ETV Bharat / bharat

ಬಸ್​- ಬೊಲೆರೋ ನಡುವೆ ಭೀಕರ ಅಪಘಾತ: ನಾಲ್ವರು ಮಹಿಳೆಯರು ಸಾವು, 12 ಮಂದಿಗೆ ಗಾಯ - ಬಸ್​- ಬೊಲೆರೋ ನಡುವೆ ಭೀಕರ ಅಪಘಾತ

ಬೊಲೆರೋ ಕ್ಯಾಂಪರ್‌ನಲ್ಲಿ ರಾಜಸ್ಥಾನದ ಲೋಹಾವತ್‌ನಿಂದ ಸುಮಾರು 18 ಮಂದಿ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದ ವೇಳೆ ಬಸ್ ಅಪ್ಪಳಿಸಿದೆ. ಈ ದುರ್ಘಟನೆಯಲ್ಲಿ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ.

horrific-road-accident-in-barmer
ಬಸ್​- ಬೊಲೆರೋ ನಡುವೆ ಭೀಕರ ಅಪಘಾತ: ನಾಲ್ವರ ಸಾವು, 12 ಮಂದಿಗೆ ಗಾಯ
author img

By

Published : Sep 11, 2021, 8:18 AM IST

ಬಾರ್ಮೆರ್(ರಾಜಸ್ಥಾನ): ಬಸ್ ಮತ್ತು ಬೊಲೆರೋ ಕ್ಯಾಂಪರ್​ ವಾಹನ ಮುಖಾಮುಖಿ ಡಿಕ್ಕಿಯಾಗಿ ನಾಲ್ವರು ಮಹಿಳೆಯರು ಮೃತಪಟ್ಟಿರುವ ಘಟನೆ ರಾಜಸ್ಥಾನದ ಬಾರ್ಮೆರ್​ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.

ಬಾರ್ಮೆರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 68ರಲ್ಲಿ ದುರ್ಘಟನೆ ಸಂಭವಿಸಿದ್ದು, ಸುಮಾರು 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಮಾಹಿತಿಯ ಪ್ರಕಾರ, ಬೊಲೆರೋ ಕ್ಯಾಂಪರ್‌ನಲ್ಲಿ ಲೋಹಾವತ್‌ನಿಂದ ಸುಮಾರು 18 ಮಂದಿ ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 68ರಲ್ಲಿ ಬಂದ ಬಸ್ ಕ್ಯಾಂಪರ್​ಗೆ ಡಿಕ್ಕಿ ಹೊಡೆದಿದೆ.

ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜೊತೆಗೆ ಸ್ಥಳಕ್ಕೆ ಭೇಟಿ ನೀಡಿದ ಬಾರ್ಮೆರ್ ಜಿಲ್ಲಾಧಿಕಾರಿ ಲೋಕ ಬಂಧು, ಪೊಲೀಸ್ ವರಿಷ್ಠಾಧಿಕಾರಿ ಆನಂದ ಶರ್ಮಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನರಪತ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಓಂಪ್ರಕಾಶ್ ವಿಷ್ಣೋಯ್ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ರಾಣೆ ಪುತ್ರ, ಶಾಸಕ ಮತ್ತು ಶಾಸಕನ ಪತ್ನಿ ವಿರುದ್ಧ ಲುಕ್​ಔಟ್ ನೋಟಿಸ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.