ETV Bharat / bharat

World Elephant Day: ಆನೆಗಳು ಗ್ರಾಮಗಳಿಗೆ ಪ್ರವೇಶಿಸಿದಂತೆ ತಡೆಯಲು ಇದೆ ಪರಿಹಾರ: ಈ ನಿಟ್ಟಿನಲ್ಲಿ ಸಾಗಬೇಕಿದೆ ಅರಣ್ಯ ಇಲಾಖೆ - ಆನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ

ಯಾವಾಗ ಆನೆ ಆಹಾರ ಅರಸುತ್ತಾ ನಗರಕ್ಕೆ ಪ್ರವೇಶಿಸಿತೋ ಅಂದಿನಿಂದ ಕಾಲ ಕಾಲಕ್ಕೆ ಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷಗಳು ಆರಂಭವಾಗಿದ್ದು, ನಿರಂತರವಾಗಿ ಮುಂದುವರೆದಿದೆ

how-to-prevent-elephants-from-entering-villages

author img

By

Published : Aug 12, 2023, 2:30 PM IST

ಕೊಯಮತ್ತೂರು: ಅರಣ್ಯ ಪ್ರದೇಶಗಳನ್ನು ದಾಟಿ ಇಂದು ಆನೆಗಳು ಗ್ರಾಮಗಳತ್ತ ಪ್ರವೇಶಿಸುತ್ತಿರುವ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಎಂದರೆ, ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರಗಳು ಲಭ್ಯವಾಗುತ್ತಿಲ್ಲ ಎಂದು. ಇದೇ ಕಾರಣಕ್ಕೆ ಆಹಾರ ಮತ್ತು ನೀರು ಅರಸಿ ಅವರು ಇಂದು ಅರಣ್ಯದಂಚಿನ ಗ್ರಾಮಗಳಿಗೆ ಪ್ರವೇಶಿಸುತ್ತಿದೆ ಎಂದು ಇಯರಕಯಿ (ಪ್ರಕೃತಿ) ಸಂರಕ್ಷಣಾ ಸೊಸೈಟಿ ಸಂಸ್ಥಾಪಕರಾದ ಜಲಲುದ್ದೀನ್​ ತಿಳಿಸಿದ್ದಾರೆ.

ಯಾವಾಗ ಆನೆ ನಗರಕ್ಕೆ ಪ್ರವೇಶಿಸಿತೋ ಅಂದಿನಿಂದ ಕಾಲ ಕಾಲಕ್ಕೆ ಪ್ರಾಣಿಗಳು ಮತ್ತು ಮಾನವರ ನಡುವೆ ಸಂಘರ್ಷಗಳು ಆರಂಭವಾಗಿದೆ. ಫಲಿತಾಂಶವಾಗಿ ಆನೆ ಮತ್ತು ಮಾನವರು ಸಾವನ್ನಪ್ಪಿದ್ದಾರೆ. ಕಾಡಿನಲ್ಲಿ ಆನೆಗಳಿಗೆ ಆಹಾರ ಸಿಗದ ಕಾರಣ ಅವುಗಳು ಕಳೆಗಳನ್ನು ಸೇವಿಸುತ್ತಿದೆ ಇದರಿಂದ ಅವು ಆರೋಗ್ಯ ಸಮಸ್ಯೆ ಎದುರಿಸಿ ಸಾವನ್ನಪ್ಪುತ್ತಿದೆ. ಇದನ್ನು ತಪ್ಪಿಸಲು ಅವು ಅರಣ್ಯ ಪ್ರದೇಶದಿಂದ ಹೊರಬರುತ್ತಿದೆ. ಇದನ್ನು ತಪ್ಪಿಸಬೇಕು ಎಂದರೆ ಆನೆಗಳಿಗೆ ಪ್ರಿಯವಾದ ಗಿಡಗಳನ್ನು ನಾವು ಕಾಡಿನಲ್ಲಿ ಬೆಳೆಸಬೇಕಿದೆ. ಹಾಗೇ ಆದಲ್ಲಿ ಮಾತ್ರ ನಾವು ಆನೆಗಳು ಗ್ರಾಮಗಳ ಪ್ರವೇಶವನ್ನು ತಪ್ಪಿಸಬಹುದು ಎಂದಿದ್ದಾರೆ.

ಕೊಯಬತ್ತೂರು ವೈಲ್ಡ್​​ಲೈಫ್​ ಕನ್ಸರ್​ವೇಷನ್​ ಟ್ರಸ್ಟ್​ ಶನ್ಮುಗಮ್​ ಕಾರ್ಯದರ್ಶಿ ಸುಂದರಂ ಮಾತನಾಡಿ, ಆನೆಗಳು ಆಹಾರ ಅರಸುತ್ತ ಗ್ರಾಮಗಳತ್ತ ಬಂದು ಕೃಷಿ ಬೆಳೆಗಳನ್ನು ಸೇವಿಸುತ್ತದೆ. ವಿಶೇಷವಾಗಿ ಅವರು ಬಾಳೆ, ಕಬ್ಬು, ತೆಂಗಿನಕಾಯಿ ಮುಂತಾದವುಗಳನ್ನು ಸೇವಿಸುತ್ತದೆ. ಇದನ್ನು ತಪ್ಪಿಸಬೇಕು ಎಂದರೆ ಆನೆಗಳ ನೆಚ್ಚಿನ ಆಹಾರಗಳನ್ನು ಕಾಡಿನಲ್ಲಿ ಬೆಳೆಸಬೇಕಿದೆ ಎಂದರು.

