ರುದ್ರಪ್ರಯಾಗ (ಉತ್ತರಖಂಡ): ಭಗವಾನ್ ಶಿವನ 11ನೇ ಜ್ಯೋತಿರ್ಲಿಂಗ ಇರುವ ಕೇದಾರನಾಥಕ್ಕೆ ಅಪಾರ ಭಕ್ತರ ದಂಡೇ ಹರಿದು ಬರುತ್ತಿದೆ. ಇಲ್ಲಿಯವರೆಗೆ 10 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈ ಯಾತ್ರೆಯನ್ನು ನಿರ್ವಹಿಸಲು ಸರ್ಕಾರವು ಖಾಸಗಿ ಹೆಲಿಕಾಪ್ಟರ್ ಕಂಪನಿಗಳನ್ನು ತೊಡಗಿಸಿಕೊಂಡಿದೆ. ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಧಾಮ ತಲುಪುತ್ತಾರೆ. ನಡೆಯಲು ಸಾಧ್ಯವಾಗದ ಅಥವಾ ನಡೆಯಲು ಬಾರದವರಿಗೆ ಕೇದಾರನಾಥ ಧಾಮದಲ್ಲಿ ಕುದುರೆ, ಹೇಸರಗತ್ತೆಗಳ ವ್ಯವಸ್ಥೆಯನ್ನೂ ಕೂಡ ಮಾಡಲಾಗಿದೆ. ಭಾರ ಸರಕುಗಳು, ಮನುಷ್ಯರನ್ನು ಹೊತ್ತುಹೊಂಡು ಸಾಗುವ ಮೂಕ ಪ್ರಾಣಿಗಳು ಕೇದಾರನಾಥದಂತಹ ಕಡಿದಾದ ಏರುಗಳನ್ನು ಬಹಳ ಕಷ್ಟದಿಂದ ಏರುತ್ತವೆ. ಜನಸ್ನೇಹಿಯಾಗಿರುವ ಈ ಕುದುರೆ ಮತ್ತು ಹೇಸರಗತ್ತೆಗಳೊಂದಿಗೆ ಜನರು ಕ್ರೌರ್ಯದ ಎಲ್ಲ ಮಿತಿಗಳನ್ನೂ ಮೀರುತ್ತಿದ್ದಾರೆ.
-
सोशल मीडिया पर पशु क्रूरता से सम्बन्धित प्रसारित हो रहे वीडियो का संज्ञान लेकर सेक्टर अधिकारी की शिकायत पर संबंधित घोड़ा संचालक के विरुद्ध अभियोग पंजीकृत कर वैधानिक कार्यवाही की जा रही है। अश्ववंशीय पशुओं के साथ हो रही क्रूरता के सम्बन्ध में अब तक कुल 14 अभियोग पंजीकृत किये हैं। pic.twitter.com/43GpTM6B5V
— उत्तराखण्ड पुलिस - Uttarakhand Police (@uttarakhandcops) June 23, 2023 " class="align-text-top noRightClick twitterSection" data="
">सोशल मीडिया पर पशु क्रूरता से सम्बन्धित प्रसारित हो रहे वीडियो का संज्ञान लेकर सेक्टर अधिकारी की शिकायत पर संबंधित घोड़ा संचालक के विरुद्ध अभियोग पंजीकृत कर वैधानिक कार्यवाही की जा रही है। अश्ववंशीय पशुओं के साथ हो रही क्रूरता के सम्बन्ध में अब तक कुल 14 अभियोग पंजीकृत किये हैं। pic.twitter.com/43GpTM6B5V
— उत्तराखण्ड पुलिस - Uttarakhand Police (@uttarakhandcops) June 23, 2023सोशल मीडिया पर पशु क्रूरता से सम्बन्धित प्रसारित हो रहे वीडियो का संज्ञान लेकर सेक्टर अधिकारी की शिकायत पर संबंधित घोड़ा संचालक के विरुद्ध अभियोग पंजीकृत कर वैधानिक कार्यवाही की जा रही है। अश्ववंशीय पशुओं के साथ हो रही क्रूरता के सम्बन्ध में अब तक कुल 14 अभियोग पंजीकृत किये हैं। pic.twitter.com/43GpTM6B5V
