 ರೂಪಾಯಿ ದಂಡ ವಿಧಿಸಿತ್ತು. ಆದರೆ, ಜೈಲು ಶಿಕ್ಷೆಯಿಂದ ಸಿಧುಗೆ ವಿನಾಯಿತಿ ನೀಡಲಾಗಿತ್ತು. ಜೈಲು ಶಿಕ್ಷೆಯಿಂದ ವಿನಾಯಿತಿ ನೀಡಿದ್ದನ್ನು ಪ್ರಶ್ನಿಸಿ ಸಂತ್ರಸ್ತನ ಕುಟುಂಬದ ಸದಸ್ಯರು ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ.

Last Updated : May 19, 2022, 3:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.