ಕಾಡಿನಲ್ಲಿ ಆಹಾರ ಕೊರತೆಯಿಂದಲೇ ಆನೆಗಳು ಗ್ರಾಮಗಳ ಕೃಷಿ ಭೂಮಿಯತ್ತ ನುಗ್ಗುತ್ತಿದೆ. ವಿಶೇಷವಾಗಿ ಕೊಯಮತ್ತೂರಿನ ಥಡಗಂ, ಮದುಮಲೈ, ಪೆರಿಯಾನಾಯ್ಕನ್‌ಪಾಳ್ಯಂ ಪ್ರದೇಶಕ್ಕೆ ಪ್ರವೇಶಿಸುತ್ತಿದೆ. ನಗರಕ್ಕೆ ಆನೆಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಬಂದು ಅವರು ಕೃಷಿ ಬೆಳೆಗಳನ್ನು ನಾಶ ಮಾಡುತ್ತದೆ. ಇದರಿಂದ ಕೃಷಿ ಮಾಡುವುದು ಅರಣ್ಯದಂಚಿನ ಗ್ರಾಮದಲ್ಲಿ ಅಸಾಧ್ಯವಾಗಿದೆ.

ಇದರಿಂದ ಕೃಷಿಕರು ತಮ್ಮ ಭೂಮಿಗಳನ್ನು ರಿಯಲ್​ ಎಸ್ಟೇಟ್​ ಅವರಿಗೆ ಮಾರುತ್ತಿದ್ದಾರೆ. ಅಲ್ಲಿ ಕೊಳ್ಳುವವರು ಮೋಜಿಗಾಗಿ ಮನೆ, ರೆಸಾರ್ಟ್​, ಅಪಾರ್ಟ್​​ಮೆಂಟ್​ ಮುಂದಾತವುಗಳನ್ನು ಕಟ್ಟುತ್ತಾರೆ. ಇದು ಆನೆಗಳ ವಲಸೆ ಮಾರ್ಗವನ್ನು ತಪ್ಪಿಸುತ್ತದೆ. ಇದು ಮಾತ್ರವಲ್ಲ. ಇದು ಮಾನವ ಮತ್ತು ಪ್ರಾಣಿಗಳ ಘರ್ಷಣೆಗೆ ದಾರಿ ಮಾಡಿಕೊಡುತ್ತದೆ. ಈ ಹಿನ್ನೆಲೆ ಅರಣ್ಯ ಇಲಾಖೆ ತ್ವರಿತ ಮತ್ತು ದೀರ್ಘಾವಧಿ ಕ್ರಮಕ್ಕೆ ಮುಂದಾಗಬೇಕಿದ್ದು, ಅರಣ್ಯದಿಂದ ಆನೆಗಳು ಹೊರಬಾರದಂತೆ ಕ್ರಮಕೈಗೊಳ್ಳಬೇಕಿದೆ ಎಂದು ಒತ್ತಿ ಹೇಳಿದರು.

ಆನೆಗಳು ದಿನಕ್ಕೆ 200 ರಿಂದ 250 ಕೆಜಿ ಆಹಾರಗಳನ್ನು ಸೇವಿಸುತ್ತದೆ. 100 ರಿಂದ 150 ಲೀಟರ್​ ನೀರು ಕುಡಿಯುತ್ತದೆ. ಆನೆಯೊಂದು ತನ್ನ ಜೀವಿತಾವಧಿಯಲ್ಲಿ 18 ಲಕ್ಷ ಗಿಡವನ್ನು ಬೆಳೆಸುತ್ತದೆ. ಇಂತಹ ಆನೆಗಳ ಆವಾಸ ಸ್ಥಾನ ಅಭಿವೃದ್ಧಿಗೊಳಿಸುವ ಜೊತೆಗೆ ಅದರ ಸಂರಕ್ಷಣೆ ಆನೆ ಮತ್ತು ಮಾನವನ ಸಂಘರ್ಷ ಕಡಿಮೆ ಮಾಡುವ ನಿಟ್ಟಿನಲ್ಲಿ ಅರಿವು ಮೂಡಿಸಬೇಕಿದೆ. ಇದೇ ಕಾರಣಕ್ಕೆ ಪ್ರತಿ ಆಗಸ್ಟ್​ 12ರಂದು ವಿಶ್ವ ಆನೆಗಳ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ: 6 ವರ್ಷದ ಮಗು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.