ಮೊರೆನಾ (ಮಧ್ಯಪ್ರದೇಶ): ತಂದೆಯೊಬ್ಬ ಮಗಳು ಮತ್ತು ಆಕೆಯ ಪತಿಯನ್ನು ಹತ್ಯೆ ಮಾಡಿದ್ದಾರೆ ಎಂದು ಮಧ್ಯಪ್ರದೇಶ ಪೊಲೀಸರು ಹೇಳಿದ್ದಾರೆ. ಇದೇ ವೇಳೆ ಅವರು ಇದೊಂದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಅಂಬಾಹ್ ಪೊಲೀಸ್ ಠಾಣೆ ವ್ಯಾಪ್ತಿಯ ರತನ್‌ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಬಾಲಕಿಯ ತಂದೆ ರಾಜಪಾಲ್ ಸಿಂಗ್ ಜೂನ್ 3 ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಚೊಟ್ಟು ತೋಮರ್ ಎಂದು ಗುರುತಿಸಿದ್ದಾರೆ. ಜೂನ್ 4 ರಂದು ಅಂಬಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮತ್ತೊಂದು ನಾಪತ್ತೆ ದೂರು ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತ ಮಹಿಳೆ ಶಿವಾನಿ ಕುಟುಂಬದವರೇ ಇಬ್ಬರನ್ನೂ ಕೊಂದಿದ್ದಾರೆ ಎಂದು ಛೋಟು ತೋಮರ್ ಕುಟುಂಬ ಆರೋಪಿಸಿತ್ತು. ತನಿಖೆಯ ಭಾಗವಾಗಿ, ಪೊಲೀಸರು ಶಿವಾನಿಯ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದರು.
ಇದನ್ನು ಓದಿ:Women shot dead: ದೆಹಲಿಯಲ್ಲಿ ಸಹೋದರಿಯರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳ ಬಂಧನ
ವಿಚಾರಣೆ ವೇಳೆ ಮೃತ ಮಹಿಳೆ ಶಿವಾನಿ ಅವರ ತಂದೆ ರಾಜ್‌ಪಾಲ್ ಸಿಂಗ್ ತೋಮರ್ ಅಪರಾಧ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೆಲವು ಸಂಬಂಧಿಕರೊಂದಿಗೆ ಸೇರಿಕೊಂಡು ಮಗಳು ಹಾಗೂ ಆಕೆಯ ಪತಿಯನ್ನು ಕೊಂದು ಅವರ ದೇಹವನ್ನು ಮೊಸಳೆ ತುಂಬಿದ ನದಿಗೆ ಎಸೆದಿದ್ದೆವು ಎಂದು ಶಿವಾನಿ ತಂದೆ ರಾಜ್‌ಪಾಲ್ ಸಿಂಗ್ ಪೊಲೀಸರಿಗೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಪತಿ- ಪತ್ನಿ ಮೃತದೇಹಗಳನ್ನು ಪತ್ತೆ ಮಾಡಲು ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ತಂಡ ಮತ್ತು ಡೈವರ್‌ಗಳು ಚಂಬಲ್ ನದಿಯಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ, ಕಳೆದ 10 ದಿನಗಳಿಂದ ಛೋಟು ತೋಮರ್ ಕುಟುಂಬ, ಶಿವಾನಿ ಕುಟುಂಬದ ವಿರುದ್ಧ ಕೊಲೆ ಆರೋಪ ಮಾಡುತ್ತಲೇ ಬಂದಿತ್ತು. ಆದರೆ ಪೊಲೀಸರು ಇಬ್ಬರೂ ಮನೆಯಿಂದ ಓಡಿಹೋಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿ, ಅವರ ಆರೋಪವನ್ನು ಪೊಲೀಸರು ತಳ್ಳಿ ಹಾಕುತ್ತಾ ಬಂದಿದ್ದರು ಎನ್ನಲಾಗಿತ್ತು. ಆದರೆ ಅಂಬಾಹ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಅಲ್ಲಿನ ಎಸ್ಪಿಗೆ ಪುರುಷ ಮತ್ತು ಮಹಿಳೆ ಪರಾರಿಯಾಗಿದ್ದಾರೆ ಎಂಬ ವರದಿ ನೀಡಿದ್ದರು. ಆದರೆ ಎಸ್ಪಿ ಈ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ ಹಿನ್ನೆಲೆಯಲ್ಲಿ ಶಿವಾನಿ ತಂದೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಿದ್ದಿದ್ದು, ಅವರನ್ನ ವಶಕ್ಕೆ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿ: ವಿಶ್ವ ತಂದೆಯರ ದಿನದಂದೇ ದುರಂತ: ಕಲಬುರಗಿಯಲ್ಲಿ ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