ETV Bharat / bharat

Adipurush ವಿವಾದ: ಜನರ ಭಾವನೆಗಳಿಗೆ ಧಕ್ಕೆ.. ಛತ್ತೀಸ್‌ಗಢದಲ್ಲಿ ಚಿತ್ರ ನಿಷೇಧಿಸುವ ಭರವಸೆಯಿದೆ ಎಂದ ಕೇಂದ್ರ ಸಚಿವೆ - ಕೇಂದ್ರ ಸಚಿವೆ ರೇಣುಕಾ ಸಿಂಗ್

ಛತ್ತೀಸ್‌ಗಢದಲ್ಲಿ ಆದಿಪುರುಷ ಚಿತ್ರವನ್ನು ಶೀಘ್ರದಲ್ಲೇ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಿಷೇಧಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವೆ ರೇಣುಕಾ ಸಿಂಗ್ ಹೇಳಿದ್ದಾರೆ.

Hope CM Baghel will ban film Adipurush in Chhattisgarh: Union minister Renuka Singh
Adipurush ವಿವಾದ: ಜನರ ಭಾವನೆಗಳಿಗೆ ಧಕ್ಕೆ... ಛತ್ತೀಸ್‌ಗಢದಲ್ಲಿ ಚಿತ್ರ ನಿಷೇಧಿಸುವ ಭರವಸೆಯಿದೆ ಎಂದ ಕೇಂದ್ರ ಸಚಿವೆ
author img

By

Published : Jun 18, 2023, 3:59 PM IST

ರಾಯಪುರ (ಛತ್ತೀಸ್‌ಗಢ): ನಟ ಪ್ರಭಾಸ್​​ ಅಭಿನಯದ ಪ್ಯಾನ್​ ಇಂಡಿಯಾ ಚಿತ್ರ ಆದಿಪುರುಷ ಬಗ್ಗೆ ಸಾಕಷ್ಟು ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಕೇಂದ್ರ ಸಚಿವೆ ರೇಣುಕಾ ಸಿಂಗ್ ಅವರು ಚಿತ್ರದಲ್ಲಿ ರಾಮ, ಜಾನಕಿ, ಹನುಮಾನ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿರುವ ರೀತಿ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ, ಛತ್ತೀಸ್‌ಗಢದಲ್ಲಿ ಆದಿಪುರುಷ ಚಲನಚಿತ್ರವನ್ನು ನಿಷೇಧಿಸುವ ಭರವಸೆಯಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಛತ್ತೀಸ್‌ಗಢದ ಸುರ್ಗುಜಾದ ಲೋಕಸಭಾ ಸದಸ್ಯೆ ಹಾಗೂ ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ರಾಜ್ಯ ಸಚಿವರಾದ ರೇಣುಕಾ ಸಿಂಗ್, ಆದಿಪುರುಷ ಚಿತ್ರವು ರಾಮಾಯಣವನ್ನು ಆಧರಿಸಿದೆ. ಚಿತ್ರದಲ್ಲಿ ನಮ್ಮ ಶ್ರೀರಾಮ, ಮಾತಾ ಜಾನಕಿ, ವೀರ ಹನುಮಾನ್ ಮತ್ತು ಇತರ ಪಾತ್ರಗಳನ್ನು ಚಿತ್ರಿಸಿರುವ ರೀತಿ ಮತ್ತು ಪಾತ್ರಗಳ ಸಂಭಾಷಣೆಗಳಿಂದ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ತಿಳಿಸಿದ್ದಾರೆ.

  • फ़िल्म आदिपुरुष, जो रामायण पर आधारित है। जिसमें हमारे आराध्य प्रभु श्रीराम, माता जानकी, वीर हनुमान एवं अन्य चरित्रों का फिल्मांकन जिस तरीके से किया गया है पात्रों के मुंह से जिस प्रकार से भद्दे डायलॉग्स बोले गये हैं इससे करोड़ों लोगों की भावनाएं आहत हुई हैं। 1/2

    — Renuukaa Sinngh (@renukasinghbjp) June 17, 2023 " class="align-text-top noRightClick twitterSection" data=" ">

ಮುಂದುವರೆದು, ಛತ್ತೀಸ್‌ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶ್ರೀರಾಮನ ತಾಯಿಯ ತವರು ನೆಲದಲ್ಲಿ ಈ ಚಲನಚಿತ್ರವನ್ನು ನಿಷೇಧಿಸುವ ಆದೇಶವನ್ನು ಶೀಘ್ರದಲ್ಲೇ ಹೊರಡಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಕೇಂದ್ರ ಸಚಿವೆ ರೇಣುಕಾ ಸಿಂಗ್ ಟ್ವೀಟ್​ ಮಾಡಿದ್ದಾರೆ. ಛತ್ತೀಸ್‌ಗಢವು ಶ್ರೀರಾಮನ ತಾಯಿ ಕೌಶಲ್ಯೆಯ ಜನ್ಮಸ್ಥಳ ಎಂದು ನಂಬಲಾಗಿದೆ.

ಇದನ್ನೂ ಓದಿ: Adipurush: 'ಆದಿಪುರುಷ'ನಿಗೆ ಭಾರಿ ಆಕ್ಷೇಪ; ವಿವಾದಿತ ಸಂಭಾಷಣೆ​ ಬದಲಿಸಲು ಚಿತ್ರತಂಡ ನಿರ್ಧಾರ

ಮತ್ತೊಂದೆಡೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡ ಆದಿಪುರುಷ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದಿಪುರುಷ ಚಿತ್ರದ ಬಗ್ಗೆ ಓದಿದ್ದೇನೆ ಮತ್ತು ಕೇಳಿದ್ದೇನೆ. ಚಿತ್ರದಲ್ಲಿ ರಾಮ ಮತ್ತು ಹನುಮಂತನ ಗೌರವಕ್ಕೆ ಕಳಂಕ ತರುವ ಪ್ರಯತ್ನವನ್ನು ಮಾಡಲಾಗಿದೆ. ಜನರು ಒತ್ತಾಯಿಸಿದರೆ ಅದನ್ನು ರಾಜ್ಯದಲ್ಲಿ ನಿಷೇಧಿಸಲು ಕಾಂಗ್ರೆಸ್ ಸರ್ಕಾರ ಪರಿಗಣಿಸಬಹುದು ಎಂದು ಸಿಎಂ ಬಘೇಲ್​ ತಿಳಿಸಿದ್ದಾರೆ.

  • मैंने 'आदिपुरुष' के बारे पढ़ा और सुना। अत्यधिक पीड़ा हो रही है कि आख़िर कैसे सेंसर बोर्ड ने एक ऐसी फ़िल्म को सर्टिफिकेट दे दिया जो हमारी आस्था से खिलवाड़ कर रही है, हमारे आराध्य का मजाक उड़ा रही है.

    केंद्र सरकार को इसका जवाब देना होगा.

    हमारे भाँचा राम का अपमान हम नहीं सहेंगे.… pic.twitter.com/QA7yk9r7JY

    — Bhupesh Baghel (@bhupeshbaghel) June 17, 2023 " class="align-text-top noRightClick twitterSection" data=" ">

ಅಲ್ಲದೇ, ಚಿತ್ರದಲ್ಲಿನ ಸಂಭಾಷಣೆಗಳು ಆಕ್ಷೇಪಾರ್ಹ ಮತ್ತು ಅಸಭ್ಯವಾಗಿದೆ ಎಂದು ಆರೋಪಿಸಿರುವ ಬಘೇಲ್​, ತಮ್ಮನ್ನು ತಾವು ಧರ್ಮದ ಪಾಲಕರು ಎಂದು ಕರೆದುಕೊಳ್ಳುವ ರಾಜಕೀಯ ಪಕ್ಷಗಳು ಯಾಕೆ ಮೌನವಾಗಿವೆ?. ನಮ್ಮ ನಂಬಿಕೆಯೊಂದಿಗೆ ಆಟ ಆಡುತ್ತಿರುವ ಇಂತಹ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಹೇಗೆ ಪ್ರಮಾಣ ಪತ್ರ ನೀಡಿದೆ?. ರಾಮನ ಅವಮಾನವನ್ನು ನಾವು ಸಹಿಸುವುದಿಲ್ಲ. ಚಿತ್ರದ ಹೊಣೆಗಾರರು ಕ್ಷಮೆ ಕೇಳಿಬೇಕೆಂದು ಒತ್ತಾಯಿಸಿದ್ದಾರೆ.

ಆದಿಪುರುಷ ಚಿತ್ರ ಬಿಡುಗಡೆಯಾದ ನಂತರ ಛತ್ತೀಸ್‌ಗಢದಲ್ಲಿ ಆದಿಪುರುಷ ಚಿತ್ರವನ್ನು ನಿಷೇಧಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯಿಸಲು ಆರಂಭಿಸಿವೆ. ಶನಿವಾರ ಮನೇಂದ್ರಗಢದಲ್ಲಿ ಕಲಾ ಮತ್ತು ಸಾಹಿತ್ಯ ಮಂಚ್‌ ನೇತೃತ್ವದಲ್ಲಿ ಥಿಯೇಟರ್ ಮುಂದೆ ಬಂದು ಪ್ರತಿಭಟನೆ ಸಹ ನಡೆಸಲಾಗಿದೆ. ಚಿತ್ರದ ವಿರುದ್ಧ ಘೋಷಣೆಗಳನ್ನು ಕೂಗಿ ಚಿತ್ರವನ್ನು ನಿಷೇಧಿಸುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: Adipurush Collection: ವಿವಾದಗಳ ಹೊರತಾಗಿಯೂ 2 ದಿನದಲ್ಲಿ ₹200 ಕೋಟಿ ಬಾಚಿದ ಆದಿಪುರುಷ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.