ಇಂಗ್ಲಿಷ್ ಬಜಾರ್ (ಪಶ್ಚಿಮ ಬಂಗಾಳ): ಮಾಲ್ಡಾ ಜಿಲ್ಲೆಯ ಇಂಗ್ಲಿಷ್ ಬಜಾರ್ನಲ್ಲಿ ಟಿಎಂಸಿಯ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಕಚ್ಚಾ ಬಾಂಬ್‌ಗಳನ್ನು ಎಸೆದು, ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಪರಿಣಾಮ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಶನಿವಾರದಂದು ಮಾಣಿಚಕ್ ಬ್ಲಾಕ್‌ನ ಗೋಪಾಲಪುರ ಬಲುತೋಲಾ ಪ್ರದೇಶದಲ್ಲಿ ಪಂಚಾಯತ್ ಸಮಿತಿ ಪದಾಧಿಕಾರಿ ಸೈಫುದ್ದೀನ್ ಶೇಖ್ ನೇತೃತ್ವದ ಟಿಎಂಸಿ ಕಾರ್ಯಕರ್ತರ ಗುಂಪು ಪಕ್ಷದ ಪ್ರದೇಶ ಅಧ್ಯಕ್ಷ ನಾಸಿರ್ ಅಲಿ ನೇತೃತ್ವದ ಬಣದೊಂದಿಗೆ ಘರ್ಷಣೆ ನಡೆಸಿದೆ.
ಈ ಗಲಾಟೆಯಲ್ಲಿ ಕನಿಷ್ಠ 12 ಮನೆಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆದರೆ, ಇನ್ನೂ ಯಾರನ್ನೂ ಬಂಧಿಸಿಲ್ಲ.
ಮಾಣಿಕ್‌ಚಕ್‌ನ ಟಿಎಂಸಿ ಶಾಸಕಿ ಸಾಬಿತ್ರಿ ಮಿತ್ರ ಮಾತನಾಡಿ, ಇಬ್ಬರು ನಾಯಕರ ನಡುವೆ ಜಮೀನು ವಿಚಾರದಲ್ಲಿ ಹಳೆ ದ್ವೇಷವಿದ್ದು, ಈ ಹಿಂದೆಯೂ ಹಿಂಸಾಚಾರಕ್ಕೆ ಕಾರಣವಾಗಿತ್ತು. ಇದಕ್ಕೆ ಟಿಎಂಸಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ : ಕರೆಂಟ್ಗಾಗಿ ಮಾಡಿದ ಮನವಿ ವ್ಯರ್ಥ.. 6 ತಿಂಗಳಿಂದ ಮೆಸ್ಕಾಂ ಕಚೇರಿಗೇ ಮಿಕ್ಸಿ ತಂದು ಮಸಾಲೆ ರುಬ್ಬುವ ರೈತ