ETV Bharat / bharat

ಫ್ಲೈಓವರ್‌ ಮೇಲೆ ನಿಂತು ಅಪಘಾತ ವೀಕ್ಷಿಸುತ್ತಿದ್ದವರಿಗೆ 160 ಕಿಮೀ ವೇಗದಲ್ಲಿ ಬಂದು ಗುದ್ದಿದ ಕಾರು; 9 ಮಂದಿ ದಾರುಣ ಸಾವು! - ಅಹಮದಾಬಾದ್​ ಅಪಘಾತ

ಕಾರು ಅಪಘಾತವೊಂದನ್ನು ವೀಕ್ಷಿಸುತ್ತಿದ್ದಾಗ ಮತ್ತೊಂದು ಕಾರು ಬಂದು ರಭಸವಾಗಿ ಬಡಿದು ಸಂಭವಿಸಿದ ಭೀಕರ ಅಪಘಾತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಗುಜರಾತ್​ನ ಅಹಮದಾಬಾದ್​​ನಲ್ಲಿ ಘಟನೆ ನಡೆಯಿತು.

ಕಾರು ಅಪಘಾತ
ಕಾರು ಅಪಘಾತ
author img

By

Published : Jul 20, 2023, 8:28 AM IST

Updated : Jul 20, 2023, 2:31 PM IST

160 ಕಿಮೀ ವೇಗದಲ್ಲಿ ಬಂದು ಗುದ್ದಿದ ಕಾರು

ಅಹಮದಾಬಾದ್​: ಗುಜರಾತ್​ನ ಅಹಮದಾಬಾದ್​ನಲ್ಲಿ ಹಾದು ಹೋಗುವ ಸರ್ಕೇಜ್‌-ಗಾಂಧಿ ನಗರ ಹೆದ್ದಾರಿಯ ಇಸ್ಕಾನ್‌ ಫ್ಲೈ ಓವರ್‌ ಮೇಲೆ ತಡರಾತ್ರಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದೆ. ಡಂಪರ್​ ಮತ್ತು ಮಹೀಂದ್ರಾ ಥಾರ್​ ಕಾರಿನ ಮಧ್ಯೆ ಡಿಕ್ಕಿಯಾಗಿದ್ದನ್ನು ನೋಡಲು ಫ್ಲೈಓವರ್‌ ಮೇಲೆ ನಿಂತಿದ್ದ ಜನರಿಗೆ ಅಂದಾಜು 160 ಕಿಮೀ ವೇಗದಲ್ಲಿ ಬಂದ ಜಾಗ್ವಾರ್​ ಕಾರು ಗುದ್ದಿದ್ದು, 9 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಪೊಲೀಸ್​, ಗೃಹ ರಕ್ಷಕ ದಳ ಸಿಬ್ಬಂದಿ ಕೂಡ ಸೇರಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೊದಲಿಗೆ ಮಹೀಂದ್ರಾ ಕಾರು ಮತ್ತು ಡಂಪರ್ ನಡುವೆ ಸಣ್ಣ ಅಪಘಾತವಾಗಿದೆ. ಸುದ್ದಿ ತಿಳಿದು ಅಲ್ಲಿ ಜನ ಜಮಾಯಿಸಿದ್ದರು. ಇದೇ ವೇಳೆ ಶರವೇಗದಲ್ಲಿ ಬಂದ ಜಾಗ್ವಾರ್​ ಕಾರು ಜನರಿಗೆ ಗುದ್ದಿಕೊಂಡು ಹೋಗಿದೆ. ರಭಸಕ್ಕೆ ಜನರು 30 ಅಡಿ ದೂರ ಹಾರಿ ಬಿದ್ದಿದ್ದಾರೆ. ಸ್ಥಳದಲ್ಲೇ 6 ಮಂದಿ ಪ್ರಾಣ ಕಳೆದುಕೊಂಡರು. ಅಪಘಾತ ವೀಕ್ಷಣೆ ಮಾಡುತ್ತಿದ್ದ ಪೊಲೀಸ್​ ಸಿಬ್ಬಂದಿ ಮತ್ತು ಗೃಹ ರಕ್ಷಕ ದಳ ಸಿಬ್ಬಂದಿ ಕೂಡ ಅಸುನೀಗಿದ್ದಾರೆ.

