ETV Bharat / bharat

ಕೇಳಿದ್ದು ವೆಜ್​, ಕೊಟ್ಟಿದ್ದು ನಾನ್‌ವೆಜ್! ಎಡವಟ್ಟು ಮಾಡಿದ ಹೋಟೆಲ್‌ನಿಂದ ₹1 ಕೋಟಿ ಪರಿಹಾರ ಕೇಳಿದ ಗ್ರಾಹಕ - ಗ್ರಾಹಕರನ್ನು ಸಿಟ್ಟಿಗೆಳುವಂತೆ ಮಾಡುತ್ತದೆ

ತಪ್ಪಾದ ಆಹಾರವನ್ನು ನೀಡಿದ ಕಾರಣಕ್ಕೆ ಹೋಟೆಲ್‌ ವಿರುದ್ಧ ವ್ಯಕ್ತಿಯೊಬ್ಬರು ಒಂದು ಕೋಟಿ ರೂ ಪರಿಹಾರ ನೀಡುವಂತೆ ಕೋರಿ ಕೋರ್ಟ್​ ಮೊರೆ ಹೋಗಿದ್ದಾರೆ.

hotel serves non veg instead veg  customer seeking 1 Crore from the  compensation

author img

By

Published : Apr 21, 2023, 3:28 PM IST

ನವದೆಹಲಿ: ಫುಡ್​ ಡೆಲಿವರಿ ಆ್ಯಪ್​ ಅಥವಾ ಹೋಟೆಲ್​ಗಳಲ್ಲಿ ಫುಡ್​ ಆರ್ಡರ್​ ಮಾಡಿದಾಗ ತಪ್ಪಾದ ಆಹಾರ ಒದಗಿಸಿರುವ ಘಟನೆಗಳು ಸಾಕಷ್ಟು ವರದಿಯಾಗಿವೆ. ಯಾವುದೋ ಗಡಿಬಿಡಿ, ಮತ್ತಿತರ ಕಾರಣದಿಂದಾಗುವ ಇಂತಹ ಅಭಾಸಗಳು ಗ್ರಾಹಕರು ಸಿಟ್ಟಿಗೇಳುವಂತೆ ಮಾಡುತ್ತವೆ. ಈ ಸಂಬಂಧ ಗಲಾಟೆ, ಆಕ್ರೋಶ ಸಹಜ. ಆದರೆ, ಇದಕ್ಕಿಂತ ಭಿನ್ನವಾದ ಪ್ರಕರಣ ಇದೀಗ ವರದಿಯಾಗಿದೆ.

ತಾಜ್​ಮಹಲ್​ನ ಅದ್ಬುತ ಸೌಂದರ್ಯ ಆಹ್ಲಾದಿಸಲು ಬಂದಿಳಿದ ಅತಿಥಿಗೆ ಹೋಟೆಲ್​ನವರು ತಪ್ಪಾದ ಆಹಾರ ನೀಡಿದ್ದಾರೆ. ಸಸ್ಯಾಹಾರಿಯಾದ ವ್ಯಕ್ತಿಗೆ ಮಾಂಸಾಹಾರ ನೀಡಲಾಗಿದೆ. ಇದರಿಂದ ಉಗ್ರ ಪ್ರತಾಪಿಯಾದ ಗ್ರಾಹಕ ಇದೀಗ 1 ಕೋಟಿ ರೂ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ವ್ಯಕ್ತಿ, ಮಾಂಸಾಹಾರ ನೀಡುವ ಮೂಲಕ ಅವರು ನನ್ನ ಧಾರ್ಮಿಕ ಭಾವನೆ ಮಾತ್ರ ಧಕ್ಕೆ ತಂದಿಲ್ಲ, ಇದರಿಂದ ನನ್ನ ಜೀವಕ್ಕೂ ಕುತ್ತು ತಂದಿದ್ದಾರೆ ಎಂದಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಲಕ್ಸೂರಿ ಹೊಟೇಲ್​ನಲ್ಲಿ ಘಟನೆ ನಡೆದಿದೆ. ಮಾಂಸಾಹಾರವನ್ನು ತಿಂದ ಬಳಿಕ ಗ್ರಾಹಕನಿಗೆ ವಿಚಾರ ಗೊತ್ತಾಗಿದೆ. ಆಹಾರ ಸೇವನೆಯಿಂದ ತಮ್ಮ ಆರೋಗ್ಯ ಕೂಡ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಾಗುವಂತಾಯಿತು ಎಂದು ತಿಳಿಸಿದ್ದಾರೆ.

