ETV Bharat / bharat

ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಾತ್ರ ದೊಡ್ಡದು, ಇತರರ ಬಗ್ಗೆ ಅಪಪ್ರಚಾರ ಬೇಡ: ಅಮಿತ್ ಶಾ - ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅಮಿತ್ ಶಾ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್​ ಪಾತ್ರ ಹಿರಿದಿದೆ ಎಂಬುದನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ಒಪ್ಪಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಉಳಿದವರ ಹೋರಾಟದ ಬಗ್ಗೆ ಅಪ್ರಪಚಾರ ಮಾಡದಂತೆ ಎಂದು ಸಲಹೆ ನೀಡಿದ್ದಾರೆ.

home-minister-amit-shah
ಅಮಿತ್ ಶಾ
author img

By

Published : Jan 12, 2023, 7:23 AM IST

ನವದೆಹಲಿ: 'ಸ್ವಾತಂತ್ರ್ಯದ ಬಳಿಕ ದೇಶದ ಜನರಿಗೆ ಒಂದೇ ದೃಷ್ಟಿಕೋನದ ಸಿದ್ಧಾಂತವನ್ನು ಹೇರಲಾಯಿತು. ಕಾಂಗ್ರೆಸ್​ ಹೊರತಾಗಿ ಯಾರೊಬ್ಬರೂ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂಬ ಧೋರಣೆ ಜನರನ್ನು ತಪ್ಪು ದಾರಿಗೆ ತಂದಿತು. ಇದನ್ನು ತೀರಾ ಕುಶಲತೆಯಿಂದ ನಿರ್ವಹಣೆ ಮಾಡಲಾಗಿದೆ' ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿಪ್ರಾಯಪಟ್ಟರು.

ಲೇಖಕ ಸಂಜೀವ್ ಸನ್ಯಾಲ್ ವಿರಚಿತ "ರೆವಲ್ಯೂಷನರೀಸ್: ದಿ ಅದರ್ ಸ್ಟೋರಿ ಆಫ್ ಇಂಡಿಯಾ ವಿನ್ ಇಟ್ಸ್ ಫ್ರೀಡಂ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 'ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್​ ಪಾತ್ರ ಎಷ್ಟಿದೆಯೋ, ಅಷ್ಟೇ ಪ್ರಮಾಣದಲ್ಲಿ ಬೇರೆಯವರೂ ಹೋರಾಡಿದ್ದಾರೆ. ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ, ಅದನ್ನು ಮಾತ್ರ ಮರೆಮಾಡಿ ಸುಳ್ಳು ಪ್ರಚಾರ ಮಾಡುವುದು ಸರಿಯಲ್ಲ' ಎಂದರು.

'1947 ರಿಂದಲೂ ಈ ಬಗ್ಗೆ ತದೇಕಚಿತ್ತವಾಗಿ ಸುಳ್ಳು ಬಿತ್ತುತ್ತಲೇ ಬರಲಾಗಿದೆ. ಈ ಸುಳ್ಳನ್ನು ತಪ್ಪಾಗಿಸಲು ಲೇಖಕ ಸಂಜೀವ್​ ಸನ್ಯಾಲ್​ ಅವರು ತಮ್ಮ ದಿ ಅದರ್ ಸ್ಟೋರಿ ಆಫ್ ಇಂಡಿಯಾ ವಿನ್ ಇಟ್ಸ್ ಫ್ರೀಡಂನಲ್ಲಿ ಉಳಿದವರ ಹೋರಾಟಗಳ ಬಗ್ಗೆ ಹೇಳಿದ್ದಾರೆ. ದೇಶದ ಜನರು ಎಲ್ಲ ಸ್ವಾತಂತ್ರ್ಯವೀರರ ಬಗ್ಗೆ ತಿಳಿದುಕೊಳ್ಳಬೇಕು' ಎಂದು ಅಮಿತ್​ ಶಾ ಹೇಳಿದರು.