  • #UPDATE | 12 people were brought to the hospital out of which 9 were dead. The injured are being treated in the hospital: Kripa Patel, Medical Officer, Sola Civil Hospital https://t.co/gQI8uJFcjZ

    — ANI (@ANI) July 20, 2023 " class="align-text-top noRightClick twitterSection" data=" ">

ಕಾರು ಗುದ್ದಿದ ಏಟಿಗೆ ಶವಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇಸ್ಕಾನ್ ಸೇತುವೆಯ ಮೇಲೆ ಅಂದಾಜು 40 ರಿಂದ 50 ಮಂದಿ ಸೇರಿದ್ದರು. ಅಪಘಾತಕ್ಕೆ ಕಾರಣವಾದ ಜಾಗ್ವಾರ್ ಕಾರು ಚಾಲಕ ಸೇರಿದಂತೆ 15ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ. ಜಾಗ್ವಾರ್ ಕಾರಿನಲ್ಲಿ ಬಾಲಕಿ ಸೇರಿದಂತೆ ನಾಲ್ವರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, "ಇಸ್ಕಾನ್ ಸೇತುವೆಯ ಮೇಲೆ ಮೊದಲು ಥಾರ್ ವಾಹನವು ಡಂಪರ್‌ಗೆ ಡಿಕ್ಕಿ ಹೊಡೆಯಿತು. ಅದನ್ನು ವೀಕ್ಷಿಸಲು ಜನರು ಓಡಿಬಂದರು. ಅದೇ ಸಮಯಕ್ಕೆ ಜಾಗ್ವಾರ್ ಕಾರು ವೇಗವಾಗಿ ಬಂದು ಅಪಘಾತ ದೃಶ್ಯ ನೋಡುತ್ತಿದ್ದವರಿಗೆ ರಭಸವಾಗಿ ಗುದ್ದಿತು. ಜನರು ತರೆಗೆಲೆಯಂತೆ ಹಾರಿಬಿದ್ದರು. ಇದೊಂದು ಭೀಕರ ಅಪಘಾತ" ಎಂದು ವಿವರಿಸಿದರು. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ಬಂದ ಅವರು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು.

  • #WATCH | 9 people including two policemen have died in the accident. No one is admitted here, said Kripa Patel, Medical Officer, Sola Civil Hospital, Ahmedabad pic.twitter.com/WYQaKOWSS6

ಸ್ಥಳಕ್ಕಾಗಮಿಸಿದ ಟ್ರಾಫಿಕ್ ಎಸಿಪಿ ಎಸ್.ಜೆ.ಮೋದಿ ಮಾತನಾಡಿ, "ರಾತ್ರಿ 1 ಗಂಟೆ ಸುಮಾರಿಗೆ ಥಾರ್ ಜೀಪ್ ಇಸ್ಕಾನ್ ಸೇತುವೆ ಮೇಲೆ ಡಂಪರ್​ಗೆ ಡಿಕ್ಕಿ ಹೊಡೆದಿದೆ. ಜನರು ಇದನ್ನು ನೋಡುತ್ತಿದ್ದಾಗ ಅಷ್ಟರಲ್ಲಿ ಜಾಗ್ವಾರ್ ವಾಹನವೊಂದು ವೇಗವಾಗಿ ಬಂದು ಪೊಲೀಸರು ಹಾಗೂ ಜನರನ್ನು ಗುದ್ದಿದೆ. 15 ಮಂದಿ ಗಾಯಗೊಂಡಿದ್ದಾರೆ. 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರರು ಚಿಕಿತ್ಸೆಗೆ ದಾಖಲಿಸಿದಾಗ ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ ಮತ್ತು ಮೃತರನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ. ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾಗಿ ತಿಳಿದುಬಂದಿದೆ. ಜಾಗ್ವಾರ್​ ಕಾರಿನ ಚಾಲಕನೂ ಗಾಯಗೊಂಡಿದ್ದಾನೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರೈಲಿನಿಂದ ಇಳಿಯುವಾಗ ಅಚಾನಕ್ ಮೋರಿಗೆ ಬಿದ್ದ 4 ತಿಂಗಳ ಹಸುಗೂಸು; ಕರುಳುಹಿಂಡುವ ತಾಯಿಯ ಆಕ್ರಂದನ

Last Updated : Jul 20, 2023, 2:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.