ನವದೆಹಲಿ: ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾದ ಲಘು ಯುದ್ಧ ವಿಮಾನ (ಎಲ್‌ಸಿಎ) ನೌಕಾಪಡೆ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ತನ್ನ ಚೊಚ್ಚಲ ಲ್ಯಾಂಡಿಂಗ್ ಮಾಡಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಈ ಘಟನೆ ಭಾರತೀಯ ನೌಕಾಪಡೆಯು 'ಐತಿಹಾಸಿಕ ಮೈಲಿಗಲ್ಲು' ಎಂದು ಬಣ್ಣಿಸಿದೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆಯಾಗಿ ದೇಶದ ಮೊದಲ ಸ್ವದೇಶಿ ವಿಮಾನವು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಮೊದಲ ಹೆಜ್ಜೆಯನ್ನು ಇರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್: ಐಎನ್‌ಎಸ್ ವಿಕ್ರಾಂತ್‌ನಿಂದ ಎಲ್‌ಸಿಎ ಮೂಲ ಮಾದರಿಯ ಯಶಸ್ವಿ ಲ್ಯಾಂಡಿಂಗ್ ಮತ್ತು ಟೇಕ್ - ಆಫ್ ಆಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿಂದ ಭಾರತೀಯ ನೌಕಾಪಡೆಗಾಗಿ ಮಹತ್ವಾಕಾಂಕ್ಷೆಯ ಡಬಲ್ - ಎಂಜಿನ್ ಡೆಕ್-ಆಧಾರಿತ ಯುದ್ಧ ವಿಮಾನದ ಅಭಿವೃದ್ಧಿ ಮತ್ತು ತಯಾರಿಕೆಗೆ ವಿನೂತವಾದ ದಾರಿ ಮಾಡಿಕೊಟ್ಟಿದೆ. "ನೌಕಾ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್ ಹಡಗಿನಲ್ಲಿ ಎಲ್‌ಸಿಎ (ನೌಕಾಪಡೆ) ಇಳಿಯುತ್ತಿದ್ದಂತೆ ಭಾರತೀಯ ನೌಕಾಪಡೆಯು ಆತ್ಮ ನಿರ್ಭರ್ ಭಾರತ್ ಕಡೆಗೆ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ" ಎಂದು ನೌಕಾಪಡೆ ಹೇಳಿಕೆ ನೀಡಿದೆ.
ಸ್ವದೇಶಿ ವಿಮಾನವಾಹಕ ನೌಕೆಗಳ ವಿನ್ಯಾಸ: ಸ್ವದೇಶಿ ಯುದ್ಧ ವಿಮಾನಗಳೊಂದಿಗೆ ಸ್ವದೇಶಿ ವಿಮಾನವಾಹಕ ನೌಕೆಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಭಾರತದ ಸಾಮರ್ಥ್ಯವನ್ನು ಲ್ಯಾಂಡಿಂಗ್ ಮಾಡುವ ಪ್ರದರ್ಶನ ನೀಡಿದೆ ಎಂದು ಹೇಳಿದೆ. ಸೆಪ್ಟೆಂಬರ್‌ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್ ವಿಕ್ರಾಂತ್ ಅನ್ನು ನಿಯೋಜಿಸಿದರು. ಇದು 40,000 ಟನ್‌ಗಳಿಗಿಂತ ಹೆಚ್ಚಿನ ಯುದ್ಧವಿಮಾನ ನೌಕೆಗಳನ್ನು ತಯಾರಿಸುವ ಸಾಮರ್ಥ್ಯ ಇರುವ ರಾಷ್ಟ್ರಗಳ ಗುಂಪಿಗೆ ಭಾರತವನ್ನು ಸೇರುವಂತೆ ಮಾಡಿದೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ವಿಮಾನವಾಹಕ ನೌಕೆಯು ಪಾತ್ರ ವಹಿಸುತ್ತದೆ ಎಂದು ನೌಕಾಪಡೆ ತಿಳಿಸಿತ್ತು.
ಸ್ವದೇಶಿ ವಿಮಾನವಾಹಕ ನೌಕೆಯ ಲ್ಯಾಂಡಿಂಗ್ ಯಶಸ್ವಿ: ನೌಕಾಪಡೆಯ ಪೈಲಟ್‌ಗಳು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಮಿಗ್ - 29ಕೆಯನ್ನು ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡುವ ಮೂಲಕ ಸ್ವದೇಶಿ ವಿಮಾನವಾಹಕ ನೌಕೆಯನ್ನು ಕಾರ್ಯಗತಗೊಳಿಸುವತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ ಎಂದರು. ಎಲ್‌ಸಿಎ ಮೂಲ ಮಾದರಿ ಮತ್ತು ಮಿಗ್-29ಕೆ ವಿಮಾನದ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಸಂಬಂಧ ಹಾರಾಟದ ಯಶಸ್ವಿ ಪ್ರಯೋಗಗಳನ್ನು ನಡೆಸಲಾಯಿತು. ಭಾರತೀಯ ನೌಕಾಪಡೆಯು ಪ್ರಸ್ತುತ 40 ಮಿಗ್-29ಕೆ ಜೆಟ್‌ಗಳನ್ನು ನಿರ್ವಹಿಸುತ್ತಿದೆ. ಐಎನ್‌ಎಸ್ ವಿಕ್ರಾಂತ್‌ನ ವಾಯು ವಿಭಾಗವು 30 ಮಿಗ್-29ಕೆ ಫೈಟರ್ ಜೆಟ್‌ಗಳನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
26 ಡೆಕ್ ಆಧಾರಿತ ವಿಮಾನಗಳ ಖರೀದಿ ಪ್ರಕ್ರಿಯೆ: ನೌಕಾಪಡೆಯು ಐಎನ್‌ಎಸ್ ವಿಕ್ರಾಂತ್‌ಗಾಗಿ 26 ಡೆಕ್ ಆಧಾರಿತ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ. ನೌಕಾಪಡೆಯು ಈಗಾಗಲೇ ಬೋಯಿಂಗ್‌ನ ಎಫ್/ಎ-18 ಸೂಪರ್ ಹಾರ್ನೆಟ್ ಮತ್ತು ಫ್ರೆಂಚ್ ಏರೋಸ್ಪೇಸ್ ಮೇಜರ್ ಡಸಾಲ್ಟ್ ಏವಿಯೇಷನ್‌ನ ರಫೇಲ್ ಎಂ ವಿಮಾನಗಳನ್ನು ಖರೀದಿ ಹಿಂದೇಟು ಹಾಕಿದೆ. ಐಎನ್‌ಎಸ್ ವಿಕ್ರಾಂತ್ 2,300 ಕ್ಕೂ ಹೆಚ್ಚು ಕಂಪಾರ್ಟ್‌ಮೆಂಟ್‌ಗಳನ್ನು ಹೊಂದಿದೆ. ಮಹಿಳಾ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಲು ವಿಶೇಷ ಕ್ಯಾಬಿನ್‌ಗಳನ್ನು ಒಳಗೊಂಡಂತೆ ಸುಮಾರು 1,700 ಸಿಬ್ಬಂದಿಗಾಗಿ ವಿನ್ಯಾಸಗೊಳಿಸಲಾಗಿದೆ. ಇದು 262 ಮೀಟರ್ ಉದ್ದ, 62 ಮೀಟರ್ ಅಗಲ ಮತ್ತು 59 ಮೀಟರ್ ಎತ್ತರವನ್ನು ಹೊಂದಿದೆ. ಇದರ ನಿರ್ಮಾಣವು 2009 ರಲ್ಲಿ ಪ್ರಾರಂಭವಾಗಿದೆ.