— उत्तराखण्ड पुलिस - Uttarakhand Police (@uttarakhandcops) June 23, 2023
ಕೆಲವೊಮ್ಮೆ ಈ ಪ್ರಾಣಿಗಳಿಗೆ ದೊಣ್ಣೆ ಮತ್ತು ರಾಡ್‌ಗಳಿಂದ ಹೊಡೆಯಲಾಗುತ್ತಿದೆ. ಮತ್ತೆ ಕೆಲವೊಮ್ಮೆ ಗಾಯಗೊಂಡ ಪ್ರಾಣಿಗಳಿಂದಲೇ ಕೆಲಸ ಮಾಡಿಸುತ್ತಾರೆ. ಇದೀಗ ಧಾಮದಲ್ಲಿ ಯಾರೂ ಊಹಿಸಲೂ ಸಾಧ್ಯವಾಗದಂತಹ ಘಟನೆ ನಡೆದಿದೆ. ಕೇದಾರನಾಥ ಮಾರ್ಗದ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಕುದುರೆಗೆ ಬಲವಂತವಾಗಿ ಧೂಮಪಾನ ಮಾಡಿಸಲಾಗುತ್ತಿದೆ. ಖೋಡಾ ಹೇಸರಗತ್ತೆ- ಕುದುರೆ ನಿರ್ವಾಹಕರು, ಕುದುರೆಗಳನ್ನು ಧೂಮಪಾನ ಮಾಡಿಸಲು ಪೀಡಿಸುತ್ತಿದ್ದಾರೆ. ಇದರಿಂದ ಅವು ಹೆಚ್ಚು ಕೆಲಸ ಮಾಡುತ್ತವೆ ಮತ್ತು ಸಣ್ಣಪುಟ್ಟ ಗಾಯಗಳ ಪರಿಣಾಮವನ್ನು ಅನುಭವಿಸುವುದಿಲ್ಲ ಎನ್ನುವುದು ಅವುಗಳ ಮಾಲೀಕರ ಲೆಕ್ಕಾಚಾರ. ಇದೀಗ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ದೃಶ್ಯವು ಕೇದಾರನಾಥ ಪಾದಚಾರಿ ಮಾರ್ಗದ ಲಿಂಚೋಲಿ ಬಳಿ ನಡೆದಿದೆ ಎಂದು ಹೇಳಲಾಗುತ್ತಿದೆ. ವೀಡಿಯೊದಲ್ಲಿ, ಕುದುರೆ-ಹೇಸರಗತ್ತೆ ನಿರ್ವಾಹಕರು, ಕುದುರೆ ಬಾಯಿಯನ್ನು ಒತ್ತುವ ಮೂಲಕ ಧೂಮಪಾನ ಮಾಡಲು ಪೀಡಿಸುತ್ತಿದ್ದಾರೆ. ಸಮೀಪದ ಪ್ರವಾಸಿಯೊಬ್ಬರು ಸಂಪೂರ್ಣ ಘಟನೆಯನ್ನು ವಿಡಿಯೋ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಕುದುರೆ-ಹೇಸರಗತ್ತೆ ನಿರ್ವಾಹಕರನ್ನೂ ಈ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ಉತ್ತರಿಸಿದ ಮಾಲೀಕ, ಕುದುರೆಯ ಆರೋಗ್ಯ ಕೆಟ್ಟದಾಗಿದೆ. ಇದರಿಂದ ಧೂಮಪಾನ ಮಾಡಲಾಗುತ್ತಿದೆ ಎಂದು ಹೇಳಿದ್ದಾನೆ.
ಪ್ರಸ್ತುತ ವ್ಯವಸ್ಥೆ ಹೀಗಿದೆ: ಕೇದಾರನಾಥ ಯಾತ್ರೆಯಲ್ಲಿ ಒಂದು ದಿನದಲ್ಲಿ ಸುಮಾರು 4,000 ಪ್ರಯಾಣಿಕರು ಕುದುರೆ ಮತ್ತು ಹೇಸರಗತ್ತೆಗಳ ಮೂಲಕ ಹೋಗಬಹುದು. ಆದರೆ, ಕೇದಾರನಾಥ ಧಾಮದಲ್ಲಿ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿ ನಿಯೋಜನೆಗೊಂಡಿರುವ ಮುಖ್ಯ ಪಶುವೈದ್ಯ ಡಾ. ಅಶೋಕ್ ಪನ್ವಾರ್ ಮಾತನಾಡಿ, ಎಲ್ಲ ಸಂದರ್ಭಗಳಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ಮತ್ತು ಮೇಲ್ವಿಚಾರಣೆಗಾಗಿ ಪಿಆರ್ಡಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು. ಸೋನ್‌ಪ್ರಯಾಗ, ಲಿಂಚೋಲಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ವೈದ್ಯರನ್ನು ನಿಯೋಜಿಸಲಾಗಿದೆ. ಕಳೆದ ವರ್ಷ 190 ಪ್ರಾಣಿಗಳು ಸಾವನ್ನಪ್ಪಿದ್ದರೆ, ಈ ಬಾರಿ ಇದುವರೆಗೆ 90 ಪ್ರಾಣಿಗಳು ಸಾವನ್ನಪ್ಪಿವೆ. ಗಾಯ, ಕಾಯಿಲೆ ಅಥವಾ ಇನ್ನಾವುದೇ ಕಾರಣದಿಂದ ಸಾವು ಸಂಭವಿಸಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹಾಲು ಕುಡಿಯಲು ಹೋಗಿ ಬಿಂದಿಗೆಯೊಳಗೆ ಸೆರೆಯಾದ ಬೆಕ್ಕಿನ ತಲೆ: ವಿಡಿಯೋ