ನವದೆಹಲಿ : ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ರೆಂಡಿಂಗ್ ವಿಷಯಗಳಿಗೆ ಹೆಸರುವಾಸಿ. ಟ್ರೆಂಡಿಂಗ್‌ನಲ್ಲಿರುವ ವಿಡಿಯೋಗಳನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಇದೀಗ ಭಾರತೀಯ-ಅಮೆರಿಕನ್ ವ್ಯಕ್ತಿಯ ಶುದ್ಧ ಚಿನ್ನದ ಫೆರಾರಿ ಕಾರಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಈ ಕಾರಿನ ವಿಶೇಷತೆ ಏನು? ಎಂಬುದರ ಬಗ್ಗೆ ಮಹೀಂದ್ರಾ ಗ್ರೂಪ್‌ನ ಮುಖ್ಯಸ್ಥ ಆನಂದ್ ಮಹೀಂದ್ರಾ ಮಾತನಾಡಿದ್ದಾರೆ.
-
I don’t know why this is going around on social media unless it is a lesson on how NOT to spend your money when you are wealthy… pic.twitter.com/0cpDRSZpnI
— anand mahindra (@anandmahindra) July 19, 2021 " class="align-text-top noRightClick twitterSection" data="
">I don’t know why this is going around on social media unless it is a lesson on how NOT to spend your money when you are wealthy… pic.twitter.com/0cpDRSZpnI
— anand mahindra (@anandmahindra) July 19, 2021I don’t know why this is going around on social media unless it is a lesson on how NOT to spend your money when you are wealthy… pic.twitter.com/0cpDRSZpnI
— anand mahindra (@anandmahindra) July 19, 2021
ಟ್ವಿಟರ್‌ನಲ್ಲಿ ವೈರಲ್ ಆಗಿರುವ ಚಿನ್ನದ ಕಾರಿನ ವಿಡಿಯೋವನ್ನು ಹಂಚಿಕೊಂಡಿದ್ದು, ಕಾರಿನಲ್ಲಿ ವ್ಯಕ್ತಿ ಹಾಗೂ ಆತನ ಸಹ ಪ್ರಯಾಣಿಕ ಕುಳಿತಿದ್ದು, ರಸ್ತೆಯಲ್ಲಿರುವ ಜನರು ಆ ಕಾರನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ.
ಕಾರಿನ ಮೇಲ್ಭಾಗವನ್ನು ಬಟನ್ ಮೂಲಕ ತೆರೆದ ಮಾದರಿಯಲ್ಲಿ ಸಿದ್ಧ ಮಾಡಿಕೊಳ್ಳುತ್ತಾನೆ. ಇದೇ ವೇಳೆ ಶುದ್ಧ ಚಿನ್ನದ ಫೆರಾರಿ ಕಾರಿನೊಂದಿಗೆ ಭಾರತೀಯ ಅಮೆರಿಕನ್ ಎಂದು ಹೇಳುವ ವಿಡಿಯೋ ಇದಾಗಿದೆ.
ವಿಡಿಯೋ ಮತ್ತು ಕಾರಿನ ಬಗ್ಗೆ ಹೆಚ್ಚು ಪ್ರಭಾವ ಬೀರದಂತೆ ಮಹೀಂದ್ರಾ ಅವರು ಕ್ಲಿಪ್ ಹಂಚಿಕೊಂಡಿದ್ದಾರೆ. ಅದರಲ್ಲಿ, ನೀವು ಶ್ರೀಮಂತರಾಗಿದ್ದಾಗ ನಿಮ್ಮ ಹಣವನ್ನು ಹೇಗೆ ಖರ್ಚು ಮಾಡಬಾರದು ಎಂಬುದರ ಪಾಠ ಇಲ್ಲದಿದ್ದರೆ ಇದು ಸಾಮಾಜಿಕ ಮಾಧ್ಯಮದಲ್ಲಿ ಏಕೆ ನಡೆಯುತ್ತಿದೆ ಎಂಬುದು ನನಗೆ ತಿಳಿಯುತ್ತಿಲ್ಲ ಎಂದಿದ್ದಾರೆ. 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ, ಮಹೀಂದ್ರಾ ಅವರ ಈ ಪೋಸ್ಟ್ 1,69,300 ವೀಕ್ಷಣೆಗಳು ಹಾಗೂ 6,000ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.