ಬಾಲಸೋರ್ : ಸಾಮಾನ್ಯವಾಗಿ ರಾಖಿಗಳನ್ನು ಸಹೋದರರ ಕೈಗಳಿಗೆ ಕಟ್ಟಿ ಹರಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಗ್ರಾಮದಲ್ಲಿ ಮಾತ್ರ ಪ್ರಾಣಿಗಳು, ಮರಗಳಿಗೂ ರಾಖಿ ಕಟ್ಟುತ್ತಾರೆ.
ಬಾಲಸೋರ್‌ನ ಕುದುರೆ ಏಡಿಗಳು ಮತ್ತು ಸಾಗರ ಜೀವವೈವಿಧ್ಯದ ಪ್ರಮುಖ ಕರಾವಳಿ ಗ್ರಾಮವಾದ ನಿಯಾರಾದಲ್ಲಿ ಇಂಥಹದೊಂದು ವಿಶಿಷ್ಟ ಆಚರಣೆ ನಡೆದಿದೆ. ಹಾಗೆಯೇ ರಕ್ಷಾ ಬಂಧನದ ಮುನ್ನಾದಿನದಂದು ಅನೇಕ ಸಂಸ್ಥೆಗಳು ಮತ್ತು ಸಾರ್ವಜನಿಕರು ಪ್ರಾಣಿಗಳು ಮತ್ತು ಮರಗಳಿಗೂ ರಾಖಿ ಕಟ್ಟಿದ್ದಾರೆ.
ಇನ್ನು, ಬಾಲಸೋರ್‌ನ ಕುದುರೆ ಏಡಿ ಪ್ರೇಮಿಗಳು 2017ರಿಂದಲೂ ಏಡಿಯನ್ನು ವಿನೂತನ ರೀತಿ ಕಾಪಾಡಿಕೊಂಡು ಬರುತ್ತಿದ್ದಾರೆ. ಹಾಗೆ ಈ ಬಾರಿ ಕೂಡ ಆಕರ್ಷಕ ಕುದುರೆ ಏಡಿಗೆ ರಾಖಿ ಕಟ್ಟಲಾಗಿದೆ.
ಇದು ವಿಶಿಷ್ಟ ಎನಿಸಿದರು ಅವುಗಳ ರಕ್ಷಣೆಗೆ ಹಾಗೂ ಮುಂದಿನ ಪೀಳಿಗೆಗೂ ಇಂಥಹ ವಿಶಿಷ್ಟ ಏಡಿಗಳು ಇರಲಿ ಎಂಬ ಉದ್ದೇಶದಿಂದ ಈ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ.