ETV Bharat / bharat

ಆಂಧ್ರದಲ್ಲಿ ಘೋರ ಮರ್ಯಾದಾ ಹತ್ಯೆ: ಮಗಳ ಬಾಳಿಗೆ ಬಿರುಗಾಳಿಯಾದ ತಂದೆ!

ಶಾಂತವಾಗಿದ್ದ ನನ್ನ ಬಾಳಿಗೆ ನನ್ನ ತಂದೆಯೇ ಬಿರುಗಾಳಿಯಾಗಿದ್ದಾರೆ ಎಂದು ಆರೋಪಿ ಮಹೇಶ್ವರಿ ಈಗ ಇಬ್ಬರ ಮೇಲೆ ದೂರು ನೀಡಿದ್ದಾಳೆ. ನನ್ನ ಮಗ ಕೆಳಜಾತಿಗೆ ಸೇರಿದವನಾಗಿದ್ದ. ಆದ್ದರಿಂದ ಅವನನ್ನು ಕೊಂದು ಹಾಕಿದರು ಎಂದು ಮೃತ ವ್ಯಕ್ತಿಯ ತಂದೆ ಆರೋಪ ಮಾಡಿದ್ದಾರೆ.

Honour Killing in Andhra Pradesh
ಆಂಧ್ರಪ್ರದೇಶದಲ್ಲಿ ಮತ್ತೆ ಮರ್ಯಾದಾ ಹತ್ಯೆ
author img

By

Published : Jan 1, 2021, 9:18 PM IST

ಕರ್ನೂಲ್(ಆಂಧ್ರಪ್ರದೇಶ) : ಅಪರಿಚಿತ ಗುಂಪೊಂದು ಕೆಳ ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಂದು ಹಾಕಿರುವ ಘಟನೆ ಕರ್ನೂಲ್ ಜಿಲ್ಲೆಯ ಅಡೋನಿಯಲ್ಲಿ ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು 35 ವರ್ಷದ ಆ್ಯಡಂ ಸ್ಮಿತ್​ ಎಂದು ತಿಳಿದು ಬಂದಿದೆ.

ಹತ್ಯೆಗೀಡಾದ ವ್ಯಕ್ತಿ

ಅಡೋನಿಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಆ್ಯಡಂ, ಗುರುವಾರ ಸಂಜೆ ಕೆಲಸ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ತನ್ನ ಮನೆಯತ್ತ ತೆರಳುತ್ತಿದ್ದಾಗ ದಾಳಿ ಮಾಡಿದ ಆಗಂತುಕರು ಅವನನ್ನು ತಡೆದು ಕೊಂದು ಹಾಕಿದ್ದಾರೆ.

ಕಬ್ಬಿಣದ ರಾಡ್​ನಿಂದ ಹಲ್ಲೆ ಮಾಡಿದ ಕ್ರೂರಿಗಳು ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದಾರೆ. ಸ್ಥಳೀಯರು ನೋಡಿ ಅವರನ್ನು ಹಿಡಿಯಲು ಯತ್ನಿಸಿದರಾದರೂ ಕೊಲೆಗಾರರು ಪರಾರಿಯಾಗಿದ್ದಾರೆ. ಕೊಲೆಗೀಡಾದ ಆ್ಯಡಂ ಗುರ್ಜಾಲ ಗ್ರಾಮಕ್ಕೆ ಸೇರಿದ ನಾಗಣ್ಣ ಮತ್ತು ಸುವರ್ತಮ್ಮ ಅವರ ಮೂರನೆಯ ಮಗ ಎಂದು ತಿಳಿದು ಬಂದಿದೆ.

ಓದಿ : ತೆಲಂಗಾಣವನ್ನೇ ಬೆಚ್ಚಿಬೀಳಿಸಿದ್ದ ಮರ್ಯಾದಾ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಆತ್ಮಹತ್ಯೆಗೆ ಶರಣು

ಮರ್ಯಾದಾ ಹತ್ಯೆಯ ಶಂಕೆ:

ಹತ್ಯೆಯಾದ ಯುವಕ ಆ್ಯಡಂ ಸ್ಮಿತ್ ಅದೇ ಗ್ರಾಮಕ್ಕೆ ಸೇರಿದ ಇರಾನ್ನಾ ಮತ್ತು ಲಕ್ಷ್ಮಿ ಎಂಬುವರ ಮಗಳಾದ ಮಹೇಶ್ವರಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಪದವಿ ಓದಿದ್ದ ಮಹೇಶ್ವರಿ ನಂದ್ಯಾಲ್‌ನಲ್ಲಿ ಬ್ಯಾಂಕ್ ಪರೀಕ್ಷಾ ಕೋಚಿಂಗ್‌ಗೆ ಹೋಗುವುದಾಗಿ ಮನೆಯಲ್ಲಿ ಹೇಳಿ ಯುವಕ ಆಡಂ ಜೊತೆ ಹೈದರಾಬಾದ್​ಗೆ ಬಂದಿದ್ದರು. ಅಲ್ಲಿ ಆರ್ಯ ಸಮಾಜದಲ್ಲಿ ವಿವಾಹವಾದ ಆ್ಯಡಂ ಮತ್ತು ಮಹೇಶ್ವರಿ ಕೆಲವು ದಿನಗಳ ಕಾಲ ಸ್ನೇಹಿತರ ಮನೆಯಲ್ಲಿದ್ದರು. ಈ ವಿಷಯ ತಿಳಿದ ಮಹೇಶ್ವರಿಯ ಕುಟುಂಬ ಸದಸ್ಯರು ಸ್ಮಿತ್‌ಗೆ ಮೂರು ಬಾರಿ ದೂರವಾಣಿ ಮೂಲಕ ಎಚ್ಚರಿಸಿದ್ದಾರೆ. ಇವರಿಬ್ಬರ ಮದುವೆಗೆ ಸಮ್ಮತಿ ಇಲ್ಲದವರೇ ಕೊಲೆಗೈದಿದ್ದಾರೆ ಎನ್ನಲಾಗುತ್ತಿದೆ. ಕೆಳ ವರ್ಗಕ್ಕೆ ಸೇರಿದ ಆ್ಯಡಂ ಮೇಲು ವರ್ಗದ ಸಮುದಾಯಕ್ಕೆ ಸೇರಿದ ತಮ್ಮ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಪತ್ನಿಯ ಸಂಬಂಧಿಕರು ಯುವಕನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಹಳ್ಳಿಗೆ ಬಂದ್ರೆ ಹುಷಾರ್​..!

ಹೆಂಡತಿ ಕಡೆಯವರ ಬೆದರಿಕೆಯಿಂದ ದೂರವೇ ಇದ್ದ ಸ್ಮಿತ್‌ ಪೊಲೀಸರ ಮೊರೆ ಹೋಗಿದ್ದನು. ಹಾಗಾಗಿ ಪೊಲೀಸರು ಎರಡು ಕುಟುಂಬಗಳನ್ನು ಕರೆದು ರಾಜಿಗೆ ಸಿದ್ಧತೆ ಮಾಡಿಕೊಂಡಿದ್ದರು. ಅದರಂತೆ ಸ್ಮಿತ್‌ ಹಾಗೂ ಮಹೇಶ್ವರಿ ಡಿಸೆಂಬರ್ 1 ರಂದು ತಮ್ಮೂರಿಗೆ ಬಂದಿದ್ದರು. ಈ ವೇಳೆ ಮಹೇಶ್ವರಿಯ ಪೋಷಕರು ನೀನು ನಮ್ಮೊಂದಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದರು. ಇದಕ್ಕೆ ಸೊಪ್ಪು ಹಾಕದ ಮಹೇಶ್ವರಿ ತಾನು ತನ್ನ ಗಂಡನೊಂದಿಗೆ ಇರುವುದಾಗಿ ಹೇಳಿದ್ದಳು. ಇದರಿಂದ ಕುಪಿತಗೊಂಡ ತಂದೆ ಇರಾನ್ನಾ ಇನ್ಮೇಲೆ ಯಾವತ್ತೂ ಊರಿಗೆ ಬರದಂತೆ ಇಬ್ಬರಿಗೂ ಬೆದರಿಕೆ ಹಾಕಿದ್ದನು. ಇದಕ್ಕೆ ಮಹೇಶ್ವರಿ ಒಪ್ಪಿಕೊಂಡು ತನ್ನ ಗಂಡನ ಜೊತೆಯಲ್ಲಿಯೇ ಇದ್ದಳು. ಈ ಘಟನೆಯನ್ನು ಮರೆಯದ ಮಹೇಶ್ವರಿಯ ಪೋಷಕರೇ ಆ್ಯಡಂನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಓದಿ : ಅಳಿಯನನ್ನು ಕೊಲ್ಲಿಸಿ... ಮಗಳ ಸಂಸಾರಕ್ಕೆ ಕೊಳ್ಳಿಯಿಟ್ಟ 'ಸುಪಾರಿ' ತಂದೆಗೆ ತಕ್ಕ ಶಿಕ್ಷೆ ವಿಧಿಸಿದ ಕೋರ್ಟ್​

ಮಗಳ ಬಾಳಿಗೆ ಬಿರುಗಾಳಿಯಾದ ತಂದೆ:

ಶಾಂತವಾಗಿದ್ದ ನನ್ನ ಬಾಳಿಗೆ ನನ್ನ ತಂದೆಯೇ ಬಿರುಗಾಳಿಯಾಗಿದ್ದಾರೆ ಎಂದು ಆರೋಪಿಸಿ ಮಹೇಶ್ವರಿ ಈಗ ಇಬ್ಬರ ಮೇಲೆ ದೂರು ನೀಡಿದ್ದಾಳೆ. ನನ್ನ ಮಗ ಕೆಳಜಾತಿಗೆ ಸೇರಿದವನಾಗಿದ್ದ. ಆದ್ದರಿಂದ ಅವನನ್ನು ಕೊಂದು ಹಾಕಿದ್ದಾರೆ ಎಂದು ಮೃತ ವ್ಯಕ್ತಿಯ ತಂದೆಯೂ ಸಹ ಆರೋಪ ಮಾಡಿದ್ದಾರೆ. ಗಂಡನ ಮೃತದೇಹದ ಮೇಲೆ ಬಿದ್ದು ಹೊರಳಾಡುತ್ತಿದ್ದ ಮಹೇಶ್ವರಿಯ ಪರಿಸ್ಥಿತಿ ಕಂಡು ಚಿಕ್ಕಪ್ಪ ಕ್ಷಮಿಸುವಂತೆ ಆಕೆಯ ಕಾಲು ಹಿಡಿದು ಬೇಡಿಕೊಂಡ ಘಟನೆ ಸಹ ಇಲ್ಲಿ ನಡೆಯಿತು. ದೂರು ದಾಖಲಿಸಿಕೊಂಡಿರುವ ಸ್ಥಳೀಯ ಠಾಣಾ ಪೊಲೀಸರು ಎಸ್‌ಸಿ-ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಐಪಿಸಿಯ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಡಿಎಸ್‌ಪಿ ವಿನೋದ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.