ETV Bharat / bharat

ಮರ್ಯಾದಾ ಹತ್ಯೆ ಪ್ರಕರಣ: ಪ್ರಿಯಕರನ ಜತೆ ಸೇರಿ ಮಗಳನ್ನೇ ಕೊಂದ ಮಾಯಾಂಗಿನಿ

ಹತ್ತು ದಿನಗಳ ಹಿಂದೆಯೇ ತನ್ನ ಪ್ರಿಯಕರ ನರಸಿಂಹನೊಂದಿಗೆ ಸೇರಿ ಮಗಳನ್ನು ಕೊಲ್ಲಲು ತಾಯಿ ಯೋಜನೆ ರೂಪಿಸಿದ್ದಳಂತೆ. ಇದಾದ ನಂತರ ಭಾನುವಾರ ರಾತ್ರಿ ಮಗಳನ್ನು ಕೊಲ್ಲಲು ತಾಯಿ ನಿರ್ಧರಿಸಿ ಸಿನಿಮಾ ಶೈಲಿಯಲ್ಲಿ ಪ್ಲಾನ್​ ರೂಪಿಸಿದ್ದಾಳೆ.

ಮರ್ಯಾದಾ ಹತ್ಯೆ ಪ್ರಕರಣ: ಪ್ರಿಯಕರನ ಜತೆ ಸೇರಿ ಮಗಳನ್ನೇ  ಕೊಂದ ಮಾಗಾಂಗಿನಿ

author img

By

Published : Feb 17, 2022, 3:20 PM IST

ಸಂಗಾರೆಡ್ಡಿ (ತೆಲಂಗಾಣ) : ಕ್ರೂರಿ ತಾಯಿ ತನ್ನ ಪ್ರಿಯಕರನ ಜೊತೆ ಸೇರಿ ಮಗಳನ್ನು ಕೊಂದಿದ್ದಾಳೆ. ಪ್ರೀತಿಯ ಹೆಸರಿನಲ್ಲಿ ತನಗೆ ಅವಮಾನ ಮಾಡಲಾಗಿದೆ, ಮಗಳು ಇನ್ನೊಂದು ಸಮುದಾಯದ ಯುವಕನನ್ನು ಪ್ರೀತಿಸುತ್ತಾಳೆ ಎಂದು ಕೋಪಗೊಂಡು ಈ ಕೃತ್ಯ ಎಸಗಿದ್ದಾಳೆ.

ಸಂಗಾರೆಡ್ಡಿ ಜಿಲ್ಲೆಯ ಜಹೀರಾಬಾದ್ ವಲಯದ ಹುಗ್ಗೆಲಿಯಲ್ಲಿ ಸೋಮವಾರ ಸಂಚಲನ ಮೂಡಿಸಿದ್ದ ಈ ದಲಿತ ಅಪ್ರಾಪ್ತ ಬಾಲಕಿಯ ಹತ್ಯೆಯಲ್ಲಿ ಹಲವು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿವೆ.

ಘಟನೆ ಏನು?: ಹತ್ತು ದಿನಗಳ ಹಿಂದೆಯೇ ತನ್ನ ಪ್ರಿಯಕರ ನರಸಿಂಹನೊಂದಿಗೆ ಸೇರಿ ಮಗಳನ್ನು ಕೊಲ್ಲಲು ತಾಯಿ ಯೋಜನೆ ರೂಪಿಸಿದ್ದಳಂತೆ. ಇದಾದ ನಂತರ ಭಾನುವಾರ ರಾತ್ರಿ ಮಗಳನ್ನು ಕೊಲ್ಲಲು ತಾಯಿ ನಿರ್ಧರಿಸಿದ್ದಾಳೆ. ಇದಕ್ಕೂ ಮೊದಲು ಆಕೆ ಹಾಗೂ ಪ್ರಿಯಕರ ಮದ್ಯ ಸೇವಿಸಿದ್ದಾರೆ.

