ಹರಿಯಾಣ/ಚಂಡೀಗಢ: ಲೈಂಗಿಕ ಶೋಷಣೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ವಿವಾದಿತ ಸ್ವಯಂಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂಗೆ ಕೊರೊನಾ ಸೋಂಕು ತಗುಲಿದೆ. ಸದ್ಯ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿರುವ ಈ ವ್ಯಕ್ತಿ ತನ್ನನ್ನು ನೋಡಿಕೊಳ್ಳಲು ಹನಿಪ್ರೀತ್ ಬರಬೇಕೆಂದು ಹಠ ಹಿಡಿದಿದ್ದ. ಅದರಂತೆ ಹನಿಪ್ರೀತ್ ಆತನ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಜೈಲಿನಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಜೂನ್ 6 ರಂದು ಆರೋಗ್ಯ ತಪಾಸಣೆಗಾಗಿ ಅವರನ್ನು ಗುರುಗ್ರಾಮದ ಮೇದಂತ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಕೊರೊನಾ ಟೆಸ್ಟ್ಗೆ ಒಳಪಡಿಸಿದಾಗ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ವೇಳೆ ಆಸ್ಪತ್ರೆಯಲ್ಲಿ ರಾಮ್ ರಹೀಂ ತಾನು ಮಗಳೆಂದು ಕರೆಯುವ ಹನಿಪ್ರೀತ್ ರನ್ನು ಭೇಟಿಯಾಗಬೇಕೆಂದು ಒತ್ತಾಯಿಸಿದ್ದು, ಈ ವಿಷಯ ತಿಳಿದ ಹನಿಪ್ರೀತ್ ಅವರು ರಾಮ್ ರಹೀಂ ಇದ್ದ ಆಸ್ಪತ್ರೆಗೆ ಬಂದಿದ್ದಾರೆ.
ಹನಿಪ್ರೀತ್ ಅವರು ಜೂನ್ 15 ರವರೆಗೆ ರಾಮ್ ರಹೀಮ್ ಅವರ ಅಟೆಂಡೆಂಟ್ ಆಗಿ ಆಸ್ಪತ್ರೆಯಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ. ಹನಿಪ್ರೀತ್ ಸೋಮವಾರ ಬೆಳಗ್ಗೆಯಿಂದ ರಾಮ್ ರಹೀಂ ಅವರನ್ನು ನೋಡಿಕೊಳ್ಳುತ್ತಿದ್ದಾರೆ. ರಾಮ್ ರಹೀಂ ಚೇತರಿಸಿಕೊಳ್ಳುವವರೆಗೂ ಅವರಿರುವ ವಾರ್ಡ್ನಲ್ಲಿಯೇ ಇದ್ದು ಅವರನ್ನು ಹನಿಪ್ರೀತ್ ನೋಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.
ರಾಮ್ ರಹೀಮ್-ಹನಿಪ್ರೀತ್ ಸಂಬಂಧ:
ಹರಿಯಾಣದ ಫತೇಹಾಬಾದ್ ಜಿಲ್ಲೆಯ ನಿವಾಸಿ ಪ್ರಿಯಾಂಕಾ ತನೇಜಾ 1996 ರಲ್ಲಿ ಮೊದಲು 11 ನೇ ತರಗತಿಗೆಂದು ಡೇರಾ ಕಾಲೇಜಿಗೆ ಬಂದಿದ್ದರು. ಸ್ವಲ್ಪ ಸಮಯದ ನಂತರ ಪ್ರಿಯಾಂಕಾ ತನೇಜಾ ಅವರಿಗೆ ರಾಮ್ ರಹೀಮ್ ಹನಿಪ್ರೀತ್ ಎಂಬ ಹೊಸ ಹೆಸರು ನೀಡಿದ್ದರು. ಕ್ರಮೇಣ, ಹನಿಪ್ರೀತ್ ಮತ್ತು ರಾಮ್ ರಹೀಮ್ ದಿನೇ ದಿನೆ ಹತ್ತಿರವಾದರು ಎನ್ನಲಾಗ್ತಿದೆ. ರಾಮ್ ರಹೀಮ್ ಹನಿಪ್ರೀತ್‌ರನ್ನು ತನ್ನ ಮಗಳೆಂದು ಹೇಳಿಕೊಳ್ಳುತ್ತಾನೆ.
ರಾಮ್ ರಹೀಂ ಬಗ್ಗೆ ಪ್ರತಿಕ್ರಿಯಿಸಿರುವ ಹನಿಪ್ರೀತ್, ಅವರು ತುಂಬಾ ಕರುಣಾಮಯಿ, ಡೇರಾದಿಂದ ಎಂದಿಗೂ ನನ್ನನ್ನು ಹೊರಗೆ ಕಳಿಸಿಲ್ಲ, ಅಲ್ಲಿಯೇ ನನ್ನ ಸಂಪೂರ್ಣ ವಿದ್ಯಾಭ್ಯಾಸ ನಡೆಯಿತು. ಅಲ್ಲಿ, ಅವರ ಹೆಸರಿನಲ್ಲಿ ಅನೇಕ ದೊಡ್ಡ ಉದ್ಯಮಗಳನ್ನು ಪ್ರಾರಂಭಿಸಲಾಯಿತು. ರಾಮ್ ರಹೀಂ ತನ್ನ ಪ್ರತಿಯೊಂದರಲ್ಲೂ ಹನಿಪ್ರೀತ್ ಳನ್ನು ಪಾಲುದಾರನನ್ನಾಗಿ ಮಾಡಿದ್ದಾನೆ. ಹನಿಪ್ರೀತ್ ಅವರ ಕುಟುಂಬವು ಡೇರಾದೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿತ್ತು ಎನ್ನಲಾಗ್ತಿದೆ.