'ಸ್ವಾತಂತ್ರ್ಯ ಹೋರಾಟದಲ್ಲಿ ಅಹಿಂಸಾತ್ಮಕ ವಿಧಾನದ ಹೋರಾಟ ಯಾವುದೇ ಪಾತ್ರವನ್ನು ಹೊಂದಿಲ್ಲ ಅಥವಾ ಅದು ಇತಿಹಾಸದ ಭಾಗವೇ ಅಲ್ಲ ಎಂದು ನಾನು ಹೇಳುವುದಿಲ್ಲ. ಇದು ಇತಿಹಾಸದ ಒಂದು ಭಾಗವೇ ಸರಿ. ಕಾಂಗ್ರೆಸ್​ ನಡೆಸಿದ ಚಳವಳಿಯಲ್ಲದೇ, ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿದ್ದ ದೇಶಪ್ರೇಮದ ಬೆಂಕಿಯೂ ಇಂದಿನ ನಮ್ಮ ಸ್ವಾತಂತ್ರ್ಯಕ್ಕೆ ಕಾರಣವಾಗಿದೆ. ಇದನ್ನು ನನ್ನಂತೆಯೇ ನಂಬುವ ಜನರಿಗೆ ಮಾತ್ರ ಇದು ಪಥ್ಯವಾಗುತ್ತದೆ' ಎಂದು ಶಾ ತಿಳಿಸಿದರು.

'ಒಂದು ಸಂಘಟನೆ, ಕೆಲವೇ ಜನಗಳಿಂದ ಮಾತ್ರ ಸ್ವಾತಂತ್ರ್ಯ ಸಾಧ್ಯವಾಗಿದೆ ಎಂಬುದು ಸುಳ್ಳು. ಕಾಂಗ್ರೆಸ್​ ಚಳವಳಿಯಂತೆಯೇ ಅದಕ್ಕೆ ಸಮಾನಾಂತರವಾಗಿ ನಡೆಸಲಾದ 'ಉಳಿದವರ ಹೋರಾಟ'ಗಳೂ ಪ್ರಾಮುಖ್ಯತೆ ಹೊಂದಿವೆ. ಇಲ್ಲವಾದಲ್ಲಿ ನಾವು ಇಂದಿಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಲೇಬೇಕಿತ್ತು' ಎಂದು ಗೃಹ ಸಚಿವರು ಅಭಿಪ್ರಾಯಪಟ್ಟರು.

'ಸಂಜೀವ್​ ಸನ್ಯಾಲ್ ಅವರ ಪುಸ್ತಕವು ಮುಖ್ಯವಾಹಿನಿಯಿಂದ ಹಿಂದೆ ಸರಿಸಲಾದ, ಇತಿಹಾಸದ ಭೂಗರ್ಭದಲ್ಲಿ ಹೂತು ಹೋದ ಭಗತ್ ಸಿಂಗ್, ಚಂದ್ರ ಶೇಖರ್ ಆಜಾದ್, ವಿ.ಡಿ.ಸಾವರ್ಕರ್, ಅರಬಿಂದೋ ಘೋಷ್, ರಾಶ್‌ಬಿಹಾರಿ ಬೋಸ್, ಬಾಘಾ ಜತಿನ್, ಸುಭಾಷ್ ಚಂದ್ರ ಬೋಸ್ ಅವರಂತಹ ಕ್ರಾಂತಿಕಾರಿಗಳ ಕಥೆಯನ್ನು ಸವಿಸ್ತಾರವಾಗಿ ವಿವರಿಸುತ್ತದೆ. ಇತರರ ಹೋರಾಟದ ಬಗ್ಗೆ ಅಚ್ಚುಕಟ್ಟಾಗಿ ಪುಸ್ತಕ ವಿವರಿಸಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಪಾತ್ರವೇನು ಎಂದು ಕಾಂಗ್ರೆಸ್​ ಪದೇ ಪದೆ ಪ್ರಶ್ನಿಸುತ್ತಲೇ ಇರುತ್ತದೆ. ಇದಕ್ಕೆ ಬಿಜೆಪಿ ಕೂಡ ಅಸಮಾಧಾನ ವ್ಯಕ್ತಪಡಿಸುತ್ತಲೇ ಇದೆ. ಕಾಂಗ್ರೆಸ್​ನಿಂದ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ ಎಂದು ಬಿಜೆಪಿಯ ವಾದವಾಗಿದೆ. ಇದರ ಭಾಗವಾಗಿ ನಡೆಯುತ್ತಿರುವ ವಾದ ಪ್ರತಿವಾದಗಳು ಬಿಸಿಯೇರಿಸಿವೆ. ಇದು ಪುಸ್ತಕ ಸಮಾರಂಭದಲ್ಲೂ ಪ್ರತಿಧ್ವನಿಸಿದೆ.

ಇದನ್ನೂ ಓದಿ: 300 ಕೋಟಿ ವಂಚಿಸಿದ ಚೀನಾ ಸಾಲದ ಆ್ಯಪ್​ ಗ್ಯಾಂಗ್ ಭೇದಿಸಿದ ಉತ್ತರಾಖಂಡ ಪೊಲೀಸರು: ಕಿಂಗ್​​ಪಿನ್ ಅಂಕುರ್ ಧಿಂಗ್ರಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.