ಅದೇ ಗ್ರಾಮದ ಫಕೀರ್ ಅಫ್ಸರ್ (24) ಎಂಬಾತನನ್ನು ಈಕೆ ಪ್ರೀತಿ ಮಾಡುತ್ತಿದ್ದಳು. ಪೂರ್ವ ನಿಯೋಜಿತ ಪ್ಲಾನ್​ ಪ್ರಕಾರ ತನ್ನ ಮಗಳನ್ನು ಮಾವಿನ ತೋಟಕ್ಕೆ ಕಳುಹಿಸಿದ್ದಾಳೆ. ಈ ಮೋದಲೇ ಅಲ್ಲೇ ಇದ್ದ ನರಸಿಂಹ ಈ ಬಾಲಕಿ ಜೊತೆ ಜಗಳದ ನಾಟಕ ಆಡಿದ್ದಾನೆ. ತಾನು ಯಾರ ಮಾತನ್ನು ಕೇಳಲ್ಲ ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗುತ್ತೇನೆ ಬಾಲಕಿ ಹೇಳುತ್ತಾಳೆ. ಆ ಕ್ಷಣವೇ ತಾಯಿ ಬಾಲಕಿಯ ಕಾಲಿನ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರ ನರಸಿಂಹ ಬಟ್ಟೆಯಿಂದ ಬಾಲಕಿ ಕತ್ತನ್ನು ಸುತ್ತಿ ಆಕೆಯ ಜೀವ ತೆಗೆಯುತ್ತಾನೆ.

ಇದನ್ನೂ ಓದಿ: ಸರ್ಕಾರಿ ಶಾಲೆಗೆ ಎರಡೂವರೆ ಎಕರೆ ಭೂಮಿ ದಾನ ಮಾಡಿದ ಮುಸ್ಲಿಂ ಕುಟುಂಬ

ಮಾಯಾಂಗಿನಿ ನಾಟಕ: ರಾತ್ರಿ ಹನ್ನೊಂದು ಗಂಟೆಯ ನಂತರ ಮಗಳು ತನಗೆ ಹೇಳದೇ ಕೇಳದೆ ದಿಂಬುಗಳನ್ನು ಜೋಡಿಸಿ ಕಂಬಳಿ ಹೊದಿಸಿ ಎಲ್ಲೋ ಹೋಗಿದ್ದಾಳೆ ಎಂದು ತಾಯಿ ಬುಜ್ಜಮ್ಮ ಅಕ್ಕಪಕ್ಕದವರಿಗೆ ತಿಳಿಸುತ್ತಾಳೆ. ಆ ವೇಳೆ ಆಕೆಯ ಪ್ರಿಯಕರನನ್ನು ದೂರುತ್ತಾಳೆ.

ಹುಡುಗಿ ಸತ್ತ ವಿಷಯ ತಿಳಿದ ನಂತರ ಹುಡುಗಿಯನ್ನು ಪ್ರೀತಿಸಿದ ವ್ಯಕ್ತಿಯೇ ಇದಕ್ಕೆಲ್ಲಾ ಕಾರಣ ಎಂದು ಕೊಲೆಯಾದ ಸ್ಥಳದಲ್ಲಿ ಕಿರಾತಕಿ ಕಣ್ಣೀರಿಡುತ್ತಾಳೆ. ಮೇಲ್ಕೋಟಕ್ಕೆ ಇದನ್ನು ನಂಬಿದ ಪೊಲೀಸರು ಅನುಮಾನದ ಮೇಲೆ ಅಫ್ಜಲ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ನಂತರ ಕಾಲ್ ಡೇಟಾ ಸೇರಿದಂತೆ ಕೊಲೆ ನಡೆದ ಸ್ಥಳದಲ್ಲಿ ಸಿಗ್ನಲಿಂಗ್ ತಂತ್ರಜ್ಞಾನದ ಆಧಾರದಲ್ಲಿ ಬಾಲಕಿ ಆಕೆಯ ತಾಯಿ ಮತ್ತು ನರಸಿಂಹ ಓಡಾಡಿದ್ದನ್ನು ಅರಿತು ಬಂಧಿಸಿ ತಮ್ಮದೇ ಶೈಲಿಯಲ್ಲಿ ತನಿಖೆ ನಡೆಸಿದ್ದರಿಂದ ದೌರ್ಜನ್ಯ ಬೆಳಕಿಗೆ ಬಂದಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.