ಗ್ರಾಹಕನನ್ನು ಅರ್ಪಿತ್​ ಗುಪ್ತಾ ಎಂದು ಗುರುತಿಸಲಾಗಿದೆ. ಹೋಟೆಲ್​ ವಿರುದ್ಧ ನ್ಯಾಯಕ್ಕಾಗಿ ಇವರು ಹೋರಾಟಕ್ಕಿಳಿದಿದ್ದು, ಒಂದು ಕೋಟಿ ರೂ ಪರಿಹಾರ ಪಾವತಿಸುವಂತೆ ಹೋಟೆಲ್​ ಮ್ಯಾನೇಜ್​ಮೆಂಟ್​​ಗೆ ನೋಟಿಸ್​ ಕೂಡ ಕಳುಹಿಸಿದ್ದಾರೆ.

ಚಿಕನ್​ ರೋಲ್​ ಯಡವಟ್ಟು: ಗ್ರಾಹಕನ ವಕೀಲ ನರೊತ್ತಮ್​ ಸಿಂಗ್ ಮಾತನಾಡಿ​, ಆಗ್ರಾದ ಫತೇಹಾಬಾದ್​ ರಸ್ತೆಯಲ್ಲಿರುವ ಹೋಟೆಲ್​ನಲ್ಲಿ ಏಪ್ರಿಲ್​ 14ರಂದು ತಮ್ಮ ಕಕ್ಷಿದಾರ ಮತ್ತು ಆತನ ಸ್ನೇಹಿತರು ಸನ್ನಿ ಗಾರ್ಗ್​ ಉಳಿದುಕೊಂಡಿದ್ದರು. ಈ ವೇಳೆ ಗುಪ್ತಾ, ವೆಜಿಟೇರಿಯನ್​ ರೋಲ್​ ಆರ್ಡರ್​ ಮಾಡಿದ್ದರು. ಆಹಾರ ಬಂದಾಗ ಸೇವಿಸಿದ್ದಾರೆ. ಬಳಿಕ ರುಚಿಯಲ್ಲಿ ವ್ಯತ್ಯಾಸ ಬಂದಾಗ ಹೊಟೇಲ್​ ಸಿಬ್ಬಂದಿಯನ್ನು ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಆತನಿಗೆ ಚಿಕನ್​ ರೋಲ್​ ಸರ್ವ್​ ಮಾಡಿರುವುದು ತಿಳಿದು ಬಂದಿದೆ.

ಇದನ್ನು ತಿಳಿದ ಗುಪ್ತಾ ವಾಂತಿ ಮಾಡಲು ಆರಂಭಿಸಿದರು. ಆಸ್ಪತ್ರೆಗೆ ದಾಖಲಾಗಿದ್ದು, ಆರೋಗ್ಯ ದುರ್ಬಲಗೊಂಡಿದೆ ಎಂದು ವಾದ ಮಂಡಿಸಿದ್ದಾರೆ. ತಮ್ಮ ತಪ್ಪನ್ನು ಮರೆಮಾಚುವ ಉದ್ದೇಶದಿಂದ ಹೊಟೇಲ್​ನವರು ತಮ್ಮ ಕಕ್ಷಿದಾರರ ಊಟದ ಬಿಲ್​ ಕೂಡ ನೀಡಿಲ್ಲ. ಈ ಎಲ್ಲ ಘಟನೆಯನ್ನು ಅವರ ಫೋನ್​ನಲ್ಲಿ ದಾಖಲಿಸಲಾಗಿದೆ. ಹೊಟೇಲ್​ನವರ ಸರಳ ಕ್ಷಮಾಪಣೆ ನಮಗೆ ಸರಿ ಹೊಂದುವುದಿಲ್ಲ. ಈ ಸಂಬಂಧ ಕಠಿಣ ಕ್ರಮ ಜರುಗಿಸಲೇಬೇಕು ಎಂದಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಹೊಟೇಲ್​ ಆಡಳಿ ಮಂಡಳಿ, ಈಗಾಗಲೇ ಗುಪ್ತಾ ಅವರಲ್ಲಿ ಕ್ಷಮಾಪಣೆ ಕೇಳಿದ್ದು, ಇದು ಅಚಾತುರ್ಯದ ಘಟನೆ ಎಂದು ತಿಳಿಸಿದೆ.

ಇಂತಹ ಪ್ರಕರಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದು, ಆಹಾರ ಸುರಕ್ಷತಾ ಕಾಯ್ದೆ, ಕಲುಷಿತ ಆಹಾರ ಸೇವನೆಯ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ವಕೀಲ ಅಶೋಕ್​ ಗುಪ್ತಾ ತಿಳಿಸಿದ್ದಾರೆ. ಇದೇ ವೇಳೆ, ಪ್ರಕರಣ ಸಾಬೀತಾದಲ್ಲಿ ಮೂರರಿಂದ ಹತ್ತು ವರ್ಷ ಜೈಲು ಶಿಕ್ಷೆಕೂಡ ವಿಧಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತಿನ ಶ್ರೀಮಂತ ನಗರಗಳಿವು: ಬೆಂಗಳೂರಿಗೂ ಮಿಲಿಯನೇರ್ ಸಿಟಿಗಳ ಪಟ್ಟಿಯಲ್ಲಿ​ ಸ್ಥಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.