ETV Bharat / bharat

ಮನೆಯೊಂದು ರಾಜ್ಯ ಎರಡು.. ಒಂದೇ ನಿವಾಸದಲ್ಲಿ ಅರ್ಧ ಮಹಾರಾಷ್ಟ್ರಕ್ಕೆ, ಇನ್ನರ್ಧ ಈ ರಾಜ್ಯಕ್ಕೆ!

ಚಂದ್ರಾಪುರ ಜಿಲ್ಲೆಯ ಮಹಾರಾಜಗುಡ ಗ್ರಾಮದಲ್ಲಿ ನೆಲೆಸಿರುವ ಕುಟುಂಬವೊಂದರ ಮನೆ ಮಹಾರಾಷ್ಟ್ರ ಮತ್ತು ತೆಲಂಗಾಣ ಎರಡೂ ರಾಜ್ಯಕ್ಕೆ ಅರ್ಧರ್ಧ ಹಂಚಿಕೆಯಾಗಿದೆ. ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ 4 ತೆಲಂಗಾಣ ರಾಜ್ಯಕ್ಕೆ ಸೇರಿವೆ.

home divided in maharashtra and telangana two states
ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಕ್ಕೆ ಅರ್ಧರ್ಧ ಹಂಚಿಕೆಯಾದ ಮನೆ
author img

By

Published : Dec 15, 2022, 10:41 AM IST

ಹೈದರಾಬಾದ್(ತೆಲಂಗಾಣ)​: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಗಡಿ ವಿವಾದ ಸದ್ಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿದೆ. ಈ ಬೆನ್ನಲ್ಲೇ ಅಚ್ಚರಿಯ ಘಟನೆಯೊಂದು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಮಹಾರಾಜಗುಡ ಗ್ರಾಮವು ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯಗಳ ಗಡಿಯಲ್ಲಿದೆ. ಈ ಹಳ್ಳಿಯಲ್ಲಿರುವ ವಾಸವಾಗಿರುವ ಕುಟುಂಬದ ಮನೆ ಆರ್ಧ ಮಹಾರಾಷ್ಟ್ರಕ್ಕೆ ಮತ್ತು ಉಳಿದ ಆರ್ಧ ತೆಲಂಗಾಣ ರಾಜ್ಯದ ನಡುವೆ ಹಂಚಿಕೆಯಾಗಿದೆ. 'ನಮ್ಮ ಕುಟುಂಬದಲ್ಲಿ 12-13 ಮಂದಿ ವಾಸಿಸುತ್ತಿದ್ದೇವೆ, ಮನೆಯ 4 ಕೊಠಡಿಗಳು ಮಹಾರಾಷ್ಟ್ರದಲ್ಲಿದ್ದರೆ, 4 ತೆಲಂಗಾಣ ರಾಜ್ಯಕ್ಕೆ ಸೇರಿವೆ. ನನ್ನ ಅಡುಗೆ ಮನೆ ಸಹ ತೆಲಂಗಾಣ ರಾಜ್ಯಕ್ಕೆ ಸ್ಥಳಾಂತರಗೊಂಡಿದೆ' ಎನ್ನುತ್ತಾರೆ ಮಾಲೀಕ ಉತ್ತಮ್ ಪವಾರ್.

ಇದನ್ನೂ ಓದಿ: ಗಡಿ ವಿವಾದ... ಸಚಿವರ ಸಮಿತಿ ರಚಿಸಿಕೊಳ್ಳುವಂತೆ ಅಮಿತ್ ಶಾ ಸೂಚನೆ: ಬೊಮ್ಮಾಯಿ

'1969ರಲ್ಲಿ ಗಡಿ ಸಮೀಕ್ಷೆ ನಡೆಸಿದಾಗ ನಮ್ಮ ಮನೆಯ ಅರ್ಧದಷ್ಟು ಭಾಗ ಮಹಾರಾಷ್ಟ್ರದಲ್ಲಿ ಮತ್ತು ಅರ್ಧ ತೆಲಂಗಾಣಕ್ಕೆ ಸೇರಿದೆ ಎಂದು ಹೇಳಲಾಗಿತ್ತು. ನಾವು ಇದುವರೆಗೂ ಯಾವುದೇ ಸಮಸ್ಯೆಗಳನ್ನು ಎದುರಿಸಿಲ್ಲ. ಎರಡೂ ರಾಜ್ಯಗಳ ಗ್ರಾಮ ಪಂಚಾಯತ್​ಗಳಿಗೆ ತೆರಿಗೆ ಪಾವತಿಸುತ್ತಿದ್ದೇವೆ ಮತ್ತು ತೆಲಂಗಾಣ ಸರ್ಕಾರದ ಯೋಜನೆಗಳ ಅಡಿಯಲ್ಲಿ ಹೆಚ್ಚಿನ ಪ್ರಯೋಜನಗಳನ್ನು ಪಡೆದುಕೊಂಡಿದ್ದೇವೆ' ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.